ರೂಬರೂಹ್: ಮೂಗಿನ ತುದಿಯ ನೇರಕ್ಕ ಎಲ್ಲವೂ ಸೀದಾಸೀದಾನೆ ಇರ್ತದ...
ಕಳೆದ ವಾರ ನಾವು ಅಮೀರ್ ಖುಸ್ರೊ ಅವರ ಛಾಪ್ ತಿಲಕ್ ಸಬ್ ಛೀನಲಿರೆ ಮೊಸೆ ನೈನಾ ಲಗೈಕೆ, ಹಾಡಿನ ಬಗ್ಗೆ ಮಾತಾಡಿದ್ವಿ. ಆಗ ಭಾಳ ಮಂದಿ ಈ ಭಜನ್ ಯಾವ ಕಾಲದ್ದು ಅಂತ ಕೇಳಿದ್ರು. 750 ವರ್ಷ ಹಳತು ಅದು. ಆ ಜಮಾನಾದ ಹಾಡು ಕೆಲವರು ಹುಡುಕಿಕೊಂಡು ಕೇಳಿದ್ರಂತ. ನೋಡ್ರಿ ಜಮಾನಾ ಮಾತು ಬಂದಾಗ, ಒಂದು ಇದಕ್ಕೇ ಸಂಬಂಧಿಸಿದ್ಹಂಗ ಅಂದ್ರ ವಕ್ತ್ ಬಗೆಗಿನ ಹಾಡಿನ ಬಗ್ಗೆ ಇವೊತ್ತು ಮ

ಕಳೆದ ವಾರ ನಾವು ಅಮೀರ್ ಖುಸ್ರೊ ಅವರ ಛಾಪ್ ತಿಲಕ್ ಸಬ್ ಛೀನಲಿರೆ ಮೊಸೆ ನೈನಾ ಲಗೈಕೆ, ಹಾಡಿನ ಬಗ್ಗೆ ಮಾತಾಡಿದ್ವಿ. ಆಗ ಭಾಳ ಮಂದಿ ಈ ಭಜನ್ ಯಾವ ಕಾಲದ್ದು ಅಂತ ಕೇಳಿದ್ರು. 750 ವರ್ಷ ಹಳತು ಅದು. ಆ ಜಮಾನಾದ ಹಾಡು ಕೆಲವರು ಹುಡುಕಿಕೊಂಡು ಕೇಳಿದ್ರಂತ. ನೋಡ್ರಿ ಜಮಾನಾ ಮಾತು ಬಂದಾಗ, ಒಂದು ಇದಕ್ಕೇ ಸಂಬಂಧಿಸಿದ್ಹಂಗ ಅಂದ್ರ ವಕ್ತ್ ಬಗೆಗಿನ ಹಾಡಿನ ಬಗ್ಗೆ ಇವೊತ್ತು ಮಾತಾಡೂನಂತ. ಇದು 1989ರ ಸಮಯ ಇರಬಹುದು. ಆಗ ನಬೀಲ್ ಅಂತ ಒಂದು ಸಂಗ್ರಹ ಬಂದಿತ್ತು. ಪಂಕಜ್ ಉದಾಸ್ ಹಾಡಿರುವ ಅಲ್ಬಮ್ ಅದು. ಅದರೊಳಗ ಈ ಹಾಡಿತ್ತು.ವಕ್ತ್ ಸೆ ವಕ್ತ್ ಕಿ ಕ್ಯಾ ಶಿಕಾಯತ್ ಕರೆ..ವಕ್ತ್ ಹಿ ನಾ ರಹಾ ವಕ್ತ್ ಕಿ ಬಾತ್ ಹೈಉಸ್ನೆ ದೇಖಾ ಮುಝೆ, ಉಸ್ನೆ ಚಾಹಾ ಮುಝೆ,ಉಸ್ನೆ ಠುಕರಾದಿಯಾ, ವಕ್ತ್ ಕಿ ಬಾತ್ ಹೈಹಿಂಗ ಏನೇ ಇದ್ರು, ಅದರೊಳಗ ತಪ್ಪು ನಮ್ಮದು ಯಾರದೂ ಇರೂದಿಲ್ಲ. ಇದೊಂದು ನಮೂನಿ, ಎಲ್ಲದಕ್ಕೂ ಸಮಯವೇ ಕಾರಣ. ನಾನೂ ನನ್ನ ಜಾಗದೊಳಗ ಬರೊಬ್ಬರಿ ಇದ್ದೆ. ನೀನೂನು. ಅವರೂನು, ಇವರೂನು.. ಎಲ್ಲಾರೂ ತಮ್ಮ ತಮ್ಮ ಜಾಗದೊಳಗ, ತಮ್ಮ ದೃಷ್ಟಿಕೋನದಿಂದ, ಮೂಗಿನ ತುದಿಯ ನೇರಕ್ಕ ಎಲ್ಲವೂ ಸೀದಾಸೀದಾನೆ ಇರ್ತದ.ರೂಬರೂಹ್: ಒಂದಿನಿತು ಪ್ರೀತಿ ಸಿಗಲಿ ಅಂತ ಹಪಹಪಿಸೂದು ಸಹಜ, ಆದ್ರ...ರೂಬರೂಹ್: ಬೇಕಾದಷ್ಟೇ ಪ್ರೀತಿ ಕೊಡಬೇಕು, ಅದಕ್ಕಿಂತ ಹೆಚ್ಗಿ ಹಂಚಿ ಧಾರಾಳಿಯಾದ್ರ...ಆದ್ರ ಖೋಡಿ... ಟೈಮ್ ಒಂದೇ ಕೆಟ್ಟದ್ದು. ಏನೇನರೆ ಮಾಡ್ತದಪಾ.. ಎಲ್ಲರ ಜೀವನದೊಳಗೂ. ಇಷ್ಟಕ್ಕೂ ಟೈಮಂದ್ರೇನು? ಎರಡು ಘಟನೆಗಳ ನಡುವಿನ ಅವಧಿಯಾ? ಟಿಕ್ಟಿಕ್ ಟಿಕ್ ಅಂತ ಓಡ್ತಿರ್ತದಲ್ಲ.. ಮುಳ್ಳು ಆ ಧಾವಂತನಾ? ಈ ಮುಳ್ಳು ನೋಡಿದಾಗಲೆಲ್ಲ ನನಗ ಬೀದರ್ ನೆನಪಾಗ್ತದ.ಅಲ್ಲಿ ನಮ್ಮನಿಗೆ ರತ್ನಮ್ಮ ಅಂತ ಕೆಲಸದಕಿ ಬರ್ತಿದ್ಲು. ಅಕಿ ಬರೂತ್ಲೆ ಅಕಿನ್ನ ಗಂಡನೂ ಬರ್ತಿದ್ದ. ತಡಾ ಆಯ್ತು ಮನಿಗೆ ನಡಿ ಅಂತ. ಅವಾಗೆಲ್ಲ ಅಕಿ ನಮ್ಮನಿ ವಾಚಿಗೆ ಬೈತಿದ್ಲು. ಈ ವ್ಯಾಳಿಗೇನು ನಾಚಕಿಲ್ಲ. ಶರ್ಮಿಲ್ಲ..ಓಡೇ ಓಡ್ತದೆ ಅಮ್ಮಾ.. ಅಂತ ಅನ್ಕೊಂತ ಚಾ ಹೀರ್ತಿದ್ಲು.ನಮ್ಮಮ್ಮಗರೆ ಟೈಮನ್ನೂದು ಅದೇ ಆಗ ನಡಿಯಾಕ ಕಲ್ತ ಕೂಸಿನ ಕೈಗೆ ಮೂರುಗಾಲಿ ಬಂಡಿ ಕೊಟ್ಟಂಗ... ಸರಸರ ಸರ ಸರಿಯೂದೆ. ಎಲ್ಲಿ ಒಂದ್ನಿಮಿಷ ಕಳದ್ರೂ ಇನ್ನೆಲ್ಲೋ ತಡ ಆಗ್ತದ ಅನಿಸ್ತಿತ್ತು.