ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾನಹಾನಿ ಕೇಸ್: ಬಸನಗೌಡ ಪಾಟೀಲ ಯತ್ನಾಳ್
ಶ್ರೀರಂಗಪಟ್ಟಣ: ಆರ್ಎಎಸ್ಎಸ್ ಸಂಘಟನೆಯನ್ನು ನಿರಂತರವಾಗಿ ತೆಗಳುತ್ತಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.ಪಟ್ಟಣದ ಐತಿಹಾಸಿಕ ಮೂಡಲಬಾಗಿಲು ಆಂಜನೇಯ ಮತ್ತು ಕ್ಷಣಾಂಬಿಕಾ ದೇವಾಲಯಗಳಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.ತಮ್ಮನ್

ಶ್ರೀರಂಗಪಟ್ಟಣ: ಆರ್ಎಎಸ್ಎಸ್ ಸಂಘಟನೆಯನ್ನು ನಿರಂತರವಾಗಿ ತೆಗಳುತ್ತಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.ಪಟ್ಟಣದ ಐತಿಹಾಸಿಕ ಮೂಡಲಬಾಗಿಲು ಆಂಜನೇಯ ಮತ್ತು ಕ್ಷಣಾಂಬಿಕಾ ದೇವಾಲಯಗಳಲ್ಲಿ ಶುಕ್ರವಾರ ಪೂಜೆ ಸಲ್ಲಿಸಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.ತಮ್ಮನ್ನು 2028ಕ್ಕೆ ಮುಖ್ಯಮಂತ್ರಿ ಅಭ್ಯರ್ಥಿ ಮಾಡಲೆಂದು ಪ್ರಿಯಾಂಕ್ ಖರ್ಗೆ ಅವರು ಆರ್ಎಸ್ಎಸ್ ಸಂಘಟನೆಯನ್ನು ತೆಗಳುತ್ತಿದ್ದಾರೆ. ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿರುವುದರಿಂದ ನಾಳೆಯಿಂದ ಜಾಮೀನು ಪಡೆದು ಓಡಾಡಬೇಕಾಗುತ್ತದೆ ಎಂದರು.‘ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಆಂದೋಲನ ಶುರುವಾಗಿದೆ. ರಾಜ್ಯದಲ್ಲಿ ಬಿಜೆಪಿ ವಿರೋಧ ಪಕ್ಷವಾಗಿ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ನರೇಂದ್ರ ಮೋದಿ ಅವರನ್ನು ಬೈಯ್ದರೆ ರಾಹುಲ್ ಗಾಂಧಿಗೆ ಸಂತೋಷ. ಅವರೊಬ್ಬ ವಿಘ್ನ ಸಂತೋಷಿ’ ಎಂದು ವ್ಯಂಗ್ಯವಾಡಿದರು.ಶ್ರೀರಂಗಪಟ್ಟಣದಲ್ಲಿ ಈ ಹಿಂದೆ ಇದ್ದ ಸ್ಥಳದಲ್ಲೇ ಮೂಡಲಬಾಗಿಲ ಆಂಜನೇಯ ದೇವರ ಮೂರ್ತಿಯನ್ನು ಮರು ಪ್ರತಿಷ್ಠಾಪಿಸುವುದು ಹಿಂದೂಗಳ ಸಂಕಲ್ಪವಾಗಿದೆ. ಮೂಡಲಬಾಗಿಲ ಆಂಜನೇಯ ದೇವರ ಮೂರ್ತಿ ಎಲ್ಲಿತ್ತು ಎಂಬುದಕ್ಕೆ ಸಾಕಷ್ಟು ಕುರುಹುಗಳು ಕಣ್ಣಿಗೆ ಕಾಣುತ್ತಿವೆ. ಅಯೋಧ್ಯೆಯ ರಾಮಮಂದಿರದಂತೆ ಇಲ್ಲಿ ಉತ್ಖನನ ಮಾಡುವ ಅಗತ್ಯ ಇಲ್ಲ ಎಂದರು.ಬಾಂಗ್ಲಾ ಮತ್ತು ಕೇರಳದಲ್ಲಿ ಹಿಂದೂಗಳ ಸ್ಥಿತಿ ಶೋಚನೀಯವಾಗಿದೆ. ಕಾಂಗ್ರೆಸ್ ತುಷ್ಟೀಕರಣ ನೀತಿ ಅನುಸರಿಸುತ್ತಿದ್ದು, ಹಿಂದೂ– ಮುಸ್ಲಿಂ ಸಂಘರ್ಷಕ್ಕೆ ಕಾರಣವಾಗಿದೆ ಎಂದು ಟೀಕಿಸಿದರು.