ರೋಹಿಂಗ್ಯಾ ನಿರಾಶ್ರಿತರಿದ್ದ 2 ಹಡಗು ಮುಳುಗಡೆ; 500ಕ್ಕೂ ಅಧಿಕ ಸಾವಿನ ಶಂಕೆ
ಸಿಡ್ನಿ: ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ಎರಡು ದೋಣಿಗಳು ಬಂಗಾಳಕೊಲ್ಲಿಯಲ್ಲಿ ಮಗುಚಿ ಬಿದ್ದಿದ್ದು, 500ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಶಂಕೆ ಇದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತ ಎರಡು ದೋಣಿಗಳು ಜೂನ್ ಅಂತ್ಯದಲ್ಲಿ ಮ್ಯಾನ್ಮಾರ್ನ ಪಶ್ಚಿಮ ರಾಜ್ಯವಾದ ರಾಖೈನ್ನಿಂದ ಹೊರಟಿದ್ದವು. ಇದರಲ್ಲಿ ಬಾ

ಸಿಡ್ನಿ: ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತೊಯ್ಯುತ್ತಿದ್ದ ಎರಡು ದೋಣಿಗಳು ಬಂಗಾಳಕೊಲ್ಲಿಯಲ್ಲಿ ಮಗುಚಿ ಬಿದ್ದಿದ್ದು, 500ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಶಂಕೆ ಇದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.ರೋಹಿಂಗ್ಯಾ ನಿರಾಶ್ರಿತರನ್ನು ಹೊತ್ತ ಎರಡು ದೋಣಿಗಳು ಜೂನ್ ಅಂತ್ಯದಲ್ಲಿ ಮ್ಯಾನ್ಮಾರ್ನ ಪಶ್ಚಿಮ ರಾಜ್ಯವಾದ ರಾಖೈನ್ನಿಂದ ಹೊರಟಿದ್ದವು. ಇದರಲ್ಲಿ ಬಾಂಗ್ಲಾದೇಶದ ಗಡಿಯಾಚೆಗಿನ ನಿರಾಶ್ರಿತರ ಶಿಬಿರಗಳಲ್ಲಿದ್ದ ಕೆಲವರು ಇದ್ದರು ಎಂದು ಅಂತರರಾಷ್ಟ್ರೀಯ ವಲಸೆ ಸಂಸ್ಥೆ (ಐಒಎಂ) ಹೇಳಿಕೆಯಲ್ಲಿ ತಿಳಿಸಿದೆ.ಸುಮಾರು 250 ಜನರನ್ನು ಹೊತ್ತೊಯ್ಯುತ್ತಿತ್ತು ಎನ್ನಲಾದ ಒಂದು ದೋಣಿ ಹೊರಟ ಸ್ವಲ್ಪ ಸಮಯದಲ್ಲೇ ಸಂಪರ್ಕ ಕಳೆದುಕೊಂಡಿತು ಹಾಗೂ 280 ಜನರನ್ನು ಒಯ್ಯುತ್ತಿದ್ದ ಮತ್ತೊಂದು ದೋಣಿ ಜುಲೈ 8ರಂದು ಮ್ಯಾನ್ಮಾರ್ನ ಅಯೇಯಾರ್ವಡಿ ಕರಾವಳಿಯಲ್ಲಿ ಮುಳುಗಿದೆ ಎಂದು ನಂಬಲಾಗಿದೆ.ಮ್ಯಾನ್ಮಾರ್ನ ಸೇನಾಪಡೆಗಳ ಹಿಂಸಾಚಾರದಿಂದಾಗಿ ಸುಮಾರು 12 ಲಕ್ಷ ಜನರು ದೇಶಭ್ರಷ್ಟರಾಗಿದ್ದು, ಅದರಲ್ಲೂ ಮುಖ್ಯವಾಗಿ ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶದ ನಿರಾಶ್ರಿತರ ಕಿಕ್ಕಿರಿದ ಶಿಬಿರಗಳಲ್ಲಿ ಸಿಲುಕಿಕೊಂಡಿದ್ದಾರೆ.