ಫಿಫಾ ವಿಶ್ವಕಪ್: ಕಿರೀಟ ಗೆಲ್ಲಲು ಸ್ಪೇನ್ಗೆ ಒಂದೇ ಹೆಜ್ಜೆ ಬಾಕಿ!
ಅರ್ಲಿಂಗ್ಟನ್, ಅಮೆರಿಕ: ಸುಮಾರು ನಾಲ್ಕು ದಶಕಗಳ ಹಿಂದೆ, 1982ರ ಫಿಫಾ ವಿಶ್ವಕಪ್ನಲ್ಲಿ ಆಡಿದ್ದ ಬ್ರೆಜಿಲ್ ತಂಡದಲ್ಲಿ ಪ್ರಬಲ ಆಕ್ರಮಣಕಾರಿ ಆಟಗಾರರ ಪಡೆಯಿತ್ತು. ಈ ಬಾರಿಯ ಫಿಫಾ ವಿಶ್ವಕಪ್ನಲ್ಲಿ ಸೆಮಿಫೈನಲ್ ತಲುಪಿದ್ದ ಫ್ರಾನ್ಸ್ ತಂಡವೂ ಅದೇ ರೀತಿ ಪ್ರಬಲ ಆಕ್ರಮಣಕಾರಿ ಆಟಗಾರರ ಪಡೆ ಹೊಂದಿತ್ತು.ಆದರೆ ಝಿಕೊ, ಎಡೆರ್, ಫಾಲ್ಕಾವೊ ಮತ್ತು ಸಾಕ್ರೆಟಿಸ್ ಅಂಥ ದಿಗ್ಗಜ

ಅರ್ಲಿಂಗ್ಟನ್, ಅಮೆರಿಕ: ಸುಮಾರು ನಾಲ್ಕು ದಶಕಗಳ ಹಿಂದೆ, 1982ರ ಫಿಫಾ ವಿಶ್ವಕಪ್ನಲ್ಲಿ ಆಡಿದ್ದ ಬ್ರೆಜಿಲ್ ತಂಡದಲ್ಲಿ ಪ್ರಬಲ ಆಕ್ರಮಣಕಾರಿ ಆಟಗಾರರ ಪಡೆಯಿತ್ತು. ಈ ಬಾರಿಯ ಫಿಫಾ ವಿಶ್ವಕಪ್ನಲ್ಲಿ ಸೆಮಿಫೈನಲ್ ತಲುಪಿದ್ದ ಫ್ರಾನ್ಸ್ ತಂಡವೂ ಅದೇ ರೀತಿ ಪ್ರಬಲ ಆಕ್ರಮಣಕಾರಿ ಆಟಗಾರರ ಪಡೆ ಹೊಂದಿತ್ತು.ಆದರೆ ಝಿಕೊ, ಎಡೆರ್, ಫಾಲ್ಕಾವೊ ಮತ್ತು ಸಾಕ್ರೆಟಿಸ್ ಅಂಥ ದಿಗ್ಗಜ ಫಾರ್ವರ್ಡ್ಗಳ ರೀತಿ, ಕೈಲಿಯನ್ ಎಂಬಾಪೆ ಸಾರಥ್ಯದ ತಂಡವೂ ಬರೇ ದಾಳಿಯ ಆಟವೊಂದೇ ತಮ್ಮ ನೆರವಿಗೆ ಬರುವುದಿಲ್ಲ ಎಂಬುದನ್ನು ಮಂಗಳವಾರ ಮನಗಂಡಿತು. ಆಕ್ರಮಣಕಾರಿ ತಂತ್ರಗಾರಿಕೆಗಳಿಂದ ಕಂಗೊಳಿಸಿದ್ದ ಫ್ರೆಂಚ್ ಪಡೆಯ ಅಭಿಯಾನಕ್ಕೆ ಸ್ಪೇನ್ ಸೆಮಿಫೈನಲ್ನಲ್ಲಿ ತಡೆಯೊಡ್ಡಿತು. ಸ್ಪಾನಿಷ್ ಪಡೆಯು 2–0ಯಿಂದ ಗೆದ್ದು, ತನ್ನ ರಕ್ಷಣಾ ಬಲದ ಸಾಮರ್ಥ್ಯವನ್ನು ಮತ್ತೆ ಸಾಬೀತುಪಡಿಸಿತು. ದಿದಿಯರ್ ದೆಶಾಂಪ್ ಮಾರ್ಗದರ್ಶನದ ಫ್ರಾನ್ಸ್ ಪಡೆಗೆ ಸೋಲಿನ ಕಹಿ ಉಣಿಸಿತು.