ಸೋನಮ್ ವಾಂಗ್ಚುಕ್ ಉಳಿಸಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ಸಂದೇಶ
* 19 ದಿನಗಳನ್ನು ಪೂರೈಸಿದ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧದ ಕಾಕ್ರೋಚ್ ಜನತಾ ಪಕ್ಷದ (Cockroach Janata Party) ಪ್ರತಿಭಟನೆಯಲ್ಲಿ ಸೇರಿಕೊಂಡ ನಂತರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿ 19 ದಿನಗಳನ್ನು ಪೂರೈಸಿರುವ ಕಾರ್ಯಕರ್ತೆ ಸೋನಮ್ ವಾಂಗ್ಚುಕ್ (Sonam Wangchuk) ಅವರ ಆರೋಗ್ಯವನ್ನ

* 19 ದಿನಗಳನ್ನು ಪೂರೈಸಿದ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ನವದೆಹಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ವಿರುದ್ಧದ ಕಾಕ್ರೋಚ್ ಜನತಾ ಪಕ್ಷದ (Cockroach Janata Party) ಪ್ರತಿಭಟನೆಯಲ್ಲಿ ಸೇರಿಕೊಂಡ ನಂತರ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿ 19 ದಿನಗಳನ್ನು ಪೂರೈಸಿರುವ ಕಾರ್ಯಕರ್ತೆ ಸೋನಮ್ ವಾಂಗ್ಚುಕ್ (Sonam Wangchuk) ಅವರ ಆರೋಗ್ಯವನ್ನು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ. ಸೋನಮ್ ವಾಂಗ್ಚುಕ್ ಅವರ ಜೀವವನ್ನು ಉಳಿಸಲು ಅಗತ್ಯವಿರುವ ವೈದ್ಯಕೀಯ ಚಿಕಿತ್ಸೆ ನೀಡಬೇಕು. ಯಾವುದೇ ನಾಗರಿಕರ ಜೀವವು ಅಮೂಲ್ಯವಾದುದು ಎಂಬುದನ್ನು ನಾವು ಗಮನಿಸುತ್ತೇವೆ. ಜೀವ ಉಳಿಸಲು ಅಧಿಕಾರಿಗಳು ಎಲ್ಲಾ ಪ್ರಯತ್ನಗಳನ್ನು ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಇದನ್ನೂ ಓದಿ: ಸೋನಂ ವಾಂಗ್ಚುಕ್ ಆರೋಗ್ಯ ಹದಗೆಟ್ಟಿದೆ, ಬಲವಂತವಾಗಿ ಆಹಾರ ನೀಡಿ – ದೆಹಲಿ ಹೈಕೋರ್ಟ್ಗೆ PIL 59 ವರ್ಷದ ವಾಂಗ್ಚುಕ್ ಉಪವಾಸ ಮುರಿಯದಿದ್ದರೆ ಮುಂದಿನ 48 ಗಂಟೆಗಳ ಒಳಗೆ ಸಾವನ್ನಪ್ಪುತ್ತಾರೆ ಎಂದು ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು. ಬುಧವಾರ ಕೋರ್ಟ್ ಅರ್ಜಿ ವಿಚಾರಣೆ ನಡೆಸಿತು. ವಾಂಗ್ಚುಕ್ ಅವರು 8.5 ಕೆಜಿ ತೂಕ ಇಳಿಸಿಕೊಂಡ ನಂತರ ಸಲ್ಲಿಸಲಾದ ವರದಿಯಲ್ಲಿ, ಮಾಡಬೇಕಾದ ಸರಳ ಕೆಲಸವೆಂದರೆ ಅವರನ್ನು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದುವುದು. ಮಾನವ ದೇಹಕ್ಕೆ ಬದುಕಲು ಅಗತ್ಯವಾದ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ದ್ರವ ಆಹಾರದ ಮೂಲಕ ಬಲವಂತವಾಗಿ ಉಣಿಸುವುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ: NDA ಸೇರ್ಪಡೆಯಾಗದೇ ಮಹಿಳಾ ಮೀಸಲಾತಿ, ಡಿಲಿಮಿಟೇಷನ್ ಮಸೂದೆಗೆ ಪವಾರ್ ಬಣ ಬೆಂಬಲ!