ಅಶ್ಲೀಲ ಕಮೆಂಟ್ ಮಾಡೋ ಶೂರರಿಗೆ ಶಾಕ್ – 6 ತಿಂಗಳಿಂದ 1 ವರ್ಷ ಜಾಮೀನು ರಹಿತ ಜೈಲು ಶಿಕ್ಷೆ
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ (Social Media) ಅಶ್ಲೀಲವಾಗಿ ಕಮೆಂಟ್ ಮಾಡುವವರ ಹಾವಳಿ ತಡೆಯುವ ಉದ್ದೇಶದಿಂದ ಇದೀಗ ಕಠಿಣ ಕಾಯ್ದೆಯೊಂದನ್ನು ಜಾರಿಗೆ ತರಲಾಗಿದ್ದು, ಕಮೆಂಟ್ ಶೂರರಿಗೆ ಶಾಕ್ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ (Obscene Comments) ಮಾಡಿ ಸಿಕ್ಕಿಬಿದ್ರೆ ಅಂತವರಿಗೆ 6 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ನೀಡಲಾಗುವುದು

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ (Social Media) ಅಶ್ಲೀಲವಾಗಿ ಕಮೆಂಟ್ ಮಾಡುವವರ ಹಾವಳಿ ತಡೆಯುವ ಉದ್ದೇಶದಿಂದ ಇದೀಗ ಕಠಿಣ ಕಾಯ್ದೆಯೊಂದನ್ನು ಜಾರಿಗೆ ತರಲಾಗಿದ್ದು, ಕಮೆಂಟ್ ಶೂರರಿಗೆ ಶಾಕ್ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಕಮೆಂಟ್ (Obscene Comments) ಮಾಡಿ ಸಿಕ್ಕಿಬಿದ್ರೆ ಅಂತವರಿಗೆ 6 ತಿಂಗಳಿಂದ 1 ವರ್ಷದವರೆಗೆ ಜೈಲು ಶಿಕ್ಷೆ ನೀಡಲಾಗುವುದು. ಜೊತೆಗೆ 1 ವರ್ಷದವರೆಗೆ ಜಾಮೀನು ರಹಿತ ಕಠಿಣ ಕಾಯ್ದೆಯನ್ನು 2024ರ ಜುಲೈ 1ರಿಂದ ಜಾರಿಗೆ ಬಂದಿರುವ ಐಟಿ ಕಾಯ್ದೆಗಳನ್ವಯ ಜಾರಿಗೆ ತರಲಾಗಿದೆ. ಇದನ್ನೂ ಓದಿ: ಚಾಕು ಇರಿದು ಪತಿಯ ಹತ್ಯೆ, ಮಗನ ಕೊಲೆಗೂ ಯತ್ನ – ಶವದ ಪಕ್ಕದಲ್ಲೇ ರಾಕ್ಷಸಿಯಂತೆ ಮೊಬೈಲ್ ನೋಡ್ತಿದ್ದ ಹಂತಕಿ ಪತ್ನಿ ಈ ಶಿಕ್ಷೆಯಾದ ಮೇಲೆ ಸೆಷನ್ಸ್, ಕೋರ್ಟ್, ಹೈಕೋರ್ಟ್ ತನಕ ಹೋದರೂ ಜಾಮೀನು ಸಿಗುವುದಿಲ್ಲ. ಕನಿಷ್ಠ 3 ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ ಇರುವ ಎರಡು ಸೆಕ್ಷನ್ ಜಾರಿ ಮಾಡಲಾಗಿದೆ. ಒಂದು ವೇಳೆ 1 ಲಕ್ಷ ರೂ. ದಂಡ ಕಟ್ಟದಿದ್ರೆ ದಂಡ ಕಟ್ಟುವ ತನಕ ಜೈಲುಶಿಕ್ಷೆ ಕಡ್ಡಾಯಗೊಳಿಸಿದ್ದಾರೆ.
Read the complete story at Public TV Kannada