ಕಡೂರು ಕ್ಷೇತ್ರದಲ್ಲಿ ಶೇ 99ರಷ್ಟು ಎಸ್ಐಆರ್ ಪೂರ್ಣ
ಕಡೂರು: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದ್ದು, ಶೇ 99ರಷ್ಟು ಎನ್ಯುಮರೇಷನ್ ಫಾರಂಗಳನ್ನು ವಿತರಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಎಂ. ತಿರುಮಲೇಶ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಒಟ್ಟು 2,06,740 ಮತದಾರರಿದ್ದು, ಅವರಲ್ಲಿ 1,04,347 ಮಹಿಳೆಯರು, 1,02,389 ಪುರುಷರ

ಕಡೂರು: ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ಸಮರ್ಪಕವಾಗಿ ನಡೆಯುತ್ತಿದ್ದು, ಶೇ 99ರಷ್ಟು ಎನ್ಯುಮರೇಷನ್ ಫಾರಂಗಳನ್ನು ವಿತರಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಎಂ. ತಿರುಮಲೇಶ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಒಟ್ಟು 2,06,740 ಮತದಾರರಿದ್ದು, ಅವರಲ್ಲಿ 1,04,347 ಮಹಿಳೆಯರು, 1,02,389 ಪುರುಷರು ಹಾಗೂ ನಾಲ್ವರು ತೃತೀಯ ಲಿಂಗಿಗಳು ಇದ್ದಾರೆ ಎಂದು ತಿಳಿಸಿದರು.ಈವರೆಗೆ 1,99,230 ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದ್ದು, ಶೇ 52ರಷ್ಟು ಎನ್ಯುಮರೇಷನ್ ಫಾರಂಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಪರಿಶೀಲನೆ ವೇಳೆ 19 ಮತದಾರರು ಪತ್ತೆಯಾಗಿಲ್ಲ. 202 ಮಂದಿ ವಲಸೆ ಹೋಗಿರುವುದು, 566 ಮಂದಿ ಮೃತಪಟ್ಟಿರುವುದು ಹಾಗೂ 204 ನಕಲಿ ಮತದಾರರನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.ಕ್ಷೇತ್ರದಲ್ಲಿ ಒಟ್ಟು 253 ಮತಗಟ್ಟೆಗಳಿದ್ದು, ಗ್ರಾಮೀಣ ಪ್ರದೇಶದಲ್ಲಿ 200 ಹಾಗೂ ಕಡೂರು–ಬೀರೂರು ಪಟ್ಟಣ ವ್ಯಾಪ್ತಿಯಲ್ಲಿ 53 ಮತಗಟ್ಟೆಗಳಿವೆ. ಎಸ್ಐಆರ್ ಕಾರ್ಯಕ್ಕಾಗಿ 253 ಬಿಎಲ್ಒಗಳು, 46 ಮತಗಟ್ಟೆ ಮೇಲ್ವಿಚಾರಕರು, ವಿವಿಧ ರಾಜಕೀಯ ಪಕ್ಷಗಳ 759 ಬಿಎಲ್ಎಗಳು ಹಾಗೂ ಎಂಟು ನೋಡಲ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಡೇಟಾ ಎಂಟ್ರಿ ಆಪರೇಟರ್ಗಳನ್ನು ನೇಮಿಸಿ ಬಿಎಲ್ಒಗಳಿಗೆ ನೆರವು ನೀಡಲಾಗಿದೆ. ಕಡೂರು ಅರಣ್ಯಾಧಿಕಾರಿ ಕಚೇರಿ, ಲೋಕೋಪಯೋಗಿ ಇಲಾಖೆ, ಪುರಸಭೆ ಹಾಗೂ ಬೀರೂರು ಪುರಸಭೆ ಕಚೇರಿಗಳಲ್ಲಿ ಸಹಾಯ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ವಿವರಿಸಿದರು.ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ ಮಾತನಾಡಿ, ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ 50 ಮತಗಟ್ಟೆಗಳಲ್ಲಿ 44,988 ಮತದಾರರಿದ್ದು, ಈವರೆಗೆ ಶೇ 97.25ರಷ್ಟು ಮ್ಯಾಪಿಂಗ್ ಪೂರ್ಣಗೊಂಡಿದೆ. 44,529 ಎನ್ಯುಮರೇಷನ್ ಫಾರಂಗಳನ್ನು ವಿತರಿಸಲಾಗಿದ್ದು, ಶೇ 57ರಷ್ಟು ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದೆ. 26 ಮತದಾರರು ನಾಪತ್ತೆಯಾಗಿದ್ದು, 122 ಮಂದಿ ವಲಸೆ, 166 ಮಂದಿ ಮರಣ ಹಾಗೂ 35 ನಕಲಿ ಮತದಾರರನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸಿ.ಆರ್. ಪ್ರವೀಣ್, ಚುನಾವಣಾ ಶಿರಸ್ತೇದಾರ್ ಪ್ರದೀಪ್ಕುಮಾರ್ ಎಲ್.ಕೆ. ಹಾಗೂ ಚುನಾವಣಾ ಶಾಖೆಯ ಶಂಕರ್ ಭಾಗವಹಿಸಿದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260716-126-1749292102