ಬೆಳಗ್ಗೆ ನಮಗ ರೆಡಿ ಮಾಡಿ, ತಾ ರೆಡಿ ಆಗಿ, ಸಾಲೀಗೆ ಹೋಗ್ತಿದ್ಲು. ಬರೂದ್ರೊಳಗ ನಮ್ಮಪ್ಪಾಜಿ ಆಫೀಸಿಗೆ ಹೋಗಿ ಬಂದಿರ್ತಿದ್ರು. ಅಪ್ಪಾಜಿನ ನಮಗ ಹಾಲು, ಹಣ್ಣು ಕೊಡೋರು. ನಾವು ನಮ್ಮನಿ ಗೇಟ್ ಮುಂದ ಒಂದು ಕಟ್ಟಿಮನಿ ಇತ್ತು. ಆ ಕಟ್ಟಿ ಮ್ಯಾಲೆ ಕುಂತು ನಮ್ಮಮ್ಮ ಬರೂದು ಕಾಯ್ತಿದ್ವಿ.ನಮ್ಮಜ್ಜಿ, ಅವರೂ ಟೀಚರ್ ಆಗಿದ್ರು. ವಸ್ತ್ರದ ಅಕ್ಕೋರು. ಅಕಿಗೆ ನನ್ನ ಕಣ್ಣಂದ್ರ ಭಾಳ ಪ್ರೀತಿ. ಆವಾಗ ಎವಿ ಇನ್ನಾ ಉದ್ದ ಇದ್ದ ಕಾಲದಾಗ, ನಿನ್ನೆವಿ ನೋಡು ಎಷ್ಟುದ್ದದಾವ... ನಿಮ್ಮಮ್ಮನ ದಾರಿ ಕಾಯ್ದುಕಾಯ್ದು ಅಷ್ಟುದ್ದ ಆಗ್ಯಾವ ಅಂತಿದ್ಲು.ರೂಬರೂಹ್: ನನ್ನ ಕನಸಿನ ಕಂಗಳಲ್ಲಿ ಕೊಳವೊಂದು ಸೃಷ್ಟಿಯಾದಾಗ...ರೂಬರೂಹ್ ಪಾಡ್ಕಾಸ್ಟ್: ಪ್ರತಿ ಅಪೂರ್ಣ ಪ್ರೇಮಕಥೆಯೂ ನಿಜವಾದ ಪ್ರೇಮ ಕಥೆಅಮ್ಮ ಬಂದಕ್ಕಿನೆ ಹಿಂಗ ಚಾ ಮಾಡ್ಕೊಂಡ, ತಾ ಈಟು ಹೀರ್ಕೊಂತ, ರತ್ನಮ್ಮಗ ಈಟು ಕೊಟ್ಟು, ನಿರಾಳ ಆಗ್ತಿದ್ಲು. ಆಮೇಲೆ ನಮಗ ಓದಸೂದು, ಸಂಜಿ ಅಡುಗೆ ಹಿಂಗ, ಸಮಯ ಸರದೇ ಹೋಗ್ತಿತ್ತು.ಅದೇ ಹೇಳೇನಲ್ಲ... ನಾವು, ನಮ್ಮದು ಅಂತೇನಿರೂದಿಲ್ಲ. ಆ ಟೈಮು.. ಅದೇ ಖೋಡಿಯದ. ಯಾವಾಗ ಎಷ್ಟು ಕೊಡಬೇಕು, ಯಾರಿಗೆ ಎಷ್ಟು ಕೊಡಬೇಕು ಅನ್ನೂದು ಅದರ ಕೈಯ್ಯಾಗ ಇದ್ದಂಗೆ ಮಾಡ್ತದ.