ಸಿಯಾ ಗೋಯಲ್ ತಂದೆಯ ಅಂಗಡಿ ಮೇಲೆ FDA ದಾಳಿ: ₹8.14 ಲಕ್ಷದ ಆಹಾರ ಪದಾರ್ಥ ಜಪ್ತಿ
ಪುಣೆ( ಮಹಾರಾಷ್ಟ್ರ): ಇಲ್ಲಿನ ಮಾರ್ಕೆಟ್ ಯಾರ್ಡ್ನಲ್ಲಿರುವ 'ಎಂ/ಎಸ್ ಬಿ.ಜಿ. ಗೋಯಲ್ ಆ್ಯಂಡ್ ಕಂಪನಿ' ಮೇಲೆ ರಾಜ್ಯದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಮೇಲೆ ದಾಳಿ ನಡೆಸಿದ್ದು, ₹8.14 ಲಕ್ಷ ಮೌಲ್ಯದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದೆ.ಈ ಅಂಗಡಿಯು ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ತಂದೆ ಪ್ರ

ಪುಣೆ( ಮಹಾರಾಷ್ಟ್ರ): ಇಲ್ಲಿನ ಮಾರ್ಕೆಟ್ ಯಾರ್ಡ್ನಲ್ಲಿರುವ 'ಎಂ/ಎಸ್ ಬಿ.ಜಿ. ಗೋಯಲ್ ಆ್ಯಂಡ್ ಕಂಪನಿ' ಮೇಲೆ ರಾಜ್ಯದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಅಧಿಕಾರಿಗಳು ಮೇಲೆ ದಾಳಿ ನಡೆಸಿದ್ದು, ₹8.14 ಲಕ್ಷ ಮೌಲ್ಯದ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದೆ.ಈ ಅಂಗಡಿಯು ಪುಣೆಯ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿಯಾ ಗೋಯಲ್ ತಂದೆ ಪ್ರವೀಣ್ ಗೋಯಲ್ ಅವರಿಗೆ ಸೇರಿದ್ದಾಗಿದೆ. ನಿಯಮ ಉಲ್ಲಂಘನೆಯ ಆರೋಪದಡಿ ₹8,14,630 ಮೌಲ್ಯದ 4,172 ಕೆ.ಜಿ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದೆ. ಈ ದಾಳಿಗೂ ಕೇತನ್ ಕೊಲೆ ಪ್ರಕರಣಕ್ಕೂ ಸಂಬಂಧದ ಇದೆಯೇ ಎಂಬ ಬಗ್ಗೆ ಎಫ್ಡಿಎ ಎಲ್ಲಿಯೂ ಉಲ್ಲೇಖಿಸಿಲ್ಲ.ಪರವಾನಗಿ ಇಲ್ಲದೆ ಅಂಗಡಿ ನಡೆಸುತ್ತಿರುವುದು, ಲೇಬಲ್ ನಿಯಮಗಳ ಉಲ್ಲಂಘನೆ ಹಾಗೂ ಕಳಪೆ ಆಹಾರ ಪದಾರ್ಥ ಮಾರಾಟ ಸಂಶಯದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ 'ಎಎನ್ಐ' ವರದಿ ಮಾಡಿದೆ.ಅಧಿಕಾರಿಗಳು ಒಟ್ಟು 1,856 ಕೆಜಿ ಅರಿಶಿನ ಪುಡಿ, 538 ಕೆಜಿ ಎಳ್ಳು ಮತ್ತು 1,778 ಕೆ.ಜಿ ಸೋಯಾ ಮಿನಿ ಚಂಕ್ಸ್ ದಾಸ್ತಾನನ್ನು ವಶಪಡಿಸಿಕೊಂಡಿದೆ. ಕಳಪೆ ಗುಣಮಟ್ಟದ ಶಂಕೆಯಿರುವ 4 ಮಾದರಿಗಳನ್ನು ಪರೀಕ್ಷೆ ಕಳುಹಿಸಲಾಗಿದೆ.ಎಫ್ಡಿಎ ಸಹಾಯಕ ಕಮಿಷನರ್ ನೀಲೇಶ್ ಖೋಸೆ ಅವರ ಮಾರ್ಗದರ್ಶನದಲ್ಲಿ ಆಹಾರ ಸುರಕ್ಷತಾ ಅಧಿಕಾರಿಗಳಾದ ಕೆ.ಎಲ್. ಸೋನಕಂಬ್ಳೆ ಮತ್ತು ಪ್ರತೀಕ್ ಜಾಧವ್ ಈ ದಾಳಿ ನಡೆಸಿದ್ದಾರೆ.ರಹಸ್ಯ ಮದುವೆ: ತನಿಖೆಗಾಗಿ ರಾಜಸ್ಥಾನಕ್ಕೆ ಪೊಲೀಸರ ತಂಡಇನ್ನು ಕೇತನ್ ಅಗರ್ವಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಆರೋಪಿಗಳಾದ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ರಾಜಸ್ಥಾನದ 'ಖಾಟು ಶ್ಯಾಮ್' ದೇವಸ್ಥಾನದಲ್ಲಿ ರಹಸ್ಯವಾಗಿ ಮದುವೆಯಾಗಿದ್ದರು ಎಂಬ ವರದಿಗಳ ಹಿನ್ನೆಲೆಯಲ್ಲಿ, ಸತ್ಯಾಸತ್ಯತೆ ಪರಿಶೀಲಿಸಲು ಪುಣೆ ಗ್ರಾಮಾಂತರ ಪೊಲೀಸರ ತಂಡ ರಾಜಸ್ಥಾನಕ್ಕೆ ತೆರಳಿದೆ.ದೇವಸ್ಥಾನದ ಆವರಣದಲ್ಲಿರುವ ಸಿಸಿಟಿವಿ ಪರಿಶೀಲಿಸಲಾಗಿದ್ದು, ಅಲ್ಲಿ ಯಾವುದೇ ದೃಶ್ಯಾವಳಿಗಳು ಲಭ್ಯವಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅವನಿಲ್ಲದ ಜಗತ್ತು ಶೂನ್ಯ..: ಪ್ರಧಾನಿ ಮೋದಿಗೆ ಕೇತನ್ ತಾಯಿ ಭಾವುಕ ಪತ್ರ