ರಥಯಾತ್ರೆಯಲ್ಲಿ ಸುವೇಂದು ಅಧಿಕಾರಿ ಭಾಗಿ, ಧಾರ್ಮಿಕ ವಿಧಿವಿಧಾನ ಆಚರಣೆ
ಕೋಲ್ಕತ್ತ: ಭಾರಿ ಮಳೆಯ ನಡುವೆಯೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಗುರುವಾರ ರಾಜ್ಯದ ಹಲವೆಡೆ ಹಮ್ಮಿಕೊಳ್ಳಲಾಗಿದ್ದ ರಥಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಭಕ್ತರೊಂದಿಗೆ ರಥೆಯಾತ್ರೆಯಲ್ಲಿ ಪಾಲ್ಗೊಂಡ ಸುವೇಂದು ಅಧಿಕಾರಿ, ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲೂ ಭಾಗಿಯಾಗಿದ್ದಾರೆ. ಕೋಲ್ಕತ್ತದಲ್ಲಿ ಇಸ್ಕಾನ್ ಹಮ್ಮಿಕೊಂಡಿದ್ದ ರಥಯಾತ್ರೆಗೆ ಮುಖ್ಯಮಂ

ಕೋಲ್ಕತ್ತ: ಭಾರಿ ಮಳೆಯ ನಡುವೆಯೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಗುರುವಾರ ರಾಜ್ಯದ ಹಲವೆಡೆ ಹಮ್ಮಿಕೊಳ್ಳಲಾಗಿದ್ದ ರಥಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಭಕ್ತರೊಂದಿಗೆ ರಥೆಯಾತ್ರೆಯಲ್ಲಿ ಪಾಲ್ಗೊಂಡ ಸುವೇಂದು ಅಧಿಕಾರಿ, ವಿವಿಧ ಧಾರ್ಮಿಕ ವಿಧಿವಿಧಾನಗಳಲ್ಲೂ ಭಾಗಿಯಾಗಿದ್ದಾರೆ. ಕೋಲ್ಕತ್ತದಲ್ಲಿ ಇಸ್ಕಾನ್ ಹಮ್ಮಿಕೊಂಡಿದ್ದ ರಥಯಾತ್ರೆಗೆ ಮುಖ್ಯಮಂತ್ರಿ ರಥದ ಹಗ್ಗವನ್ನು ಎಳೆಯುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. VIDEO | Kolkata: West Bengal Chief Minister Suvendu Adhikari (@SuvenduWB) inaugurated the 55th ISKCON Rath Yatra in Kolkata by performing the traditional 'Chhera Pahanra' ritual. (Full video available on PTI Videos - https://t.co/n147TvrpG7) pic.twitter.com/59hu5Wg0ZW— Press Trust of India (@PTI_News) July 16, 2026 'ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ನನಗೆ ಹೆಮ್ಮೆಯಿದೆ. ಇದು ನನಗೆ ಸಿಕ್ಕ ಉತ್ತಮ ಅವಕಾಶ. ನಾನೊಬ್ಬ ಸನಾತನಿ, ಭಾರತ ಮಾತೆಯ ಪುತ್ರ ಹಾಗೂ ರಾಧಾ-ಮಾಧವರ ಪರಮ ಭಕ್ತ, ಜಗನ್ನಾಥನ ಸೇವಕ' ಎಂದು ಸುವೇಂದು ಅಧಿಕಾರಿ ಹೇಳಿದ್ದಾರೆ. 'ಕೋಲ್ಕತ್ತ ಇಸ್ಕಾನ್ ರಥಯಾತ್ರೆಯ ಇತಿಹಾಸದಲ್ಲೇ ಮುಖ್ಯಮಂತ್ರಿಯೊಬ್ಬರು ಭಕ್ತಾದಿಗಳೊಂದಿಗೆ ಕೀರ್ತನೆ ಹಾಡುವ ಮೂಲಕ ಉತ್ಸವ ಉದ್ಘಾಟಿಸಿದ್ದು ಇದೇ ಮೊದಲು' ಎಂದು ಇಸ್ಕಾನ್ನ ಆಯೋಜಕರು ತಿಳಿಸಿದ್ದಾರೆ. ಸುವೇಂದು ಅಧಿಕಾರಿಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ: ಒಬ್ಬ ಸಾವು, 100 ಮಂದಿಗೆ ಗಾಯಇಂದಿನಿಂದ ಪುರಿ ‘ಜಗನ್ನಾಥ ರಥಯಾತ್ರೆ’ ಆರಂಭ: ವಿಶಿಷ್ಟ ಮಹತ್ವ ತಿಳಿಯಿರಿ