ಬಂಗಾರಪೇಟೆ: ಗಡಿಭಾಗದ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ
ಬಂಗಾರಪೇಟೆ: ತಾಲ್ಲೂಕಿನ ಗಡಿಭಾಗದ ಸರ್ಕಾರಿ ಶಾಲೆಗಳಲ್ಲಿ ನೂರಾರು ಮಕ್ಕಳಿದ್ದರೂ ಕಾಯಂ ಶಿಕ್ಷಕರಿಲ್ಲದ ದುಸ್ಥಿತಿ ಕಾಡುತ್ತಿದೆ.ಕೇವಲ ಅತಿಥಿ ಶಿಕ್ಷಕರಿಂದಲೇ ಗಡಿಭಾಗದ ಅನೇಕ ಶಾಲೆಗಳು ದಿನದೂಡುತ್ತಿವೆ. ನಗರ ಭಾಗದಲ್ಲಿ 15 ಮಕ್ಕಳಿರುವ ಶಾಲೆಗಳಲ್ಲಿ ಇಬ್ಬರು ಕಾಯಂ ಶಿಕ್ಷಕರಿದ್ದಾರೆ. ಸುಮಾರು ಶಾಲೆಗಳಲ್ಲಿ ದೈನಂದಿನ ಆಡಳಿತದಿಂದ ಹಿಡಿದು ಬೋಧನೆಯವರೆಗೆ ಇಡೀ ವ್ಯವಸ್ಥೆ ಅತ

ಬಂಗಾರಪೇಟೆ: ತಾಲ್ಲೂಕಿನ ಗಡಿಭಾಗದ ಸರ್ಕಾರಿ ಶಾಲೆಗಳಲ್ಲಿ ನೂರಾರು ಮಕ್ಕಳಿದ್ದರೂ ಕಾಯಂ ಶಿಕ್ಷಕರಿಲ್ಲದ ದುಸ್ಥಿತಿ ಕಾಡುತ್ತಿದೆ.ಕೇವಲ ಅತಿಥಿ ಶಿಕ್ಷಕರಿಂದಲೇ ಗಡಿಭಾಗದ ಅನೇಕ ಶಾಲೆಗಳು ದಿನದೂಡುತ್ತಿವೆ. ನಗರ ಭಾಗದಲ್ಲಿ 15 ಮಕ್ಕಳಿರುವ ಶಾಲೆಗಳಲ್ಲಿ ಇಬ್ಬರು ಕಾಯಂ ಶಿಕ್ಷಕರಿದ್ದಾರೆ. ಸುಮಾರು ಶಾಲೆಗಳಲ್ಲಿ ದೈನಂದಿನ ಆಡಳಿತದಿಂದ ಹಿಡಿದು ಬೋಧನೆಯವರೆಗೆ ಇಡೀ ವ್ಯವಸ್ಥೆ ಅತಿಥಿ ಶಿಕ್ಷಕರ ಹೆಗಲ ಮೇಲಿದೆ.ಗ್ರಾಮೀಣ ಮತ್ತು ಗಡಿಭಾಗದ ಶಾಲೆಗಳ ಸಬಲೀಕರಣದ ಕುರಿತು ಅಧಿಕಾರಿಗಳು ಭಾಷಣ ಮಾಡುತ್ತಾರೆ. ಆದರೆ, ಗಡಿಭಾಗದಲ್ಲಿ ನೈಜ ಚಿತ್ರಣವೇ ಬೇರೆಯಾಗಿದೆ. ಕನಿಷ್ಠ ಮಕ್ಕಳಿಲ್ಲದ ಶಾಲೆಗಳಲ್ಲಿ ಇಬ್ಬರು ಕಾಯಂ ಶಿಕ್ಷಕರಿದ್ದಾರೆ. ಗಡಿಭಾಗದಲ್ಲಿ ಹೆಚ್ಚು ಮಕ್ಕಳಿದ್ದರೂ ಒಬ್ಬ ಕಾಯಂ ಶಿಕ್ಷಕರಿಲ್ಲ. ಹಾಗಾಗಿ ಗಡಿಭಾಗದಲ್ಲಿ ಹೆಚ್ಚು ಮಕ್ಕಳಿರುವ ಶಾಲೆಗಳನ್ನು ಗುರುತಿಸಿ ನಗರದ ಶಾಲೆಗಳಲ್ಲಿ ಹೆಚ್ಚುವರಿಯಾಗಿರುವ ಶಿಕ್ಷಕರನ್ನು ಇಲ್ಲಿಗೆ ನಿಯೋಜಿಸದಿದ್ದರೆ ಮುಂದಿನ ದಿನಗಳಲ್ಲಿ ಶಾಲೆಗಳಿಗೆ ಬೀಗ ಜಡಿದು ಪ್ರತಿಭಟನೆ ನಡೆಸಲಾಗುವುದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.ದೋಣಿಮಡಗು ಕ್ಲಸ್ಟರ್ ವ್ಯಾಪ್ತಿಯ ಮುಷ್ಟ್ರಹಳ್ಳಿ, ಭುವನಹಳ್ಳಿ, ಸಾಕರಸನಹಳ್ಳಿ, ತಳೂರು, ಮಲ್ಲೇಶ್ ಪಾಳ್ಯ, ಬತ್ತಲಹಳ್ಳಿ, ಗುಂಡಾರ್ಲಹಳ್ಳಿ, ಬೋಗ್ಗಲಹಳ್ಳಿ, ರಾಮಸಂದ್ರ ಹಾಗೂ ಬಲಮಂದೆ ಕ್ಲಸ್ಟರ್ ವ್ಯಾಪ್ತಿಯ ಯರಗೋಳ್, ಚತ್ತಗುಟ್ಲಹಳ್ಳಿ, ರಾಮಕೃಷ್ಣಪುರ, ನಾಡಗುಮ್ಮನಹಳ್ಳಿ, ಬೋಡಪಟ್ಟಿ, ಬಾದಗುಟ್ಟಹಳ್ಳಿ, ಚಿಕ್ಕಕಾಮನಹಳ್ಳಿಯಲ್ಲಿ ನಾಲ್ಕು ವರ್ಷಗಳಿಂದಲೂ ಕಾಯಂ ಶಿಕ್ಷಕರಿಲ್ಲದೆ ಅತಿಥಿ ಶಿಕ್ಷಕರೇ ಶಾಲೆಯನ್ನು ನಡೆಸುತ್ತಿದ್ದಾರೆ.ಇದರಿಂದ ಬೇಸತ್ತ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದು ಮುಂದುವರೆದರೆ ಗಡಿಭಾಗದಲ್ಲಿ ಕನ್ನಡ ಶಾಲೆಗಳು ಶಾಶ್ಚತವಾಗಿ ಮುಚ್ಚುವ ಭೀತಿ ಎದುರಾಗಿದೆ. ಹಾಗಾಗಿ ಶಿಕ್ಷಣ ಇಲಾಖೆ ಎಚ್ಚೆತ್ತು ಕಾಯಂ ಶಿಕ್ಷಕರನ್ನು ನೇಮಿಸಬೇಕಿದೆ.-ಹೆಸರು ಹೇಳಲು ಇಚ್ಛಿಸದ ಅತಿಥಿ ಶಿಕ್ಷಕಶಾಲೆಯಲ್ಲಿ ಕಾಯಂ ಶಿಕ್ಷಕರು ಇಲ್ಲದ್ದಕ್ಕೆ ಬೋಧನೆ ಅಷ್ಟೇ ಅಲ್ಲದೆ ಬಿಸಿಯೂಟದ ಉಸ್ತುವಾರಿ, ಇಲಾಖೆಯ ಆನ್ಲೈನ್ ದಾಖಲಾತಿ ಸೇರಿದಂತೆ ಶಾಲೆಯ ಸಂಪೂರ್ಣ ಆಡಳಿತಾತ್ಮಕ ಜವಾಬ್ದಾರಿ ಅತಿಥಿ ಶಿಕ್ಷಕರೇ ಹೊರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.-ಹಂಸಾನಂದ, ಸಾಮಾಜಿಕ ಕಾರ್ಯಕರ್ತಗಡಿ ಭಾಗದ ಶಾಲೆಗಳಿಗೆ ಬರುವ ಅತಿಥಿ ಶಿಕ್ಷಕರು ಕೇವಲ ಕೆಲವು ತಿಂಗಳು ಇರುತ್ತಾರೆ. ಅವರು ಬದಲಾದಂತೆಲ್ಲಾ ಮಕ್ಕಳಿಗೆ ಕಲಿಕಾ ಶೈಲಿಗೆ ಹೊಂದಿಕೊಳ್ಳುವುದು ಕಷ್ಟ. ಶಾಲೆಯಲ್ಲಿ ಒಬ್ಬರೇ ಕಾಯಂ ಶಿಕ್ಷಕರಿದ್ದರೆ ಆಡಳಿತ ನೋಡುವುದೋ ಅಥವಾ ಮಕ್ಕಳಿಗೆ ಪಾಠ ಮಾಡುವುದೋ? ಗಡಿಭಾಗದ ಬಡ ಮಕ್ಕಳ ಶಿಕ್ಷಣ ಎಂದರೆ ಇಲಾಖೆಗೆ ಅಷ್ಟೊಂದು ನಿರ್ಲಕ್ಷ್ಯವೇಕೆ? ಪಟ್ಟಣದ ಹೆಚ್ಚುವರಿ ಶಿಕ್ಷಕರನ್ನು ಇಲ್ಲಿಗೆ ನಿಯೋಜಿಸಿ. ಬಿ.ಕೆ.ಮಂಜುನಾಥ, ಬಲಮಂದೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯನಗರದ ಸುತ್ತಮುತ್ತಲಿನ ಶಾಲೆಗಳಲ್ಲಿ 10 ರಿಂದ 15 ಮಕ್ಕಳಿದ್ದರೆ ಇಬ್ಬರು ಕಾಯಂ ಶಿಕ್ಷಕರಿದ್ದಾರೆ. ಗಡಿ ಭಾಗದ ಶಾಲೆಗಳಲ್ಲಿ 30 ರಿಂದ 40 ಮಕ್ಕಳಿರುವ ಶಾಲೆಗೆ ಅತಿಥಿ ಶಿಕ್ಷಕರೇ ಗುರುಗಳಾಗಿದ್ದಾರೆ. ನಮ್ಮ ಮಕ್ಕಳೂ ಈ ದೇಶದ ಪ್ರಜೆಗಳಲ್ಲವೇ? ಚಂದ್ರಶೇಖರ್ ಎಸ್.ಪಿ., ಕ್ಷೇತ್ರ ಶಿಕ್ಷಣಾಧಿಕಾರಿ, ಬಂಗಾರಪೇಟೆಸಮಸ್ಯೆಗೆ ಪರಿಹಾರ ನೀಡಲಾಗುವುದು ಶಾಲೆಗಳಲ್ಲಿ ಮಕ್ಕಳ ಅನುಪಾತಕ್ಕೆ ತಕ್ಕಂತೆ ಶಿಕ್ಷಕರ ಕೊರತೆ ಇರುವುದು ಗಮನಕ್ಕೆ ಬಂದಿದೆ. ಗಡಿಭಾಗದ ಶಾಲೆಗೆ ಮೊದಲ ಆದ್ಯತೆಯಾಗಿ ಅತಿಥಿ ಶಿಕ್ಷಕರನ್ನು ನೇಮಿಸಲಾಗಿದೆ. ಪೋಷಕರ ಬೇಡಿಕೆಯಂತೆ ಹೆಚ್ಚುವರಿ ಶಿಕ್ಷಕರ ಗುರುತಿಸುವಿಕೆ ಮತ್ತು ಮರುಹಂಚಿಕೆಯನ್ನು ಪಾರದರ್ಶಕವಾಗಿ ನಡೆಸಿ ಸರಿಪಡಿಸಲಾಗುವುದುಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260716-18-1638639398