70 ಪ್ರಕರಣ ಭೇದಿಸಿ 94 ಆರೋಪಿಗಳ ಸೆರೆ
ಬೆಂಗಳೂರು: ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಹಾಗೂ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ್ದ ವಾಹನ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 70 ಪ್ರಕರಣಗಳನ್ನು ಭೇದಿಸಿರುವ ಉತ್ತರ ವಿಭಾಗದ 13 ಠಾಣೆಗಳ ಪೊಲೀಸರು, 94 ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತರಿಂದ ₹4.91 ಕೋಟಿ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದ ಪೊಲೀಸರು, ಆರ್.ಟಿ ನಗರ ಪೊಲೀಸ್ ಠಾಣೆ ಮುಂಭಾಗದ ಎಚ್ಎಂಟಿ ಆ

ಬೆಂಗಳೂರು: ಮನೆಗೆ ನುಗ್ಗಿ ಚಿನ್ನಾಭರಣ ಕಳ್ಳತನ ಹಾಗೂ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಿದ್ದ ವಾಹನ ಕಳವು ಪ್ರಕರಣಗಳು ಸೇರಿದಂತೆ ಒಟ್ಟು 70 ಪ್ರಕರಣಗಳನ್ನು ಭೇದಿಸಿರುವ ಉತ್ತರ ವಿಭಾಗದ 13 ಠಾಣೆಗಳ ಪೊಲೀಸರು, 94 ಆರೋಪಿಗಳನ್ನು ಬಂಧಿಸಿದ್ದಾರೆ.ಬಂಧಿತರಿಂದ ₹4.91 ಕೋಟಿ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದ ಪೊಲೀಸರು, ಆರ್.ಟಿ ನಗರ ಪೊಲೀಸ್ ಠಾಣೆ ಮುಂಭಾಗದ ಎಚ್ಎಂಟಿ ಆಟದ ಮೈದಾನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಆ ಸ್ವತ್ತುಗಳನ್ನು ಮಾಲೀಕರಿಗೆ ಹಸ್ತಾಂತರ ಮಾಡಿದರು. ಬಂಧಿತರಿಂದ 2 ಕೆ.ಜಿ 462 ಗ್ರಾಂ ಆಭರಣ, 11 ಗ್ರಾಂ ವಜ್ರದ ಆಭರಣ, 2 ಕೆ.ಜಿ 381 ಗ್ರಾಂ ಬೆಳ್ಳಿಯ ವಸ್ತುಗಳು, 64 ದ್ವಿಚಕ್ರ ವಾಹನಗಳು, ನಾಲ್ಕು ಆಟೊ, ವಿವಿಧ ಕಂಪನಿಯ 71 ಮೊಬೈಲ್, ಒಂದು ಲ್ಯಾಪ್ಟಾಪ್, ಒಂದು ಟಿ.ವಿ, ಐದು ಸಿಲಿಂಡರ್, 11 ರೇಷ್ಮೆ ಸೀರೆಗಳು ಹಾಗೂ ₹34.34 ಲಕ್ಷ ನಗದು ವಶಕ್ಕೆ ಪಡೆಯಲಾಗಿತ್ತು.ಮಲ್ಲೇಶ್ವರ, ಶ್ರೀರಾಮಪುರ, ರಾಜಾಜಿನಗರ, ಸುಬ್ರಮಣ್ಯಪುರ, ಮಹಾಲಕ್ಷ್ಮಿಲೇಔಟ್, ನಂದಿನಿಲೇಔಟ್, ಯಶವಂತಪುರ ಸೇರಿ ಉತ್ತರ ವಿಭಾಗದ 13 ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳಿಂದ ಜಪ್ತಿ ಮಾಡಿಕೊಳ್ಳಲಾದ ವಾಹನಗಳು, ಲ್ಯಾಪ್ಟಾಪ್, ಚಿನ್ನದ ಆಭರಣ, ಮೊಬೈಲ್ ಫೋನ್, ಸಿಲಿಂಡರ್ಗಳನ್ನು ವಾರಸುದಾರರಿಗೆ ಹಸ್ತಾಂತರ ಮಾಡಲಾಯಿತು ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ಕುಮಾರ್ ಸಿಂಗ್ ತಿಳಿಸಿದರು.‘ನಗರದಲ್ಲಿ ಡ್ರಗ್ಸ್ ಮಾರಾಟದ ವಿರುದ್ಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಇದುವರೆಗೆ ₹376 ಕೋಟಿ ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದೇವೆ. ಮುಂದಿನ 2 ವರ್ಷಗಳಲ್ಲಿ ನಗರವನ್ನು ಮಾದಕ ವಸ್ತುಗಳ ಮುಕ್ತ ನಗರವನ್ನಾಗಿ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.ಪೊಲೀಸರ ಕಾರ್ಯಾಚರಣೆ ವಿವರ ಪೊಲೀಸ್ ಠಾಣೆಬಂಧಿತರ ಸಂಖ್ಯೆ;ಪ್ರಕರಣ ಪತ್ತೆ;ಜಪ್ತಿಯಾದ ವಸ್ತುಗಳ ಮೌಲ್ಯ ಮಲ್ಲೇಶ್ವರ;12;14;₹1.84 ಕೋಟಿಶ್ರೀರಾಮಪುರ;1;2;₹2.90 ಲಕ್ಷರಾಜಾಜಿನಗರ;8;8;₹17.23 ಲಕ್ಷಸುಬ್ರಮಣ್ಯಪುರ;1;3;₹4.12 ಲಕ್ಷಮಹಾಲಕ್ಷ್ಮಿಲೇಔಟ್;4;2;₹2.20 ಲಕ್ಷ ನಂದಿನಿ ಲೇಔಟ್;3;7;₹48.50 ಲಕ್ಷಯಶವಂತಪುರ;6;9;₹36.37 ಲಕ್ಷಆರ್ಎಂಸಿ ಯಾರ್ಡ್;1;1;₹23 ಲಕ್ಷಜಾಲಹಳ್ಳಿ;1;1;₹3.78 ಲಕ್ಷಜೆ.ಸಿ ನಗರ;7;13;₹30.10 ಲಕ್ಷಆರ್.ಟಿ ನಗರ;14;9;₹30.18 ಲಕ್ಷ ಸಂಜಯನಗರ;9;19;₹27.44 ಲಕ್ಷಹೆಬ್ಬಾಳ;5;6;₹82.01 ಲಕ್ಷ