ತಡೀರಿ, ನಾವು ಮಾತಿಗೆ ನಿಂತ್ರ ಮತ್ತೆಲ್ಲೆಲ್ಲೋ ಹಾರಾಡಿ ಬರ್ತೀವಿ. ಮುಂದಿನ ಸಾಲು ಅದಾವಲ್ಲ, ಉಸ್ನೆ ದೇಖಾ ಮುಝೆ, ಉಸ್ನೇ ಚಾಹಾ ಮುಝೆ, ಉಸ್ನೆ ಠುಕರಾದಿಯಾ ವಕ್ತ್ ಕಿ ಬಾತ್ ಹೈ ಅಂತಾರ. ಅಂದ್ರ ನೋಡಿದ್ರು, ಇಷ್ಟ ಪಟ್ರು, ಮತ್ತ ತಿರಸ್ಕರಿಸಿದರು ಇದೆಲ್ಲವೂ ವಕ್ತದ್ದೇ ಕಮಾಲು ಅಂತಾರವರು. ಖರೇನೆ, ಪ್ರೀತಿನೂ ಒಂದು ಎಕ್ಸ್ಪೈರಿ ಡೇಟ್ ಇಟ್ಕೊಂಡೇ ಬಂದಿರ್ತದ. ಅಕಾರಣ ಹುಟ್ಟುಹಂಗ, ನೂರು ಕಾರಣ ಇಟ್ಕೊಂಡು ಸಾಯ್ತಿರ್ತದ. ಅಥವಾ ಪ್ರೀತಿ ಸತ್ತಿದ್ದಕ್ಕ ಸಮರ್ಥಿಸಾಕ ನೂರು ಕಾರಣ ಸಿಗ್ತಾವ ಅನ್ರಿ. ನಮ್ಮ ಇಷ್ಟಾನಿಷ್ಟಗಳಿಗೂ ಸಮಯವನ್ನೇ ದೂರುಕೊಂಡು ಹೋಗುವ ಈ ಹಾಡು, ಆಗಾಗ ಆತ್ಮಸ್ಥೈರ್ಯನೂ ನೀಡ್ತದ. ಎಂಥದ್ದೇ ದುರಿತ ಸಮಯವಿರಲಿ, ಕಳದು ಹೋಗ್ತದ. ನಮಗೇನು ಅನಸ್ತದ ಅಂದ್ರ ಸಂಕಟದ ಸಮಯ ಬಂದಾಗ ಗಂಟೆಯ ಮುಳ್ಳೂ ಸರದ್ಹಂಗ ಸಾವಕಾಶ ಸರೀತದ. ಸುಖ ಸಂಭ್ರಮದ ಸಮಯ ಇದ್ದಾಗ ಸೆಕೆಂಡಿನ ಮುಳ್ಳಿನ್ಹಂಗ ದಾಟಿ ಹೋಗ್ತದ ಅಂತ. ಇಲ್ಲಾಂದ್ರ ಕೆಕೆ ಹಾಡು ಹೇಳ್ಕೊಂತ, ವೇದಿಕೆಯಿಂದಲ್ಲ, ಜೀವನದಿಂದಲೇ ನಿರ್ಗಮಿಸಿದ. ಭಾಷಣ ಮಾಡ್ಕೊಂತ, ಮಾಡ್ಕೊಂತ ನಮ್ಮ ಕಲಾಮ್ ಸಾಹೇಬ್ರು ಕಾಲನ ಕರೆಗೆ ಓಗೊಟ್ಟು ಹೋಗೇಬಿಟ್ರು. ಇನ್ನೂ ಕನಸಿನ ಮೆರವಣಿಗಿ ಮುಗಿಯೂ ಮೊದಲೇ ಯಾಕ ದಿವ್ಯಾಭಾರತಿ ಟೈಮ್ ಮುಗೀತು? ಇನ್ನೊಂದು ವಿಭಿನ್ನ ಸಿನಿಮಾ ಕೊಡ್ತಾರ ಅಂತ ಸಂಚಾರಿ ವಿಜಯ್ ಬಗ್ಗೆ ನಿರೀಕ್ಷೆ ಇಟ್ಕೊಂಡಿದ್ರ ಅವರು ಹಾದಿಯೊಳಗ ತಮ್ಮ ಪಯಣ ಮುಗಿಸಿದ್ರು. ಯಾಕ? ಅವರಿಗೆ ಗೊತ್ತರೆ ಆಯ್ತೇನು.. ಅದೇ ಅವರ ಕೊನಿ ಪ್ರಯಾಣ ಅಂತ? ರೂಬರೂಹ್: ಹದಿಹರೆಯದ ಪ್ರೀತಿಯೊಳಗ ನೋಡಿದಲ್ಲೆಲ್ಲ ಪ್ರಿಯತಮೆಯ ಕಣ್ಣು ಕಂಡಂಗ...