ಡಿಕೆಶಿ ಮೆಚ್ಚಿಸಲು ಎಚ್ಡಿಕೆ ಟೀಕಿಸಿದ ಶಾಸಕ ಗಣಿಗ: ಬಿ.ಆರ್. ರಾಮಚಂದ್ರ ಆರೋಪ
ಮಂಡ್ಯ: ‘ಮಂಡ್ಯ ಶಾಸಕ ಪಿ.ರವಿಕುಮಾರ್ ಅವರು ಅಪ್ರಬುದ್ಧತೆಯಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸುವುದು ಸರಿಯಲ್ಲ. ಡಿ.ಕೆ. ಶಿವಕುಮಾರ್ ಅವರನ್ನು ಮೆಚ್ಚಿಸಲು ಲಘುವಾಗಿ ಟೀಕಿಸಿದರೆ ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ’ ಎಂದು ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ವಾಗ್ದಾಳಿ ನಡೆಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್

ಮಂಡ್ಯ: ‘ಮಂಡ್ಯ ಶಾಸಕ ಪಿ.ರವಿಕುಮಾರ್ ಅವರು ಅಪ್ರಬುದ್ಧತೆಯಿಂದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಟೀಕಿಸುವುದು ಸರಿಯಲ್ಲ. ಡಿ.ಕೆ. ಶಿವಕುಮಾರ್ ಅವರನ್ನು ಮೆಚ್ಚಿಸಲು ಲಘುವಾಗಿ ಟೀಕಿಸಿದರೆ ಮುಂಬರುವ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ’ ಎಂದು ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ ವಾಗ್ದಾಳಿ ನಡೆಸಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಬಿಡದಿ ಟೌನ್ಶಿಪ್ ರೈತರ ಹೋರಾಟದಲ್ಲಿ ರಾಜಕೀಯವಾಗಿ ಪರ ವಿರೋಧ ಆರೋಪಗಳು ಸಹಜ. ಅದನ್ನೇ ಬಂಡವಾಳ ಮಾಡಿಕೊಂಡ ರವಿಕುಮಾರ್ ಅವರು ಕುಮಾರಸ್ವಾಮಿ ಅವರ ಬಗ್ಗೆ ವ್ಯಂಗ್ಯವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಇದರಿಂದ ನೀವು ದೊಡ್ಡವರಾಗುತ್ತೀರಿ ಎಂಬುವ ಭ್ರಮೆಯಿಂದ ಹೊರಬರಬೇಕು’ ಎಂದು ಹೇಳಿದರು.‘ನಾನು ಹಾಗೂ ನನ್ನ ಸಹೋದರ ಮೂಲತಃ ಗುತ್ತಿಗೆದಾರರು ಹಾಗೂ ಸಿಮೆಂಟ್ ವ್ಯಾಪಾರಸ್ಥರು. ಯಾರದ್ದೋ ಮಾತು ಕೇಳಿ ನಮ್ಮ ವೃತ್ತಿಗಳಾದ ಗುತ್ತಿಗೆ, ವ್ಯಾಪಾರ ಹಾಗೂ ಕ್ರಷರ್ಗಳಿಗೆ ತೊಂದರೆ ಕೊಟ್ಟರೆ ಸಹಿಸುವುದಿಲ್ಲ. ಮೂರು ವರ್ಷಗಳಿಂದ ಮೌನವಾಗಿದ್ದೆ. ಇಂತಹ ಪ್ರಹಾರಕ್ಕೆ ಬಗ್ಗುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.‘ಶಾಸಕರ ಸೋದರ ಸಂಬಂಧಿ ರಾಮಚಂದ್ರ ಎಂಬಾತನಿಗೆ ಅನುಕೂಲ ಮಾಡಿಕೊಡಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಹುತೇಕ ಕಾಮಗಾರಿ ಟೆಂಡರ್ ನಿಲ್ಲಿಸಿದ್ದೀರಿ. ಕಳಪೆ ಕಾಮಗಾರಿಗೆ ಅಂಕಿತ ಹಾಕಿರುವ ನೀವು, ನನ್ನ ಬಗ್ಗೆ ಕ್ಷೇತ್ರದ ಜನರಲ್ಲಿ ಅಪಪ್ರಚಾರ ಮಾಡುತ್ತಿದ್ದೀರಿ, ಇದು ಸರಿಯಲ್ಲ. ನನ್ನ ಸಹೋದರ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿ ಪಡೆದಿರುವ ಕಾಮಗಾರಿಗಳನ್ನು ತಾಂತ್ರಿಕ ನೆಪವೊಡ್ಡಿ ಟೆಂಡರ್ ರದ್ದುಗೊಳಿಸಿ, ಕಾಮಗಾರಿ ವಿಳಂಬಕ್ಕೆ ನನ್ನನ್ನು ದೂರುವುದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.‘₹6.50 ಕೋಟಿ ವೆಚ್ಚದ ಹಲವು ರಸ್ತೆಗಳಿಗೆ ಜನವರಿ ತಿಂಗಳಲ್ಲೇ ಟೆಂಡರ್ ಅಪ್ರೂವಲ್ ಆಗಿದ್ದರೂ ಇಲ್ಲಿಯವರೆಗೂ ಕಾಮಗಾರಿ ಆರಂಭಕ್ಕೆ ಅನುಮತಿ ನೀಡದಿರುವುದು ಯಾವ ನ್ಯಾಯ? ಲೋಕೋಪಯೋಗಿ ಇಲಾಖೆಯಲ್ಲಿ ₹17 ಕೋಟಿ ವೆಚ್ಚದ ಎರಡು ಕಾಮಗಾರಿ ಪ್ಯಾಕೇಜ್ಗಳನ್ನು ಬಲಿಷ್ಠ ಗುತ್ತಿಗೆದಾರರಿಗೆ ನೀಡುವ ಮೂಲಕ ₹5ರಿಂದ ₹6 ಕೋಟಿಯನ್ನು ಸರ್ಕಾರಕ್ಕೆ ನಷ್ಟ ಉಂಟು ಮಾಡಿದ್ದೀರಿ’ ಎಂದು ಆರೋಪಿಸಿದರು.