ಇರಾನ್ ಮತ್ತು ಅಮೆರಿಕ: ಯುದ್ಧ ಕೊನೆಗೊಳಿಸಿ; ಪಾಕ್
ಇಸ್ಲಾಮಾಬಾದ್ (ಪಿಟಿಐ): ಇರಾನ್ ಮತ್ತು ಅಮೆರಿಕ ಯುದ್ಧವನ್ನು ಕೊನೆ ಗೊಳಿಸಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗುವಂತೆ ಪಾಕಿಸ್ತಾನ ಗುರುವಾರ ಆಗ್ರಹಿಸಿದೆ. ಇರಾನ್ ಮತ್ತು ಅಮೆರಿಕದ ನಡುವಿನ ಸಂಘರ್ಷ ಮತ್ತೆ ಭುಗಿಲೆದ್ದಿರುವಾಗಲೇ ಪಾಕ್ ಈ ಕರೆ ನೀಡಿದೆ.ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ತಾಹೀರ್ ಅಂದ್ರಾಬಿ ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡ

ಇಸ್ಲಾಮಾಬಾದ್ (ಪಿಟಿಐ): ಇರಾನ್ ಮತ್ತು ಅಮೆರಿಕ ಯುದ್ಧವನ್ನು ಕೊನೆ ಗೊಳಿಸಿ, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಮುಂದಾಗುವಂತೆ ಪಾಕಿಸ್ತಾನ ಗುರುವಾರ ಆಗ್ರಹಿಸಿದೆ. ಇರಾನ್ ಮತ್ತು ಅಮೆರಿಕದ ನಡುವಿನ ಸಂಘರ್ಷ ಮತ್ತೆ ಭುಗಿಲೆದ್ದಿರುವಾಗಲೇ ಪಾಕ್ ಈ ಕರೆ ನೀಡಿದೆ.ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ತಾಹೀರ್ ಅಂದ್ರಾಬಿ ಮಾಧ್ಯಮಗಳೊಂದಿಗೆ ಈ ಕುರಿತು ಮಾತನಾಡಿದ್ದಾರೆ. ಇರಾನ್ ಮತ್ತು ಅಮೆರಿಕದ ನಡುವೆ ಶಾಶ್ವತ ಶಾಂತಿ ಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಉಭಯ ರಾಷ್ಟ್ರಗಳು ಮತ್ತೆ ಸಂಘರ್ಷ ತೀವ್ರಗೊಳಿ ಸಿರುವುದರಿಂದ ಮಧ್ಯಂತರ ಶಾಂತಿ ಒಪ್ಪಂದದ ಪ್ರಯತ್ನಗಳೂ ಹಳಿ ತಪ್ಪುತ್ತಿವೆ ಎಂದಿದ್ದಾರೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260717-51-1004292250
Read the complete story at Prajavani