ಡೀಸೆಲ್, ಎಟಿಎಫ್ ರಫ್ತು ತೆರಿಗೆ ಹೆಚ್ಚಳ
ನವದೆಹಲಿ (ಪಿಟಿಐ): ಡೀಸೆಲ್ ಮತ್ತು ವಿಮಾನಗಳಲ್ಲಿ ಬಳಸುವ ಇಂಧನದ (ಎಟಿಎಫ್) ರಫ್ತಿಗೆ ವಿಧಿಸುವ ‘ಆಕಸ್ಮಿಕ ಲಾಭ ತೆರಿಗೆ’ಯನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಪೆಟ್ರೋಲ್ ರಫ್ತಿನ ಮೇಲೆ ವಿಧಿಸುವ ಈ ತೆರಿಗೆಯನ್ನು ತಗ್ಗಿಸಿದೆ.ಪರಿಷ್ಕೃತ ದರವು ಗುರುವಾರದಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.ಈ ಮೊದಲು ಪ್ರತಿ ಲೀ

ನವದೆಹಲಿ (ಪಿಟಿಐ): ಡೀಸೆಲ್ ಮತ್ತು ವಿಮಾನಗಳಲ್ಲಿ ಬಳಸುವ ಇಂಧನದ (ಎಟಿಎಫ್) ರಫ್ತಿಗೆ ವಿಧಿಸುವ ‘ಆಕಸ್ಮಿಕ ಲಾಭ ತೆರಿಗೆ’ಯನ್ನು ಕೇಂದ್ರ ಸರ್ಕಾರ ಹೆಚ್ಚಳ ಮಾಡಿದೆ. ಪೆಟ್ರೋಲ್ ರಫ್ತಿನ ಮೇಲೆ ವಿಧಿಸುವ ಈ ತೆರಿಗೆಯನ್ನು ತಗ್ಗಿಸಿದೆ.ಪರಿಷ್ಕೃತ ದರವು ಗುರುವಾರದಿಂದಲೇ ಜಾರಿಗೆ ಬಂದಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯವು ಅಧಿಸೂಚನೆಯಲ್ಲಿ ತಿಳಿಸಿದೆ.ಈ ಮೊದಲು ಪ್ರತಿ ಲೀಟರ್ ಡೀಸೆಲ್ ರಫ್ತಿಗೆ ₹8.5 ವಿಶೇಷ ಹೆಚ್ಚುವರಿ ಎಕ್ಸೈಸ್ ಸುಂಕ (ಎಸ್ಎಇಡಿ) ವಿಧಿಸಲಾಗುತ್ತಿತ್ತು. ಅದನ್ನು ಈಗ ₹15.5ಕ್ಕೆ ಹೆಚ್ಚಿಸಲಾಗಿದೆ. ವಿಮಾನ ಇಂಧನ ರಫ್ತಿನ ಮೇಲೆ ಈ ಸುಂಕವನ್ನು ₹7.5ರಿಂದ ₹14.5ಕ್ಕೆ ಏರಿಕೆ ಮಾಡಲಾಗಿದೆ. ಪೆಟ್ರೋಲ್ ರಫ್ತಿನ ಮೇಲಿನ ತೆರಿಗೆಯನ್ನು ₹4ರಿಂದ ₹2.5ಕ್ಕೆ ಇಳಿಕೆ ಮಾಡಲಾಗಿದೆ.ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಹಿನ್ನೆಲೆಯಲ್ಲಿ ದೇಶದಲ್ಲಿ ಇಂಧನ ಲಭ್ಯತೆಯನ್ನು ಹೆಚ್ಚು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೆಟ್ರೋಲ್, ಡೀಸೆಲ್ ಮತ್ತು ವಿಮಾನ ಇಂಧನ ರಫ್ತಿನ ಮೇಲೆ ‘ಆಕಸ್ಮಿಕ ಲಾಭ ತೆರಿಗೆ’ಯನ್ನು ವಿಧಿಸುತ್ತಿದೆ.
Read the complete story at Prajavani