ಕರುನಾಡಿಗೆ ಬರದ ಛಾಯೆ, ಟ್ರಂಪ್ ತಲೆಗೆ ಇನಾಮು ಸೇರಿ ಈ ದಿನದ ಪ್ರಮುಖ ಸುದ್ದಿಗಳು
ರಾಜ್ಯ, ರಾಷ್ಟ್ರೀಯ, ವಿದೇಸ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ... ಅರ್ಧ ರಾಜ್ಯಕ್ಕೆ ವರುಣ ಅರ್ಧಚಂದ್ರ: 157 ತಾಲ್ಲೂಕುಗಳಲ್ಲಿ ಬರದ ಛಾಯೆ ಬೆಂಗಳೂರು: ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗದ ಕಾರಣ, ಕರುನಾಡನ್ನು ಬರದ ಛಾಯೆ ಆವರಿಸಿದೆ. 157 ತಾಲ್ಲೂಕುಗಳಲ್ಲಿ ಮಳೆಯ ಕೊರತೆ ಇದ್ದು, 15 ತಾಲ್ಲೂಕುಗಳಲ್ಲಿ ಮಾತ

ರಾಜ್ಯ, ರಾಷ್ಟ್ರೀಯ, ವಿದೇಸ, ವಾಣಿಜ್ಯ ಹಾಗೂ ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ... ಅರ್ಧ ರಾಜ್ಯಕ್ಕೆ ವರುಣ ಅರ್ಧಚಂದ್ರ: 157 ತಾಲ್ಲೂಕುಗಳಲ್ಲಿ ಬರದ ಛಾಯೆ ಬೆಂಗಳೂರು: ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆಯಾಗದ ಕಾರಣ, ಕರುನಾಡನ್ನು ಬರದ ಛಾಯೆ ಆವರಿಸಿದೆ. 157 ತಾಲ್ಲೂಕುಗಳಲ್ಲಿ ಮಳೆಯ ಕೊರತೆ ಇದ್ದು, 15 ತಾಲ್ಲೂಕುಗಳಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಮುಂದಿನ ದಿನಗಳಲ್ಲಿ ವಾಡಿಕೆಯಷ್ಟಾದರೂ ಮಳೆ ಸುರಿಯದಿದ್ದರೆ ಕುಡಿಯುವ ನೀರಿಗೂ ಸಮಸ್ಯೆ ಸೃಷ್ಟಿಯಾಗುವ ಆತಂಕ ಎದುರಾಗಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿಸಚಿವ ಸಂಪುಟ : ಇದೇ 20ಕ್ಕೆ ಮತ್ತೆ ಚರ್ಚೆ ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಲಭ್ಯರಿಲ್ಲದ ಕಾರಣ, ಹೈಕಮಾಂಡ್ ಅಂಗಳದಲ್ಲಿ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕುರಿತ ಚರ್ಚೆ ಅಪೂರ್ಣಗೊಂಡಿದೆ. ಇದೇ 20ರ ಸೋಮವಾರ ಮತ್ತೊಮ್ಮೆ ಸಭೆ ಸೇರಿ, ಸಂಪುಟಕ್ಕೆ ಸೇರ್ಪಡೆಯಾಗುವವರ ಯಾದಿಯನ್ನು ಆಖೈರುಗೊಳಿಸುವ ಸಂಭವ ಇದೆ. ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿಮಳೆರಾಯ ಮುನಿಸ್ಕೊಂಡ್ ಹೋಗ್ಯಾನ: ಗುಳೆ ಹೊರಟ ಕಲ್ಯಾಣ ಕರ್ನಾಟಕದ ರೈತರು ಯಾದಗಿರಿ: ‘ಬಿತ್ತಿಗಿಗೆ ಆಶಾ ತೋರ್ಸಿ ನಾಕ್ ಹನಿ ಸುರ್ದ ಮಳಿ ಈಗ ಮಟಮಾಯವಾಗೈತಿ. ಬಿತ್ತಿದ್ದ ಬೆಳೆಗಳು ಎಲೆ ತುದ್ಯಾಗ ಜೀವ ಹಿಡ್ಕೊಂಡು ಗೇಣುದ್ದ ಬೆಳೆದು ಬಾಡಿ ಮುಗ್ಗರಿಸ್ಯಾವ. ನೊಗ ಹೊತ್ತು ಅನ್ನ ಕೊಡುವ ಎತ್ತುಗಳಿಗೆ ಹಸಿ ಮೇವಿಲ್ಲ. ಹೊಟ್ಟಿ ತುಂಬ ಕುಡಿಯಲು ನೀರಿಲ್ಲ. ಹಿಂದೆಂದೂ ಕಾಣದಂತ ಬರಗಾಲ ಬಂದು ನಮ್ಮನ್ನು ಮುಕ್ಕಿ–ಮುಕ್ಕಿ ತಿನ್ನಕತ್ತೈತಿ...’ಹೀಗೆ ಬರಗಾಲ ತಂದೊಡ್ಡಿರುವ ಸರಣಿ ಸಂಕಷ್ಟಗಳ ಬಗ್ಗೆ ನೋವಿನಿಂದ ನುಡಿದವರು ಗುರುಮಠಕಲ್ ತಾಲ್ಲೂಕಿನ ಆಶಾಪುರ ತಾಂಡಾದ ರೈತ ಭೀಮಪ್ಪ ದಂಡಪ್ಪ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿನೀಟ್: 11.21 ಲಕ್ಷ ವಿದ್ಯಾರ್ಥಿಗಳು ಅರ್ಹ ನವದೆಹಲಿ(ಪಿಟಿಐ): ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಕ್ಕಾಗಿನ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್–ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ಗುರುವಾರ ಪ್ರಕಟಿಸಿದ್ದು, ಪಂಜಾಬ್ನ ಆರ್ಯನ್ ಗುಪ್ತ ಹಾಗೂ ಹರಿಯಾಣದ ಪಾಂಶುಲ್ ಬನ್ಸಲ್ ಅಗ್ರ ಸ್ಥಾನ ಪಡೆದಿದ್ದಾರೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿಇಂದು ಎನ್ಡಿಎ ಸದನ ನಾಯಕರ ಸಭೆ? ನವದೆಹಲಿ(ಪಿಟಿಐ): ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ, ವಿಪಕ್ಷಗಳ ಆಕ್ರಮಣಕಾರಿ ತಂತ್ರಕ್ಕೆ ಹೂಡಬೇಕಾದ ಪ್ರತಿತಂತ್ರ ಕುರಿತಂತೆ ಚರ್ಚಿಸಲು ಎನ್ಡಿಎ ಮೈತ್ರಿಕೂಟದ ಅಂಗಪಕ್ಷಗಳ ಸದನ ನಾಯಕರು ಇದೇ 17ಎಂದು ಸಭೆ ನಡೆಸಲಿದ್ದಾರೆ ಎಂದು ಮೂಲಗಳು ಗುರುವಾರ ಹೇಳಿವೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿಟ್ರಂಪ್ ತಲೆಗೆ 10 ಮಿಲಿಯನ್ ಡಾಲರ್ ಇನಾಮು ಘೋಷಿಸಿದ ಇರಾಕ್ ಸಶಸ್ತ್ರ ಗುಂಪು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲುವವರಿಗೆ 10 ಮಿಲಿಯನ್ ಡಾಲರ್ (ಸುಮಾರು ₹83 ಕೋಟಿ) ಬಹುಮಾನ ನೀಡುವುದಾಗಿ ಇರಾಕ್ನ ಸಶಸ್ತ್ರ ಗುಂಪೊಂದು ಘೋಷಿಸಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿಇರಾನ್ ಸೇತುವೆಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ: 7 ಸಾವು, ಹೆಚ್ಚಿದ ಉದ್ವಿಗ್ನತೆ ಟೆಹರಾನ್: ದಕ್ಷಿಣ ಇರಾನ್ನ ಸೇತುವೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಪಡೆಗಳು ವೈಮಾನಿಕ ದಾಳಿ ನಡೆಸಿವೆ. ಅವಘಡದಲ್ಲಿ 7 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿಆಳ –ಅಗಲ | ಕೆಪಿಎಸ್ಸಿ ವಿಶ್ವಾಸಾರ್ಹತೆ ಪಾತಾಳಕ್ಕೆ ಸರ್ಕಾರಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಹೊಣೆ ಹೊತ್ತಿರುವ ‘ಕರ್ನಾಟಕ ಲೋಕಸೇವಾ ಆಯೋಗ’ದ (ಕೆಪಿಎಸ್ಸಿ) ಅಧ್ಯಕ್ಷ ಶಿವಶಂಕರಪ್ಪ ಎಸ್. ಸಾಹುಕಾರ ಅವರ ಅಮಾನತಿನಿಂದಾಗಿ ಈ ಸಂಸ್ಥೆಯ ಮೇಲಿನ ವಿಶ್ವಾಸಾರ್ಹತೆಗೆ ಅತಿದೊಡ್ಡ ಹೊಡೆತ ಬಿದ್ದಿದೆ. ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿಸಂಪಾದಕೀಯ: ವಾಂಗ್ಚೂಕ್ರ ಉಪವಾಸ ಸತ್ಯಾಗ್ರಹ, ನೈತಿಕ ರಾಜಕೀಯದ ಮೌಲ್ಯಮಾದರಿ ಉಪವಾಸ ನಿಲ್ಲಿಸುವಂತೆ ರಾಜಕೀಯ ನಾಯಕರು ಮತ್ತು ಬೆಂಬಲಿಗರು ಮತ್ತೆ ಮತ್ತೆ ಮಾಡಿಕೊಳ್ಳುತ್ತಿರುವ ಮನವಿಗಳ ನಡುವೆಯೂ ಸಾಮಾಜಿಕ ಹೋರಾಟಗಾರ ಸೊನಮ್ ವಾಂಗ್ಚೂಕ್ ಅವರು ದೆಹಲಿಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಉಪವಾಸವನ್ನು ಮುಂದುವರಿಸಿದ್ದಾರೆ. ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿಎರಡನೇ ಏಕದಿನ ಪಂದ್ಯ: ಭಾರತ ತಂಡದ ವಿರುದ್ಧ ಇಂಗ್ಲೆಂಡ್ಗೆ ಗೆಲುವು ಕಾರ್ಡಿಫ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಇಂಗ್ಲೆಂಡ್ ಗೆಲುವು ಸಾಧಿಸಿದೆ.ಪೂರ್ತಿ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