ಎಸ್ಐಆರ್: 10 ದಿನ ವಿಸ್ತರಣೆ
ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ವೇಳಾಪಟ್ಟಿಯನ್ನು 10 ದಿನ ವಿಸ್ತರಿಸಿ, ಭಾರತೀಯ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ.ಈ ಮೊದಲು ಪ್ರಕಟಿಸಿದ್ದ ವೇಳಾ ಪಟ್ಟಿಯ ಪ್ರಕಾರ, ಬಿಎಲ್ಒಗಳು ಮನೆ– ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳ ವಿತರಣೆ, ಸಂಗ್ರಹ ಮತ್ತು ಡಿಜಿಟಲೀಕರಣ ಕಾರ್ಯವನ್ನು ಇದೇ 29ಕ್ಕೆ ಮುಗಿಸ ಬೇ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್ಐಆರ್) ವೇಳಾಪಟ್ಟಿಯನ್ನು 10 ದಿನ ವಿಸ್ತರಿಸಿ, ಭಾರತೀಯ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ.ಈ ಮೊದಲು ಪ್ರಕಟಿಸಿದ್ದ ವೇಳಾ ಪಟ್ಟಿಯ ಪ್ರಕಾರ, ಬಿಎಲ್ಒಗಳು ಮನೆ– ಮನೆಗೆ ಭೇಟಿ ನೀಡಿ ಗಣತಿ ನಮೂನೆಗಳ ವಿತರಣೆ, ಸಂಗ್ರಹ ಮತ್ತು ಡಿಜಿಟಲೀಕರಣ ಕಾರ್ಯವನ್ನು ಇದೇ 29ಕ್ಕೆ ಮುಗಿಸ ಬೇಕಿತ್ತು. ಈಗ ವೇಳಾಪಟ್ಟಿಯನ್ನು ಆಗಸ್ಟ್ 8ರವರೆಗೆ ವಿಸ್ತರಿಸಲಾಗಿದೆ.ಮನೆ–ಮನೆ ಭೇಟಿ ಅವಧಿಯನ್ನು ವಿಸ್ತರಿಸಿರುವ ಕಾರಣದಿಂದ, ಎಸ್ಐಆರ್ನ ಎಲ್ಲಾ ಪ್ರಕ್ರಿಯೆಗಳ ವೇಳಾಪಟ್ಟಿ ವಿಸ್ತರಣೆಯಾಗಿದೆ. ಅಕ್ಟೋಬರ್ 7ಕ್ಕೆ ಪ್ರಕಟವಾಗಬೇಕಿದ್ದಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 19ಕ್ಕೆ ಪ್ರಕಟವಾಗಲಿದೆ.‘ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆಯ ಪ್ರಗತಿ ಉತ್ತಮವಾಗಿದೆ. ಇನ್ನೂ 15 ದಿನ ಬಾಕಿ ಇರುವಂತೆಯೇ, ಗಣತಿ ನಮೂನೆ ವಿತರಣೆ ಕಾರ್ಯ ಶೇ 95 ಮತ್ತು ಗಣತಿ ನಮೂನೆಗಳ ಡಿಜಿಟಲೀಕರಣ ಶೇ 40ರ ಗಡಿ ದಾಟಿದೆ.