ಪಂದ್ಯದ 22ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯಲ್ಲಿ ಮೈಕೆಲ್ ಒಯರ್ಝ್ಬಲ್ ಗೋಲು ಗಳಿಸುವ ಮೂಲಕ ಸ್ಪೇನ್ಗೆ ಮುನ್ನಡೆ ಒದಗಿಸಿದರು. ನಂತರದ ಆಟದಲ್ಲಿ ಫ್ರೆಂಚ್ ಆಟಗಾರರ ಪ್ರಯತ್ನಗಳನ್ನು ತಡೆಯುವಲ್ಲಿ ಸ್ಪೇನ್ ರಕ್ಷಣಾ ಪಡೆ ಯಶಸ್ವಿಯಾಯಿತು. 58ನೇ ನಿಮಿಷದಲ್ಲಿ ಪೆಡ್ರೊ ಪೊರೊ ಅವರ ಮಿಂಚಿನ ಕಾಲ್ಚಳಕಕ್ಕೆ ಫ್ರಾನ್ಸ್ ಗೋಲ್ಕೀಪರ್ ಎಂ ಮೈಗ್ನಾನ್ ಏಕಾಗ್ರತೆ ಭಂಗವಾಯಿತು. ಅವರು ಗಲಿಬಿಲಿಗೊಳಗಾಗಿ ಮುನ್ನುಗ್ಗಿದ ಅವಕಾಶವನ್ನು ಪೆಡ್ರೊ ಸಮರ್ಥವಾಗಿ ಬಳಸಿಕೊಂಡರು.ಎಂಬಾಪೆ, ಉಸ್ಮಾನ್ ಡೆಂಬೆಲೆ, ಮೈಕೆಲ್ ಒಲಿಸ್, ಬ್ರಾಡ್ಲಿ ಬಾರ್ಕೋಲಾ ಮತ್ತು ಡೆಸಿರೆ ಡುವೆ ಅವರು ಸೆಮಿಫೈನಲ್ ತಲುಪುವ ಹಾದಿಯಲ್ಲಿ 16 ಗೋಲುಗಳನ್ನು ಗಳಿಸಿದ್ದರು. ಅವರೆಲ್ಲರ ಕಾಲ್ಚಳಕವು ಫ್ರೆಂಚ್ ಬಳಗವನ್ನು ನಾಲ್ಕರ ಘಟ್ಟಕ್ಕೆ ತಂದು ನಿಲ್ಲಿಸಿತ್ತು. ಸತತ ಮೂರನೇ ಬಾರಿ ಫೈನಲ್ ಪ್ರವೇಶಿಸುವ ಭರವಸೆಯೂ ಮೂಡಿತ್ತು.ಆದರೆ ಟೆಕ್ಸಾಸ್ ಆರ್ಲಿಂಗ್ಟನ್ನಲ್ಲಿರುವ ಎಟಿ ಆ್ಯಂಡ್ ಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಸ್ಪಾನಿಷ್ ಪಡೆ ವಿಜೃಂಭಿಸಿತು. ಫ್ರಾನ್ಸ್ ತಾರೆಯರಿಗೆ ತಡೆಯೊಡ್ಡುವ ಸ್ಪೇನ್ ತಂಡದ ಶಿಸ್ತುಬದ್ಧ ತಂತ್ರಗಾರಿಕೆಯು ಫಲಿಸಿತು. 75 ನಿಮಿಷಗಳಿಗಿಂತ ಹೆಚ್ಚು ಅವಧಿಯಲ್ಲಿ ಸ್ಪೇನ್ ನಿಯಂತ್ರಣ ಸಾಧಿಸಿತ್ತು.ಸ್ಪೇನ್ ತಂಡದ ಪ್ರತಿಭಾನ್ವಿತ ಆಟಗಾರರಾದ ರೊಡ್ರಿ, ಡ್ಯಾನಿ ಓಲ್ಮೋ ಮತ್ತು ಫ್ಯಾಬಿಯನ್ ರುಯಿಜ್ ಅವರು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿದರು.