ಅಶ್ಲೀಲ ವಿಡಿಯೊ ನೋಡಿ 15ರ ಬಾಲಕಿ ಮೇಲೆ ಚಿಕ್ಕಪ್ಪ, ಚಾಲಕನಿಂದ ಸಾಮೂಹಿಕ ಅತ್ಯಾಚಾರ
ಕಾನ್ಪುರ: ಟ್ರಕ್ವೊಂದರಲ್ಲಿ 15 ವರ್ಷದ ಬಾಲಕಿ ಮೇಲೆ ಆಕೆಯ ಚಿಕ್ಕಪ್ಪ ಮತ್ತು ಚಾಲಕ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಅತ್ಯಾಚಾರದ ನಂತರ ಬಾಲಕಿ ಸಜೆಟಿಯ ಕಾನ್ಪುರ-ಸಾಗರ್ ಹೆದ್ದಾರಿಯಲ್ಲಿರುವ ಅಲಿಯಾಪುರ ಟೋಲ್ ಪ್ಲಾಜಾ ಬಳಿ ಚಲಿಸುತ್ತಿದ್ದ ಟ್ರಕ್ನಿಂದ ಹಾರಿ ಹೇಗೋ ಮನೆ ತಲುಪಿದ್ದಾಳೆ. ಕುಟುಂಬದವರಿಗೆ ತನ್ನ ಮೇಲಾದ ದೌರ್ಜನ್ಯದ ಬ
ಕಾನ್ಪುರ: ಟ್ರಕ್ವೊಂದರಲ್ಲಿ 15 ವರ್ಷದ ಬಾಲಕಿ ಮೇಲೆ ಆಕೆಯ ಚಿಕ್ಕಪ್ಪ ಮತ್ತು ಚಾಲಕ ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಉತ್ತರ ಪ್ರದೇಶದಿಂದ ವರದಿಯಾಗಿದೆ. ಅತ್ಯಾಚಾರದ ನಂತರ ಬಾಲಕಿ ಸಜೆಟಿಯ ಕಾನ್ಪುರ-ಸಾಗರ್ ಹೆದ್ದಾರಿಯಲ್ಲಿರುವ ಅಲಿಯಾಪುರ ಟೋಲ್ ಪ್ಲಾಜಾ ಬಳಿ ಚಲಿಸುತ್ತಿದ್ದ ಟ್ರಕ್ನಿಂದ ಹಾರಿ ಹೇಗೋ ಮನೆ ತಲುಪಿದ್ದಾಳೆ. ಕುಟುಂಬದವರಿಗೆ ತನ್ನ ಮೇಲಾದ ದೌರ್ಜನ್ಯದ ಬಗ್ಗೆ ವಿವರಿಸಿದ್ದಾಳೆ. ತಮ್ಮ ಮೊಬೈಲ್ ಫೋನ್ಗಳಲ್ಲಿ ನಿಯಮಿತವಾಗಿ ಅಶ್ಲೀಲ ವಿಡಿಯೊಗಳನ್ನು ವೀಕ್ಷಿಸುತ್ತಿದ್ದ ಆರೋಪಿಗಳು ಅದೇ ಗುಂಗಲ್ಲಿ ಅತ್ಯಾಚಾರ ಎಸಗಿದ್ದಾರೆ. ಇಬ್ಬರನ್ನೂ ಬಂಧಿಸಿರುವ ಪೊಲಿಸರು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಲಯ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು.ಬಾಲಕಿಯನ್ನು ತಮ್ಮೊಂದಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿರುವುದು ನಿಜ, ಆಗ ನಾವು ಮದ್ಯದ ಅಮಲಿನಲ್ಲಿದ್ದೆವು ಎಂದು ಆರೋಪಿಗಳು ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾರೆ ಎಂದು ಎಸಿಪಿ ಕೃಷ್ಣಕಾಂತ್ ಯಾದವ್ ತಿಳಿಸಿದ್ದಾರೆ.ಸ್ವತಃ ಚಿಕ್ಕಪ್ಪ ಬಾಲಕಿಯನ್ನು ಟ್ರಕ್ನೊಳಗೆ ಕರೆದೊಯ್ದಿದ್ದನು. ಅತ್ಯಾಚಾರದ ಬಳಿಕ ಆಕೆ ಅವರಿಂದ ತಪ್ಪಿಸಿಕೊಂಡು ಅಲಿಯಾಪುರ ಟೋಲ್ ಪ್ಲಾಜಾ ಬಳಿ ಚಲಿಸುತ್ತಿದ್ದ ವಾಹನದಿಂದ ಕೆಳಗೆ ಹಾರಿದ್ದಳು ಎಂದು ಹೆಚ್ಚುವರಿ ಡಿಸಿಪಿ ಸುಮಿತ್ ಸುಧಾಕರ್ ರಾಮಟೆಕೆ ಹೇಳಿದ್ದಾರೆ.ಬಾಲಕಿಯ ತಂದೆ ಗುರುವಾರ ಸಜೆಟಿ ಪೊಲೀಸರಿಗೆ ದೂರು ನೀಡಿದ್ದರು.ಆರೋಪಿಗಳ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.