ಬದಲಾದ ವೇಳಾಪಟ್ಟಿಕಾರ್ಯ;ವಿವರ;ಮೊದಲ ವೇಳಾಪಟ್ಟಿ;ಪರಿಷ್ಕೃತ ವೇಳಾಪಟ್ಟಿಬಿಎಲ್ಒಗಳಿಂದ ಮನೆ–ಮನೆ ಭೇಟಿ;ಜೂನ್ 30ರಿಂದ ಜುಲೈ 29;ಜೂನ್ 30ರಿಂದ ಆಗಸ್ಟ್ 8ಮತಗಟ್ಟೆಗಳ ಮರುಸಂಯೋಜನೆ;ಆಗಸ್ಟ್ 5;ಆಗಸ್ಟ್ 8ಕರಡು ಮತದಾರರ ಪಟ್ಟಿ ಪ್ರಕಟ;ಆಗಸ್ಟ್ 5;ಆಗಸ್ಟ್ 17ಕ್ಲೇಮು ಮತ್ತು ಆಕ್ಷೇಪಗಳ ಸಲ್ಲಿಕೆ;ಆಗಸ್ಟ್ 5ರಿಂದ ಸೆಪ್ಟೆಂಬರ್ 4;ಆಗಸ್ಟ್ 17ರಿಂದ ಸೆಪ್ಟೆಂಬರ್ 16ಕ್ಲೇಮು ಮತ್ತು ಆಕ್ಷೇಪಗಳ ವಿಲೇವಾರಿ;ಆಗಸ್ಟ್ 5ರಿಂದ ಅಕ್ಟೋಬರ್10;ಆಗಸ್ಟ್ 17ರಿಂದ ಅಕ್ಟೋಬರ್ 15ಮತದಾರರ ಅಂತಿಮ ಪಟ್ಟಿ ಪ್ರಕಟ;ಅಕ್ಟೋಬರ್ 7;ಅಕ್ಟೋಬರ್ 192002ರ ವಿವರ ಯಥಾವತ್ ತುಂಬಿ‘ಎಸ್ಐಆರ್ ಗಣತಿ ನಮೂನೆ ಭರ್ತಿ ಮಾಡುವಾಗ, 2002ರ ಮತದಾರರ ಪಟ್ಟಿಯಲ್ಲಿ ಇರುವ ವಿವರಗಳನ್ನು ಯಥಾವತ್ತು ತುಂಬಬೇಕು. ಈ ಹಂತದಲ್ಲಿ ಯಾವುದೇ ತಿದ್ದುಪಡಿ ಮಾಡಬಾರದು’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಹೇಳಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಕರಡು ಮತದಾರರ ಪಟ್ಟಿ ಪ್ರಕಟವಾದ ನಂತರವಷ್ಟೇ ತಿದ್ದುಪಡಿಗೆ ಅರ್ಜಿ ಸಲ್ಲಿಸಬೇಕು’ ಎಂದರು.‘ಜೂನ್ 29ರಿಂದ ಜುಲೈ 29ರವರೆಗೆ (ಈಗ ಈ ಅವಧಿ ಆಗಸ್ಟ್ 8ರವರೆಗೆ ವಿಸ್ತರಣೆಯಾಗಿದೆ) ಗಣತಿ ನಮೂನೆ ವಿತರಣೆ, ಭರ್ತಿ, ಸಂಗ್ರಹ ಮತ್ತು ಡಿಜಿಟಲೀಕರಣ ಪ್ರಕ್ರಿಯೆ ಮಾತ್ರ ನಡೆಯಲಿದೆ. ಈ ಹಂತದಲ್ಲಿ ಮತದಾರರು ತಿದ್ದುಪಡಿ ಮಾಡಬಾರದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.‘2025ರ ಮತದಾರರ ಪಟ್ಟಿಯಲ್ಲಿ ಇರುವ ಮತದಾರರ ವಿವರಗಳು ಗಣತಿ ನಮೂನೆಯಲ್ಲಿ ಪೂರ್ವ ಮುದ್ರಿತವಾಗಿರುತ್ತವೆ. ಮತದಾರರು, 2002ರ ಮತದಾರರ ಪಟ್ಟಿಯಲ್ಲಿ ಇರುವ ತಮ್ಮ ವಿವರವನ್ನು ನಮೂನೆಯ ಮೊದಲ ಕಾಲಂನಲ್ಲಿ ಯಥಾವತ್ತು ತುಂಬಬೇಕು. ಹೆಸರು,ಜನ್ಮದಿನಾಂಕದಲ್ಲಿ ವ್ಯತ್ಯಾಸವಿದ್ದರೆ ಅದನ್ನು ಸರಿಪಡಿಸ ಬಾರದು’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರು ವಿವರಿಸಿದರು.