ನಿರೂಪಕ ಅಕುಲ್ ಬಾಲಾಜಿ ನೂತನ ಮನೆಗೆ ಶಿವರಾಜ್ ಕುಮಾರ್ ದಂಪತಿ ಭೇಟಿ: ವಿಡಿಯೊ
ಚಂದನವನದ ಜನಪ್ರಿಯ ನಿರೂಪಕ, ನಟ ಅಕುಲ್ ಬಾಲಾಜಿ ಅವರು ಇತ್ತೀಚೆಗಷ್ಟೆ ಹೊಸದಾಗಿ ಮನೆ ಕಟ್ಟಿಸಿದ್ದರು. ಮನೆಯ ವಿಡಿಯೊವನ್ನು ಅಕುಲ್ ಬಾಲಾಜಿ ಪತ್ನಿ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದೀಗ ಅದೇ ಮನೆಗೆ ನಟ ಶಿವಣ್ಣ ಹಾಗೂ ಪತ್ನಿ ಗೀತಾ ಶಿವರಾಜ್ಕುಮಾರ್ ದಂಪತಿ ಭೇಟಿ ಕೊಟ್ಟಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಪುಟ್ಟ ಮನೆ: ಹೊಸ ನಿವಾಸದ ವಿಡಿಯೊ ಹ

ಚಂದನವನದ ಜನಪ್ರಿಯ ನಿರೂಪಕ, ನಟ ಅಕುಲ್ ಬಾಲಾಜಿ ಅವರು ಇತ್ತೀಚೆಗಷ್ಟೆ ಹೊಸದಾಗಿ ಮನೆ ಕಟ್ಟಿಸಿದ್ದರು. ಮನೆಯ ವಿಡಿಯೊವನ್ನು ಅಕುಲ್ ಬಾಲಾಜಿ ಪತ್ನಿ ಸಾಮಾಜಿಕ ಮಾಧ್ಯಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಇದೀಗ ಅದೇ ಮನೆಗೆ ನಟ ಶಿವಣ್ಣ ಹಾಗೂ ಪತ್ನಿ ಗೀತಾ ಶಿವರಾಜ್ಕುಮಾರ್ ದಂಪತಿ ಭೇಟಿ ಕೊಟ್ಟಿದ್ದಾರೆ. ಪ್ರಕೃತಿಯ ಮಡಿಲಲ್ಲಿ ಪುಟ್ಟ ಮನೆ: ಹೊಸ ನಿವಾಸದ ವಿಡಿಯೊ ಹಂಚಿಕೊಂಡ ಅಕುಲ್ ಬಾಲಾಜಿವಿಜಯ್ ಅವರ ಕೊನೆ ಚಿತ್ರ ಕರುಪ್ಪು ಆಗಬೇಕಿತ್ತು ಜನನಾಯಗನ್ ಅಲ್ಲ ಎಂದ ಬಾಲಾಜಿ View this post on Instagram A post shared by Jo Akul Samarthi (@joakul) ಥೇಟ್ ಶಿವನಂತೆ ವಸ್ತ್ರ ತೊಟ್ಟು ಹೊಸ ಮನೆ ಪ್ರವೇಶಿದ ಶಿವಣ್ಣನ ವಿಡಿಯೊವನ್ನು ಅಕುಲ್ ಬಾಲಾಜಿ ಅವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಪ್ರಕೃತಿಯ ಮಡಿಲಲ್ಲಿ ವಿಭಿನ್ನವಾಗಿ ನಿರ್ಮಾಣ ಮಾಡಿರುವ ಮನೆಯನ್ನು ನೋಡಿ ಶಿವಣ್ಣ ಹಾಗೂ ಪತ್ನಿ ಗೀತಕ್ಕ ಖುಷಿಪಟ್ಟಿದ್ದಾರೆ. ಅಕುಲ್ ಬಾಲಾಜಿ ಅವರು ನೂತನ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್, ಪಾರ್ಟಿ, ಜಿಮ್ ಏರಿಯಾ ಎಲ್ಲದಕ್ಕೂ ಸ್ಥಳವನ್ನು ವಿಂಗಡಿಸಿದ್ದಾರೆ. ಹೊಸ ಮನೆಗೆ ಭೇಟಿ ಕೊಟ್ಟ ಶಿವಣ್ಣ ಅಕುಲ್ ಬಾಲಾಜಿ ದಂಪತಿಗಳಿಗೆ ಶುಭ ಹಾರೈಸಿದ್ದಾರೆ. ಈ ವಿಡಿಯೊ ಹಂಚಿಕೊಂಡ ಪತ್ನಿ ಜ್ಯೋತಿ ಅಕುಲ್, ‘ಕೆಲವು ವ್ಯಕ್ತಿಗಳ ಭೇಟಿ ಜೀವನಪೂರ್ತಿ ನೆನಪಿನಲ್ಲಿ ಉಳಿಯುತ್ತವೆ’ ಎಂದು ಬರೆದುಕೊಂಡಿದ್ದಾರೆ.