16.3 ಲಕ್ಷ ಟನ್ ಪೆಟ್ರೋಲ್ ಮಾರಾಟ
ನವದೆಹಲಿ : ಪ್ರಸಕ್ತ ವರ್ಷದ ಜುಲೈ ತಿಂಗಳ ಮೊದಲಾರ್ಧದಲ್ಲಿ (1ರಿಂದ 15) ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳು 16.3 ಲಕ್ಷ ಟನ್ ಪೆಟ್ರೋಲ್ ಮಾರಾಟ ಮಾಡಿವೆ.ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಗಳು 13.3 ಲಕ್ಷ ಟನ್ ಪೆಟ್ರೋಲ್ ಮಾರಾಟ ಮಾಡಿದ್ದವು. ಇದಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ಮಾರಾಟವು ಶೇ 22.9ರಷ್ಟು ಹೆಚ್ಚಳವಾಗಿದೆ ಎಂದು ಅಂಕಿ–ಅಂಶಗಳು

ನವದೆಹಲಿ : ಪ್ರಸಕ್ತ ವರ್ಷದ ಜುಲೈ ತಿಂಗಳ ಮೊದಲಾರ್ಧದಲ್ಲಿ (1ರಿಂದ 15) ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳು 16.3 ಲಕ್ಷ ಟನ್ ಪೆಟ್ರೋಲ್ ಮಾರಾಟ ಮಾಡಿವೆ.ಕಳೆದ ವರ್ಷದ ಇದೇ ಅವಧಿಯಲ್ಲಿ ಕಂಪನಿಗಳು 13.3 ಲಕ್ಷ ಟನ್ ಪೆಟ್ರೋಲ್ ಮಾರಾಟ ಮಾಡಿದ್ದವು. ಇದಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ಮಾರಾಟವು ಶೇ 22.9ರಷ್ಟು ಹೆಚ್ಚಳವಾಗಿದೆ ಎಂದು ಅಂಕಿ–ಅಂಶಗಳು ತಿಳಿಸಿವೆ.ಡೀಸೆಲ್ ಮಾರಾಟವು 28.7 ಲಕ್ಷ ಟನ್ನಿಂದ 34.6 ಲಕ್ಷ ಟನ್ಗೆ ಏರಿಕೆಯಾಗಿದ್ದು, ಶೇ 20.9ರಷ್ಟು ಹೆಚ್ಚಳವಾಗಿದೆ. ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ (ಬಿಪಿಸಿಎಲ್) ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ (ಎಚ್ಪಿಸಿಎಲ್) ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪನಿಗಳಾಗಿವೆ.ಸಾಮಾನ್ಯವಾಗಿ ಮುಂಗಾರು ಅವಧಿಯಲ್ಲಿ ಮಳೆ ಸುರಿಯುವುದರಿಂದ ಕೃಷಿಗೆ ನೀರುಣಿಸಲು ಪಂಪ್ಗಳನ್ನು ಹೆಚ್ಚಾಗಿ ಬಳಸುವುದಿಲ್ಲ. ಅಲ್ಲದೆ, ವಾಹನ ಸಂಚಾರ ಕಡಿಮೆ ಇರುತ್ತದೆ. ಆದರೆ, ಈ ವರ್ಷ ಮುಂಗಾರು ವಿಳಂಬ ಆಗಿರುವುದರಿಂದ ರೈತರು ಪಂಪ್ಗಳಿಗೆ ಡೀಸೆಲ್ ಖರೀದಿಸುತ್ತಿದ್ದಾರೆ. ಇದು ಇಂಧನ ಮಾರಾಟ ಹೆಚ್ಚಳಕ್ಕೆ ಕಾರಣ ಎಂದು ತಿಳಿಸಿದೆ.ವಿಮಾನ ಇಂಧನ ಮಾರಾಟವು (ಎಟಿಎಫ್) ಶೇ 0.7ರಷ್ಟು ಹೆಚ್ಚಳವಾಗಿ, 3.15 ಲಕ್ಷ ಟನ್ ಆಗಿದೆ. ಪಶ್ಚಿಮ ಏಷ್ಯಾದ ಬಿಕ್ಕಟ್ಟಿನಿಂದ ಉಂಟಾದ ಸಾಗಣೆಯಲ್ಲಿನ ಅಡಚಣೆಯಿಂದ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಮಾರಾಟವು ಶೇ 17.5ರಷ್ಟು ಇಳಿಕೆಯಾಗಿದ್ದು, 11.4 ಲಕ್ಷ ಟನ್ ಆಗಿದೆ ಎಂದು ತಿಳಿಸಿದೆ.