ರೂಬರೂಹ್ | ಮೇರೆ ರಷ್ಕ್ ಎ ಖಮರ್; ಏನಿದರ ಅರ್ಥ?ಹಿಂಗ ಪ್ರಶ್ನೆಗಳು ಭಾಳ. ಆದ್ರ ಉತ್ತರ ಕೊಡಾಕ, ಈ ಟೈಮು ಒಂದ್ಕಡೆ ನಿಲ್ಲೂದೆ ಇಲ್ಲಲ್ಲ. ನನ್ನ ಗೆಳತಿ ರೂಪಾ, ಯಾವಾಗಲೂ ಹೇಳ್ತಾಳ. ದೇವರೇನರೆ ಒಂದು ವರಾ ಕೊಡ್ತೇನಿ ಅಂದ್ರ ವಾಪಸ್ ಹಳೆ ಟೈಮಿಗೆ ಕರಕೊಂಡು ಹೋಗಪಾ.. ಆಗಿನ ಕೆಲವು ನಿರ್ಧಾರ ಬದಲಿಸಬೇಕಾಗೇದ ಅಂತ... (ನಿಮಗೇನರೆ ವರಾ ಕೊಟ್ರ ನೀವೇನು ಕೇಳ್ತೀರಿ, ತಿಳಸ್ರಿ ನಮಗ.)ಏನೇ ಬದಲಾದ್ರೂ ಟೈಮು ಮಾತ್ರ ಬದಲಾಗೂದಿಲ್ಲ. ಅದಕ್ಕೆ ಮಮ್ತಾಜ್ ರಾಷಿದ್ ತಮ್ಮ ನಜ್ಮ್ನಾಗ ಹೇಳಿದ್ದು.. ವಕ್ತ್ ಹಿ ನಾ ರಹಾ ವಕ್ತ್ ಕಿ ಬಾತ್ ಹೈ... ಅಂತ. ತಡೀರಿ.. ನಾ ಈ ಹಾಡು ಕೇಳುಮುಂದ ನನ್ನ ಮಕ್ಕಳು ಬ್ಯಾರೆ ಹಾಡು ಗುನುಗತಾರ . ‘ಅಪ್ನಾ ಟೈಮ್ ಆಯೆಗಾ...‘ ಅಂಥ. ಇಂಥದ್ದೊಂದು ಆಶಾ ಭಾವನೆ ಇರಬೇಕು. (ನಿಮಗ ಯಾವಾಗ ಅನಿಸಿತ್ತು, ನಿಮ್ಮ ಟೈಮ್ ಬಂತು ಅಂತ)ಹೌದನು.. ಇರಬಹುದಪ್ಪಾ.. ಜೀವನ ಸಣ್ದು. ಯಾರ ಟೈಮ್ ಯಾವಾಗ ಬರ್ತದ, ಕರಕೊಂಡು ಹೋಗ್ತದ ಗೊತ್ತಿರೂದಿಲ್ಲ. ಸಾಧ್ಯ ಇದ್ದಾಗೆಲ್ಲ, ಪ್ರೀತಿ ಇದ್ದೋರ ಕೂಡ ಟೈಮ್ ಕಳೀರಿ. ಇಲ್ಲಾಂದ್ರ ಒಂದಿನ ಟೈಮಿರ್ತದ. ಆದ್ರ ಪ್ರೀತಿ ಇರೂದಿಲ್ಲ. ಟೈಮು, ಪ್ರೀತಿ ಇದ್ರೂ ಅವರೇ ಇರಲಿಕ್ರ ಏನು ಮಾಡೂದು.. ರಾಷಿದ್ ಹಾಡು ಗುನುಗೂದು ಅಷ್ಟೆ (ನೀವು ವಿದಾಯ ಹೇಳಿದವರು ಯಾರರೆ ನೆನಪಾದ್ರೇನು ಮತ್ತ? ನಮಗಿಲ್ಲಿ ಬರದು ಕಳಸ್ರಿ)