‘ನಮ್ಮ ಸಂಪೂರ್ಣ ಸಾಮರ್ಥ್ಯವನ್ನು ವಿನಿಯೋಗಿಸಿದ್ದೇವೆ ಎಂದು ನನಗನಿಸುವುದಿಲ್ಲ. ಕಾರ್ಯತಂತ್ರ, ತಾಂತ್ರಿಕತೆ ಅಥವಾ ಒಟ್ಟಾರೆ ಕಾರ್ಯಕ್ಷಮತೆಯು ನಿರೀಕ್ಷಿತ ಮಟ್ಟದಲ್ಲಿರಲಿಲ್ಲ’ ಎಂದು ಎಂಬಾಪೆ ಹೇಳಿದರು.ಈ ಸೋಲಿನ ನಿರಾಶೆಯೊಂದಿಗೇ ಫ್ರಾನ್ಸ್ ಮ್ಯಾನೇಜರ್ ಸ್ಥಾನದಿಂದ ದೆಶಾಂಪ್ಸ್ ನಿರ್ಗಮಿಸುವುದು ಬಹುತೇಕ ಖಚಿತವಾಗಿದೆ.ಯಮಾಲ್ ಮನೆಗೆ ನುಗ್ಗಲು ಕಳ್ಳರ ಯತ್ನಮ್ಯಾಡ್ರಿಡ್: ಸ್ಪೇನ್ ಫುಟ್ಬಾಲ್ ತಂಡದ ತಾರೆ ಲಮೈನ್ ಯಮಾಲ್ ಅವರ ನಿವಾಸದಲ್ಲಿ ಕಳವು ಮಾಡುವ ಪ್ರಯತ್ನವನ್ನು ಕೆಲವು ದುಷ್ಕರ್ಮಿಗಳು ಮಾಡಿದ್ದಾರೆಂದು ವರದಿಯಾಗಿದೆ.ಸ್ಪೇನ್ ತಂಡವು ಫೈನಲ್ ತಲುಪುವಲ್ಲಿ ಯಮಾಲ್ ಪಾತ್ರ ಪ್ರಮುಖವಾಗಿದೆ.‘ಬಾರ್ಸಿಲೋನಾದ ಹೊರವಲಯದಲ್ಲಿರುವ ಯಮಾಲ್ ಅವರ ಮನೆಗೆ ನುಗ್ಗಿ ಕಳವು ಮಾಡುವ ಪ್ರಯತ್ನ ನಡೆಸಿದ್ದಾರೆ. ಆದರೆ ಖಾಸಗಿ ಭದ್ರತಾ ಸಿಬ್ಬಂದಿಯನ್ನು ನೋಡಿ ಕಳ್ಳರು ಕಾಲ್ಕಿತ್ತಿದ್ದಾರೆ’ ಎಂದು ಸ್ಥಳೀಯ ಪೊಲೀಸರು ನೀಡಿರುವ ಮಾಹಿತಿಯನ್ನು ಸ್ಪೇನ್ ಮಾಧ್ಯಮಗಳು ವರದಿ ಮಾಡಿವೆ.ಪ್ರಮುಖ ಅಂಶಗಳುl ಸ್ಪೇನ್ ತಂಡವು 17ನೇ ಬಾರಿ ಫಿಫಾ ವಿಶ್ವಕಪ್ನಲ್ಲಿ ಆಡುತ್ತಿದೆl ಸ್ಪೇನ್ ತಂಡವು ಹಾಲಿ ಯುರೋಪಿಯನ್ ಚಾಂಪಿಯನ್l 2010ರಲ್ಲಿ ಸ್ಪೇನ್ ಕೊನೆಯ ಬಾರಿ ವಿಶ್ವಕಪ್ ಜಯಿಸಿತ್ತುl 2022ರಲ್ಲಿ ಕತಾರ್ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯಲ್ಲಿ 16ರ ಘಟ್ಟ ಪ್ರವೇಶಿಸಿತ್ತುl ಪ್ರಸಕ್ತ ಟೂರ್ನಿಯಲ್ಲಿ ಸ್ಪೇನ್ ತಂಡವು ಏಳು ಪಂದ್ಯಗಳಲ್ಲಿ 13 ಗೋಲು ಗಳಿಸಿದೆ. ಬಿಟ್ಟುಕೊಟ್ಟಿರುವುದು ಏಕೈಕ ಗೋಲು ಮಾತ್ರ