‘2002ರ ಮತದಾರರ ಪಟ್ಟಿಯಲ್ಲಿ ಮತದಾರರ ಸ್ವವಿವರ ಇಲ್ಲದೇ ಇದ್ದಲ್ಲಿ, ಅಂತಹವರು ನಮೂನೆಯ ಎರಡನೇ ಕಾಲಂನಲ್ಲಿ ತಮ್ಮ ತಂದೆ/ತಾಯಿ/ಅಜ್ಜಿ/ತಾತ ಅವರಲ್ಲಿ ಒಬ್ಬರ ವಿವರಗಳನ್ನು ತುಂಬಬೇಕು. ಇಲ್ಲಿಯೂ ಮತದಾರರು 2002ರ ಮತದಾರರ ಪಟ್ಟಿಯಲ್ಲಿ ಇರುವ ತಮ್ಮ ಪೋಷಕರ ವಿವರಗಳನ್ನು ಯಥಾವತ್ತಾಗಿ ಭರ್ತಿ ಮಾಡಬೇಕು. ಯಾವುದೇ ತಿದ್ದುಪಡಿ ಮಾಡಬಾರದು’ ಎಂದು ಮಾಹಿತಿ ನೀಡಿದರು.ಮತಗಟ್ಟೆಗಳಲ್ಲಿ ವಿಶೇಷ ಶಿಬಿರಗಣತಿ ನಮೂನೆ ವಿತರಣೆ, ಭರ್ತಿ ಮಾಡುವಲ್ಲಿ ಮತದಾರರಿಗೆ ನೆರವು ನೀಡುವ ಸಲುವಾಗಿ ರಾಜ್ಯದ ಎಲ್ಲ ಮತಗಟ್ಟೆಗಳಲ್ಲಿ ಜುಲೈ 18–19, ಜುಲೈ 25–26ರ ನಾಲ್ಕು ದಿನ ವಿಶೇಷ ಶಿಬಿರ ನಡೆಸಲಾಗುತ್ತದೆ ಎಂದು ಅನ್ಬುಕುಮಾರ್ ತಿಳಿಸಿದರು.ಎಸ್ಐಆರ್ ಪ್ರಕ್ರಿಯೆಯ ಅವಧಿ ವಿಸ್ತರಣೆಯಾಗಿದ್ದು, ಹೆಚ್ಚುವರಿ ಅವಧಿಯ ವಾರಾಂತ್ಯದಲ್ಲೂ ವಿಶೇಷ ಶಿಬಿರ ಇರುತ್ತದೆಯೇ ಎಂಬುದು ಖಚಿತವಾಗಿಲ್ಲ.ವಿತರಣೆ: ಶೇ 95.6ರಷ್ಟು ಪ್ರಗತಿ5.30 ಕೋಟಿ ಈವರೆಗೆ ವಿತರಿಸಲಾದ ಗಣತಿ ನಮೂನೆಗಳು2.25 ಕೋಟಿ ಈವರೆಗೆ ಮತದಾರರಿಂದ ಸಂಗ್ರಹಿಸಿ, ಡಿಜಿಟಲೀಕರಿಸಿದ ಗಣತಿ ನಮೂನೆಗಳ ಸಂಖ್ಯೆ2.11 ಲಕ್ಷ ಆನ್ಲೈನ್ ಮೂಲಕ ಮತದಾರರೇ ಸಲ್ಲಿಸಿರುವ ಗಣತಿ ನಮೂನೆಗಳು14.49 ಲಕ್ಷ ಸ್ಥಳದಲ್ಲಿ ಇಲ್ಲದ, ವಿಳಾಸ ಬದಲಾದ, ಮೃತಪಟ್ಟ ಮತ್ತು ಒಂದಕ್ಕಿಂತ ಹೆಚ್ಚು ಮತದಾರರ ಚೀಟಿ ಹೊಂದಿದ ಪ್ರಕರಣಗಳು13 ಗಣತಿ ನಮೂನೆ ವಿತರಣೆಯಲ್ಲಿ ಶೇ 100ರಷ್ಟು ಪ್ರಗತಿ ಸಾಧಿಸಿರುವ ಜಿಲ್ಲೆಗಳು11 ಗಣತಿ ನಮೂನೆ ವಿತರಣೆಯಲ್ಲಿ ಶೇ 99ರಷ್ಟು ಪ್ರಗತಿ ಸಾಧಿಸಿರುವ ಜಿಲ್ಲೆಗಳು