ಪೂಜೆ ನೆಪದಲ್ಲಿ ಪತಿ ಕೊಲೆಗೆ ಸಂಚು: ಪ್ರಿಯಕರನಿಗೆ ಲೋಕೇಷನ್ ಕಳುಹಿಸಿದ ಪತ್ನಿ!
ಚಿತ್ತೂರು (ಆಂಧ್ರಪ್ರದೇಶ): ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವ ನೆಪದಲ್ಲಿ ಪತಿಯನ್ನು ಕರೆದೊಯ್ದು, ಪ್ರಿಯಕರ ಹಾಗೂ ಆತನ ಸ್ನೇಹಿತರ ಸಹಾಯದಿಂದ ಅತ್ಯಂತ ಕ್ರೂರವಾಗಿ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಡಿಜಿಟಲ್ ದಾಖಲೆಗಳ ನೆರವಿನಿಂದ ಪೊಲೀಸರು ಕೆಲವೇ ಗಂಟೆಗ

ಚಿತ್ತೂರು (ಆಂಧ್ರಪ್ರದೇಶ): ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವ ನೆಪದಲ್ಲಿ ಪತಿಯನ್ನು ಕರೆದೊಯ್ದು, ಪ್ರಿಯಕರ ಹಾಗೂ ಆತನ ಸ್ನೇಹಿತರ ಸಹಾಯದಿಂದ ಅತ್ಯಂತ ಕ್ರೂರವಾಗಿ ಕೊಲೆ ಮಾಡಿಸಿರುವ ಆಘಾತಕಾರಿ ಘಟನೆಯೊಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ. ಸಿಸಿಟಿವಿ ದೃಶ್ಯಾವಳಿ ಹಾಗೂ ಡಿಜಿಟಲ್ ದಾಖಲೆಗಳ ನೆರವಿನಿಂದ ಪೊಲೀಸರು ಕೆಲವೇ ಗಂಟೆಗಳಲ್ಲಿ ಈ ಯೋಜಿತ ಕೊಲೆ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಜೈಷ್ ಉಗ್ರ ಸಂಘಟನೆಯೊಂದಿಗೆ ನಂಟು: ಗುಜರಾತ್ನಲ್ಲಿ ಐವರ ಬಂಧನಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಾರಿ ಹರಿಸಲು ಯತ್ನ: ಗುಂಡಿನ ದಾಳಿ, ಇಬ್ಬರಿಗೆ ಗಾಯ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಚೂಳಗಿರಿ ನಿವಾಸಿಯಾದ ರಮೇಶ್ (23) ಎಂಬ ಯುವಕ, ಹೊಸೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದನು. ಶಾಂತಿಪುರಂ ಮೂಲದ ಹಾಸಿನಿ (19) ಜತೆ ವಿವಾಹವಾಗಿತ್ತು. ಇವರಿಗೆ ಹೆಣ್ಣು ಮಗುವೂ ಇದೆ. ಮೇಲ್ನೋಟಕ್ಕೆ ಸಂಸಾರ ಚೆನ್ನಾಗಿಯೇ ಕಾಣಿಸುತ್ತಿದ್ದರೂ, ಹಾಸಿನಿ ತನ್ನ ಬಾಲ್ಯದ ಗೆಳೆಯ ಯುಗಂಧರ್ (20) ಎಂಬುವನೊಂದಿಗೆ ವಿವಾಹದ ನಂತರವೂ ಅಕ್ರಮ ಸಂಬಂಧ ಮುಂದುವರಿಸಿದ್ದಳು ಎನ್ನಲಾಗಿದೆ. ಪತಿಯನ್ನು ತಮ್ಮ ದಾರಿಯಿಂದ ದೂರ ಸರಿಸಲು ಇಬ್ಬರೂ ಸೇರಿ ಈ ಭೀಕರ ಸಂಚು ರೂಪಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.ಲೈವ್ ಲೊಕೇಶನ್ ಶೇರ್ ಮಾಡಿ ಸ್ಕೆಚ್ ಹಾಕಿದ ಪತ್ನಿಮಂಗಳವಾರ ಅಮಾವಾಸ್ಯೆ ಇದ್ದಿದ್ದರಿಂದ ಗುಡುಪಲ್ಲೆ ಮಂಡಲದ ಮಲ್ಲಪ್ಪ ಕೊಂಡ ಬೆಟ್ಟದ ಮೇಲಿರುವ ಶ್ರೀ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಹೋಗೋಣವೆಂದು ಹಾಸಿನಿ ತನ್ನ ಪತಿ ರಮೇಶ್ನನ್ನು ಒಪ್ಪಿಸಿದ್ದಾಳೆ. ಅದರಂತೆ ರಮೇಶ್ ತನ್ನ ಪತ್ನಿ ಮತ್ತು ಮಗುವನ್ನು ಬೈಕ್ನಲ್ಲಿ ಕರೆದುಕೊಂಡು ಹೊರಟಿದ್ದಾನೆ. ಆದರೆ, ದಾರಿಯುದ್ದಕ್ಕೂ ಹಾಸಿನಿ ತನ್ನ ಮೊಬೈಲ್ ಮೂಲಕ ಪ್ರಿಯಕರ ಯುಗಂಧರ್ನಿಗೆ ತಮ್ಮ ಲೈವ್ ಲೊಕೇಶನ್ ಶೇರ್ ಮಾಡುತ್ತಾ, ಅವರು ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ರವಾನಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.ಕೇರಳಂ CM ಆಗಬೇಕು, ನವ್ಯಾ ಪ್ರಮಾಣ ವಚನಕ್ಕೆ ಬರಬೇಕು; ನಟ ಧ್ಯಾನ್ ಹೀಗಂದಿದ್ದೇಕೆ?Explainer | ಫಿಫಾ ಸಂಸ್ಥೆ ನಿಜಕ್ಕೂ ಅರ್ಜೆಂಟೀನಾ ಪರವಾಗಿದೆಯೇ? ಏನಿದು ವಿವಾದ? ಹಾಸಿನಿ ಪ್ಲಾನ್ ಪ್ರಕಾರ ಬೆಟ್ಟದ ರಸ್ತೆಯೊಂದಲ್ಲಿ ತನ್ನ ಹ್ಯಾಂಡ್ಬ್ಯಾಗ್ ಅನ್ನು ಕೆಳಗೆ ಬಿಸಾಡಿದ್ದಾಳೆ. ಬ್ಯಾಗ್ ಎತ್ತಿಕೊಳ್ಳಲು ರಮೇಶ್ ಬೈಕ್ ನಿಲ್ಲಿಸುತ್ತಿದ್ದಂತೆ, ಅಲ್ಲಿಯೇ ಹೊಂಚು ಹಾಕಿ ಕುಳಿತಿದ್ದ ಯುಗಂಧರ್ ಮತ್ತು ಆತನ ಸಹಚರರು ರಮೇಶ್ ಮೇಲೆ ಏಕಾಏಕಿ ಮುಗಿಬಿದ್ದಿದ್ದಾರೆ. ಅವರಿಂದ ತಪ್ಪಿಸಿಕೊಳ್ಳಲು ಕಾಡಿನೊಳಗೆ ಸುಮಾರು ದೂರ ಓಡಿದ ರಮೇಶ್ನನ್ನು ಬೆನ್ನಟ್ಟಿ ಹೋಗಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಇಡೀ ಭೀಕರ ಕೃತ್ಯ ಮಗುವಿನ ಕಣ್ಣೆದುರೇ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.ಸಿಸಿಟಿವಿ ದೃಶ್ಯದಿಂದ ಸಿಕ್ಕಿಬಿದ್ದ ಆರೋಪಿಗಳುಪೂಜೆಗೆ ಹೋದ ಮಗಳು ಮತ್ತು ಮೊಮ್ಮಗಳು ತಡವಾದರೂ ಮನೆಗೆ ಬಾರದಿದ್ದಾಗ ಆತಂಕಗೊಂಡ ಹಾಸಿನಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು ದೇವಸ್ಥಾನಕ್ಕೆ ಹೋಗುವ ರಸ್ತೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ. ರಮೇಶ್ ಬೈಕ್ ಚಲಾಯಿಸಿಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ದಾಖಲಾಗಿದ್ದರೆ, ವಾಪಸ್ ಬರುವಾಗ ಹಾಸಿನಿ ತನ್ನ ಪತಿಯ ಬೈಕ್ನಲ್ಲಿ ಇಬ್ಬರು ಅಪರಿಚಿತ ಯುವಕರೊಂದಿಗೆ ಕುಳಿತು ಬರುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಎನ್ಡಿಟಿವಿ ವರದಿ ಮಾಡಿದೆ.ಡಿಸೆಂಬರ್ ಒಳಗೆ ಜಿಬಿಎ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಕಾಲಾವಕಾಶಪ್ರಕೃತಿ ಮಡಿಲು: ಬೆಂಗಳೂರು ಈಗ ‘ಉಷ್ಣ ದ್ವೀಪ’; ಉದ್ಯಾನ ನಗರಕ್ಕೆ ಹೊಸ ‘ಅಪ’ಖ್ಯಾತಿ ಇದಾದ ಬಳಿಕ ಪೊಲೀಸರು ಮೊಬೈಲ್ ಕರೆಗಳ ವಿವರ ಮತ್ತು ಲೊಕೇಶನ್ ಆಧರಿಸಿ ಕಾರ್ಯಾಚರಣೆ ನಡೆಸಿ, ಕಾಡಿನಲ್ಲಿದ್ದ ರಮೇಶ್ ಶವವನ್ನು ವಶಪಡಿಸಿಕೊಂಡಿದ್ದಾರೆ. ಪತ್ನಿ, ಆಕೆಯ ಪ್ರಿಯಕರ ಹಾಗೂ ಕೊಲೆಗೆ ಸಾಥ್ ನೀಡಿದ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ.