ಇರಾಕ್-ಸಿರಿಯಾ ತೈಲ ಪೈಪ್ಲೈನ್ ಪುನರುಜ್ಜೀವನಕ್ಕೆ ಅಮೆರಿಕ ಬೆಂಬಲ
ವಾಷಿಂಗ್ಟನ್: ಇರಾಕ್ ಮತ್ತು ಸಿರಿಯಾ ದೇಶಗಳ ನಡುವಿನ ಕಿರ್ಕುಕ್–ಬಾನಿಯಾಸ್ ಕಚ್ಚಾ ತೈಲ ಪೈಪ್ಲೈನ್ ಅನ್ನು ಪುನರುಜ್ಜೀವನಗೊಳಿಸುವ ಆ ದೇಶಗಳ ಪ್ರಯತ್ನಗಳಿಗೆ ಬೆಂಬಲ ನೀಡಲಿದ್ದೇವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.2003ರ ಅಮೆರಿಕ ನೇತೃತ್ವದ ಇರಾನ್ ಮೇಲಿನ ದಾಳಿಯ ಸಂದರ್ಭದಲ್ಲಿ ಈ ಪೈಪ್ಲೈನ್ಗೆ ತೀವ್ರ ಹಾನಿಯಾಗಿತ್ತು. ಪರಿಣಾಮವಾಗಿ ಹಲ

ವಾಷಿಂಗ್ಟನ್: ಇರಾಕ್ ಮತ್ತು ಸಿರಿಯಾ ದೇಶಗಳ ನಡುವಿನ ಕಿರ್ಕುಕ್–ಬಾನಿಯಾಸ್ ಕಚ್ಚಾ ತೈಲ ಪೈಪ್ಲೈನ್ ಅನ್ನು ಪುನರುಜ್ಜೀವನಗೊಳಿಸುವ ಆ ದೇಶಗಳ ಪ್ರಯತ್ನಗಳಿಗೆ ಬೆಂಬಲ ನೀಡಲಿದ್ದೇವೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.2003ರ ಅಮೆರಿಕ ನೇತೃತ್ವದ ಇರಾನ್ ಮೇಲಿನ ದಾಳಿಯ ಸಂದರ್ಭದಲ್ಲಿ ಈ ಪೈಪ್ಲೈನ್ಗೆ ತೀವ್ರ ಹಾನಿಯಾಗಿತ್ತು. ಪರಿಣಾಮವಾಗಿ ಹಲವು ವರ್ಷಗಳಿಂದ ಇದು ಬಳಕೆಯಿಂದ ಹೊರಗುಳಿದಿದೆ. ಈಗ ಇರಾಕ್ ಮತ್ತು ಸಿರಿಯಾ ಸರ್ಕಾರಗಳು ಇದನ್ನು ಪುನರ್ ನಿರ್ಮಿಸಲು ಮುಂದಾಗಿದ್ದು, ಅಮೆರಿಕ ಈ ಪ್ರಯತ್ನಕ್ಕೆ ರಾಜತಾಂತ್ರಿಕ ಬೆಂಬಲ ನೀಡುತ್ತಿದೆ. ಜೊತೆಗೆ ಅಮೆರಿಕದ ಕಂಪನಿಗಳೂ ಯೋಜನೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.ಈ ಪೈಪ್ಲೈನ್ ಇರಾಕ್ನ ಕಿರ್ಕುಕ್ ತೈಲ ಕ್ಷೇತ್ರಗಳಿಂದ ಸಿರಿಯಾದ ಪಶ್ಚಿಮ ಕರಾವಳಿಯ ಬಾನಿಯಾಸ್ ಬಂದರುವರೆಗೆ ಸಂಪರ್ಕ ಕಲ್ಪಿಸಲಿದೆ. ಇದರ ಮೂಲಕ ಮಧ್ಯಪ್ರಾಚ್ಯದ ತೈಲ ಉತ್ಪಾದನಾ ರಾಷ್ಟ್ರಗಳು ಹೊರ್ಮುಜ್ ಜಲಸಂಧಿ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿವೆ.ಪ್ರಸ್ತುತ ಜಾಗತಿಕ ತೈಲ ಮತ್ತು ಅನಿಲ ಸಾಗಣೆಯ ಪ್ರಮುಖ ಮಾರ್ಗವಾದ ಹೊರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ, ಈ ಪೈಪ್ಲೈನ್ಗೆ ಹೆಚ್ಚಿನ ಮಹತ್ವ ಸಿಕ್ಕಿದೆ. 'ಬ್ಲೂಂಬರ್ಗ್' ವರದಿಯ ಪ್ರಕಾರ, ಅಮೆರಿಕದ ಚೆವ್ರಾನ್ ಕಂಪನಿಯೂ ಈ ಯೋಜನೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಆದರೆ ಈ ಕುರಿತು ಚೆವ್ರಾನ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.Fact Check: ಇರಾಕ್ ಸಂಸದೆ ಮನೆಯಲ್ಲಿ ಚಿನ್ನದ ಒಳಉಡುಪು ಪತ್ತೆ? ಸತ್ಯ ಇಲ್ಲಿದೆಡೊನಾಲ್ಡ್ ಟ್ರಂಪ್ ರಣನೀತಿಗೆ ಜಗ್ಗದ ಇರಾನ್: ಇಕ್ಕಟ್ಟಿನಲ್ಲಿ ಅಮೆರಿಕ ಅಧ್ಯಕ್ಷ