ಕೆಎಸ್ಒಯು: ಪ್ರವೇಶ ಪ್ರಕ್ರಿಯೆ ಆರಂಭ, ಸೆ.15ರವರೆಗೆ ಅವಕಾಶ
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2026–27ನೇ ಶೈಕ್ಷಣಿಕ ಸಾಲಿನ ‘ಜುಲೈ ಆವೃತ್ತಿಯ ಪ್ರವೇಶಾತಿ’ ಆರಂಭವಾಗಿದ್ದು, ಸೆ.15ರವರೆಗೆ ಅವಕಾಶವಿದೆ.ಯುಜಿಸಿ ಅನುಮೋದಿತ ಸ್ನಾತಕ/ ಸ್ನಾತಕೋತ್ತರ ಪದವಿ ಕೋರ್ಸ್ಗಳಾದ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಡಬ್ಲ್ಯು, ಬಿಎಲ್ಐಎಸ್ಸಿ, ಬಿಎಸ್ಸಿ–ಜನರಲ್, ಬಿಎಸ್ಸಿ–ಐಟಿ, ಎಂಎ, ಎಂಸಿಜೆ, ಎಂಕಾಂ, ಎಂಎಲ್ಐಎಸ್
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ 2026–27ನೇ ಶೈಕ್ಷಣಿಕ ಸಾಲಿನ ‘ಜುಲೈ ಆವೃತ್ತಿಯ ಪ್ರವೇಶಾತಿ’ ಆರಂಭವಾಗಿದ್ದು, ಸೆ.15ರವರೆಗೆ ಅವಕಾಶವಿದೆ.ಯುಜಿಸಿ ಅನುಮೋದಿತ ಸ್ನಾತಕ/ ಸ್ನಾತಕೋತ್ತರ ಪದವಿ ಕೋರ್ಸ್ಗಳಾದ ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿಎಸ್ಡಬ್ಲ್ಯು, ಬಿಎಲ್ಐಎಸ್ಸಿ, ಬಿಎಸ್ಸಿ–ಜನರಲ್, ಬಿಎಸ್ಸಿ–ಐಟಿ, ಎಂಎ, ಎಂಸಿಜೆ, ಎಂಕಾಂ, ಎಂಎಲ್ಐಎಸ್ಸಿ, ಎಂಸಿಎ, ಎಂಎಸ್ಡಬ್ಲ್ಯು, ಎಂಎಸ್ಸಿ, ಎಂಬಿಎ, ಪಿಜಿ ಸರ್ಟಿಫಿಕೆಟ್ ಪ್ರೋಗ್ರಾಮ್ಗಳು, ಯುಜಿ ಡಿಪ್ಲೊಮಾ ಹಾಗೂ ಸರ್ಟಿಫಿಕೆಟ್ ಕೋರ್ಸ್ಗಳಿಗೆ ಪ್ರವೇಶ ಪಡೆಯಬಹುದು. ಬಿ.ಇಡಿ.ಗೆ ಸಿಇಟಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, 500 ಸೀಟುಗಳಿಗೆ ಮಂಜೂರಾತಿ ದೊರೆತಿದೆ.ಇಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ.ಎ.ಪಿ. ಜ್ಞಾನಪ್ರಕಾಶ್ ಪ್ರವೇಶಾತಿಯ ವಿವರ ನೀಡಿದರು.ಲ್ಯಾಟರಲ್ ಎಂಟ್ರಿ: ಒಟ್ಟು 75 ವಿವಿಧ ಕೋರ್ಸ್/ ಕಾರ್ಯಕ್ರಮಗಳಿಗೆ (10 ಆನ್ಲೈನ್ ಕೋರ್ಸ್) ಪ್ರವೇಶ ಪಡೆಯಬಹುದು. ಕಾರಣಾಂತರಗಳಿಂದ ಪದವಿ ಶಿಕ್ಷಣ ಮೊಟಕುಗೊಳಿಸಿದ್ದವರು, 2ನೇ ಅಥವಾ 3ನೇ ವರ್ಷಕ್ಕೆ ಲ್ಯಾಟರಲ್ ಎಂಟ್ರಿ ಮೂಲಕ ಪ್ರವೇಶ ಪಡೆದು ವಿದ್ಯಾಭ್ಯಾಸ ಮುಂದುವರಿಸಬಹುದಾಗಿದೆ. 26 ವಿಭಾಗಗಳಲ್ಲಿ ಪಿಎಚ್ಡಿ ಮಾಡಬಹುದಾಗಿದೆ. ಕೌಶಲ ಅಭಿವೃದ್ಧಿ ಕೋರ್ಸ್ಗಳೂ ಇವೆ ಎಂದು ತಿಳಿಸಿದರು.ಸಾಂಪ್ರದಾಯಿಕ ವಿವಿಗಳ ಪದವಿಗೂ – ಕೆಎಸ್ಒಯು ಪದವಿಗೂ ವ್ಯತ್ಯಾಸವೇನಿಲ್ಲ. ಕೆಎಸ್ಒಯುನಲ್ಲಿ ಪದವಿ ಪಡೆದವರು ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸಲು, ಪರೀಕ್ಷೆ ತೆಗೆದುಕೊಳ್ಳಲು ಅರ್ಹರಿರುತ್ತಾರೆ. 39 ಪ್ರಾದೇಶಿಕ ಕೇಂದ್ರ ಹಾಗೂ 118 ಕಲಿಕಾರ್ಥಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ. ದೂರಶಿಕ್ಷಣ ನೀಡುವ ರಾಜ್ಯದ ಏಕೈಕ ವಿವಿಯಾಗಿದೆ. ನ್ಯಾಕ್ನಿಂದ ‘ಎ+’ ಗ್ರೇಡ್ ದೊರೆತಿದೆ. ಎಐ ಕೋರ್ಸ್ ಕೂಡ ಲಭ್ಯವಿದೆ ಎಂದರು.ಪ್ರವೇಶ ಶುಲ್ಕ ಏರಿಕೆ ಇಲ್ಲ: ಯುಜಿಸಿ ನಿಯಯದ ಪ್ರಕಾರ, ಪೂರ್ಣಾವಧಿಯಲ್ಲಿ ಒಂದು ಕೋರ್ಸ್ ಹಾಗೂ ದೂರಶಿಕ್ಷಣದಲ್ಲಿ ಮತ್ತೊಂದು ಕೋರ್ಸ್ ಏಕಕಾಲದಲ್ಲಿ ಕಲಿಯಲು ಅವಕಾಶವಿದೆ. ಪ್ರವೇಶ ಶುಲ್ಕದಲ್ಲಿ ಯಾವುದೇ ಏರಿಕೆ ಮಾಡಿಲ್ಲ. ಕಡಿಮೆ ಶುಲ್ಕದಲ್ಲಿ ಉನ್ನತ ಶಿಕ್ಷಣವನ್ನು ಕಲ್ಪಿಸಲಾಗುತ್ತಿದೆ. ಜುಲೈ ಆವೃತ್ತಿಯಲ್ಲಿ ಮೊದಲ ಸೆಮಿಸ್ಟರ್ಗೆ 50ಸಾವಿರ ದಾಖಲಾತಿ ನಿರೀಕ್ಷೆ ಹಾಗೂ ಆನ್ಲೈನ್ನಲ್ಲಿ 30ಸಾವಿರ ಪ್ರವೇಶಾತಿಯ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶುಲ್ಕ ಮರುಪಾವತಿ ಷರತ್ತಿನ ಮೇಲೆ ಪ್ರವೇಶ ಪಡೆಯಬಹುದು. ಕೆಎಸ್ಒಯು ಅಕಾಡೆಮಿಕ ಪ್ಲಾಟ್ಫಾರ್ಮ್ ಆ್ಯಪ್ ಮೂಲಕ ವಿದ್ಯಾರ್ಥಿಗಳು ಕಲಿಕಾ ಸಾಮಗ್ರಿ, ಸಮಗ್ರ ವಿವರ ಪಡೆಯಬಹುದಾಗಿದೆ. ಯೂಟ್ಯೂಬ್ ಚಾನೆಲ್ ಮೂಲಕ ಪಾಠ ಕೇಳಬಹುದಾಗಿದೆ. ಗ್ರಂಥಾಲು ಮತ್ತು ಇ ಗ್ರಂಥಾಲಯ ಸೌಲಭ್ಯವಿದೆ ಎಂದು ಮಾಹಿತಿ ನೀಡಿದರು.ಕುಲಸಚಿವ ನವೀನ್ಕುಮಾರ್ ಎಸ್.ಕೆ., ಡೀನ್ (ಶೈಕ್ಷಣಿಕ) ಪ್ರೊ.ಎಂ. ರಾಮನಾಥಂನಾಯ್ಡ, ಹಣಕಾಸು ಅಧಿಕಾರಿ ನಿರಂಜನರಾಜ್ ಅರಸ್, ಪ್ರೊ.ಬಸನಗೌಡ ಬಿರಾದಾರ ಇದ್ದರು.ಯಾರ್ಯಾರಿಗೆ ಪೂರ್ಣ ಶುಲ್ಕ ವಿನಾಯಿತಿ?* ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ* ಲಿಂಗತ್ವ ಅಲ್ಪಸಂಖ್ಯಾತರಿಗೆ* ಶೇ 50ರಷ್ಟು ದೃಷ್ಟಿಹೀನ ವಿದ್ಯಾರ್ಥಿಗಳಿಗೆ (ಬಿ.ಇಡಿ, ಎಂಬಿಎ ಹೊರತುಪಡಿಸಿ)* ಕೋವಿಡ್–19 ಕಾರಣದಿಂದ ಮೃತರಾದವರ ಮಕ್ಕಳಿಗೆಬೋಧನಾ ಶುಲ್ಕದಲ್ಲಿ ಶೇ 10ರಷ್ಟು ರಿಯಾಯಿತಿ* ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ* ಸೈನ್ಯದಲ್ಲಿರುವವರು ಹಾಗೂ ಮಾಜಿ ಸೈನಿಕರಿಗೆ* ಆಟೊ/ಕ್ಯಾಬ್ ಚಾಲಕರು, ಅವರ ಪತಿ/ಪತ್ನಿ, ಇಬ್ಬರು ಮಕ್ಕಳಿಗೆ* ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯುಕೆಆರ್ಟಿಸಿ, ಕೆಕೆಆರ್ಟಿಸಿ ನೌಕರರಿಗೆ