ಮಕ್ಕಳ ಕ್ಯಾನ್ಸರ್ ಆಸ್ಪತ್ರೆ ಮೇಲೆ ಅಮೆರಿಕ ದಾಳಿ ಮಾಡಿದೆ: ಇರಾನ್ ಆರೋಪ
* ಯುಎಸ್ MQ-9 ಡ್ರೋನ್ ಹೊಡೆದುರುಳಿಸಿದ್ದು ನಾವೇ ಎಂದ ಇರಾನ್ ಟೆಹ್ರಾನ್: ಅಮೆರಿಕವು ಇರಾನ್ ಮೇಲೆ ರಾತ್ರೋರಾತ್ರಿ ಹೊಸ ಸುತ್ತಿನ ವಾಯುದಾಳಿಗಳನ್ನು ನಡೆಸಿದೆ. ಇತ್ತ ಇರಾನ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿತ್ರರಾಷ್ಟ್ರಗಳನ್ನು ಟಾರ್ಗೆಟ್ ಮಾಡಿದೆ. ಯುಎಸ್ ತನ್ನ ಆಕ್ರಮಣವನ್ನು ಕೊನೆಗೊಳಿಸುವವರೆಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ಪ್ರತಿಜ್ಞೆ ಮಾಡಿದ

* ಯುಎಸ್ MQ-9 ಡ್ರೋನ್ ಹೊಡೆದುರುಳಿಸಿದ್ದು ನಾವೇ ಎಂದ ಇರಾನ್ ಟೆಹ್ರಾನ್: ಅಮೆರಿಕವು ಇರಾನ್ ಮೇಲೆ ರಾತ್ರೋರಾತ್ರಿ ಹೊಸ ಸುತ್ತಿನ ವಾಯುದಾಳಿಗಳನ್ನು ನಡೆಸಿದೆ. ಇತ್ತ ಇರಾನ್ ಮಧ್ಯಪ್ರಾಚ್ಯದಲ್ಲಿ ಅಮೆರಿಕದ ಮಿತ್ರರಾಷ್ಟ್ರಗಳನ್ನು ಟಾರ್ಗೆಟ್ ಮಾಡಿದೆ. ಯುಎಸ್ ತನ್ನ ಆಕ್ರಮಣವನ್ನು ಕೊನೆಗೊಳಿಸುವವರೆಗೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ. ಇರಾನ್ನ ಖೆಶ್ಮ್ ದ್ವೀಪ, ಬಂದರ್ ಅಬ್ಬಾಸ್, ಸಿರಿಕ್, ಚಬಹಾರ್, ಕೊನಾರಕ್, ರಾಸ್ಕ್ ಸಿಟಿ, ಖೊಂಡಾಬ್ ಮತ್ತು ಪಶ್ಚಿಮ ನಗರ ಖೊರಾಮಾಬಾದ್ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಸ್ಫೋಟಗಳ ಶಬ್ದಗಳು ಕೇಳಿಸಿವೆ. ಅಹ್ವಾಜ್ನಲ್ಲಿಯೂ ಸ್ಫೋಟಗಳು ಕೇಳಿಬಂದವು. ಶಾಹಿದ್ ಬಘೈ ಆಸ್ಪತ್ರೆಯು ಅಮೆರಿಕದ ಬಾಂಬ್ ದಾಳಿಯಿಂದ ಹಾನಿಗೊಳಗಾಗಿದೆ. ಅದರ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗಕ್ಕೆ ಹಾನಿಯಾಗಿದೆ. ಮಕ್ಕಳು ಸೇರಿದಂತೆ ಕ್ಯಾನ್ಸರ್ ರೋಗಿಗಳಿಗೆ ಕಿಮೊಥೆರಪಿ ಚಿಕಿತ್ಸೆಯನ್ನು ಒದಗಿಸುವ ಆಸ್ಪತ್ರೆಯನ್ನು ಸ್ಥಳಾಂತರಿಸಲಾಗಿದೆ. ಅಮೆರಿಕದ ಪ್ರತಿಕೂಲ ಬೆದರಿಕೆಗಳನ್ನು ಎದುರಿಸಲು ಇರಾನ್ ರಾಜಧಾನಿ ಟೆಹ್ರಾನ್ನಲ್ಲಿ ವಾಯು ರಕ್ಷಣಾ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಲಾಗಿದೆ. ಕ್ವೆಶ್ಮ್ ಮತ್ತು ಬಂದರ್ ಇಮಾಮ್ ಖೊಮೇನಿ ಸೇರಿದಂತೆ ದಕ್ಷಿಣದ ಸ್ಥಳಗಳ ಸುತ್ತಲೂ ಸ್ಫೋಟಗಳಾಗಿವೆ. ಹೊಸ ಯುಎಸ್ ದಾಳಿಗಳು ಇರಾನ್ನ ಏಕೈಕ ನಾಗರಿಕ ಪರಮಾಣು ಸ್ಥಾವರವಿರುವ ಬುಶೆಹರ್ ಮೇಲೆ ದಾಳಿ ನಡೆಸಿವೆ ಎಂದು ತಿಳಿಸಿವೆ. ಹಾರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳಿಗೆ ಇರಾನ್ ಬೆದರಿಕೆ ಒಡ್ಡಿದೆ. ಹೀಗಾಗಿ, ಇರಾನಿನ ಮಿಲಿಟರಿ ಸಾಮರ್ಥ್ಯಗಳನ್ನು ಟಾರ್ಗೆಟ್ ಮಾಡಲಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿದೆ.