ಧಾರವಾಡದಲ್ಲಿ ಅಣಬೆ ಉತ್ಪಾದನೆ ತರಬೇತಿ ಜುಲೈ 24 ರಂದು
ಧಾರವಾಡ: ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ (ಕುಂಬಾಪುರ ಫಾರ್ಮ್) ವತಿಯಿಂದ `ಅಣಬೆ ಉತ್ಪಾದನೆ' ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಜುಲೈ 24 ರಂದು ನಡೆಯಲಿದೆ. ತರಬೇತಿಯಲ್ಲಿ ತಜ್ಞರಿಂದ ಪ್ರಾತ್ಯಕ್ಷಿಕೆ ಮೂಲಕ ಗುಣಮಟ್ಟದ ಅಣಬೆ ಉತ್ಪಾದನೆ, ಸಂಗ್ರಹಣೆ, ಪ್ಯಾಕಿಂಗ್, ಲೇಬಲಿಂಗ್ ವಿಧಾನಗಳು ಹಾಗೂ ಮಾರುಕಟ್ಟೆ ಅವಕಾಶಗಳ ಬಗ್ಗೆ ತಾಂತ್ರಿಕ ಮಾ

ಧಾರವಾಡ: ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ (ಕುಂಬಾಪುರ ಫಾರ್ಮ್) ವತಿಯಿಂದ `ಅಣಬೆ ಉತ್ಪಾದನೆ' ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮ ಜುಲೈ 24 ರಂದು ನಡೆಯಲಿದೆ. ತರಬೇತಿಯಲ್ಲಿ ತಜ್ಞರಿಂದ ಪ್ರಾತ್ಯಕ್ಷಿಕೆ ಮೂಲಕ ಗುಣಮಟ್ಟದ ಅಣಬೆ ಉತ್ಪಾದನೆ, ಸಂಗ್ರಹಣೆ, ಪ್ಯಾಕಿಂಗ್, ಲೇಬಲಿಂಗ್ ವಿಧಾನಗಳು ಹಾಗೂ ಮಾರುಕಟ್ಟೆ ಅವಕಾಶಗಳ ಬಗ್ಗೆ ತಾಂತ್ರಿಕ ಮಾಹಿತಿ ನೀಡಲಾಗುವುದು.ಆಸಕ್ತರು ಜುಲೈ 22 ರೊಳಗೆ ₹500 ತರಬೇತಿ ಶುಲ್ಕ ಪಾವತಿಸಿ ಹೆಸರು ನೋಂದಾಯಿಸಬೇಕು. ಮಾಹಿತಿಗಾಗಿ ಮೊ: 7892770955 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260717-24-1474946809
Read the complete story at Prajavani