ಕೇರಳಂ CM ಆಗಬೇಕು, ನವ್ಯಾ ಪ್ರಮಾಣ ವಚನಕ್ಕೆ ಬರಬೇಕು; ನಟ ಧ್ಯಾನ್ ಹೀಗಂದಿದ್ದೇಕೆ?
ಮಲಯಾಳಂನ ವಿಸಿಟರ್ ಸಿನಿಮಾದ ಪ್ರಚಾರದಲ್ಲಿರುವ ನಟ ಧ್ಯಾನ್ ಶ್ರೀನಿವಾಸನ್ ಮುಖ್ಯಮಂತ್ರಿ ದಳಪತಿ ವಿಜಯ್ ಹಾಗೂ ತ್ರಿಶಾ ಕೃಷ್ಣನ್ ಅವರ ಹೆಸರನ್ನು ಉಲ್ಲೇಖಿಸದೆ, ಕೇರಳಂನ ಮುಖ್ಯಮಂತ್ರಿಯಾಗುವ ಆಸೆಯಿದೆ ಎಂದಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.ವಿಸಿಟರ್ ಸಿನಿಮಾದಲ್ಲಿ ನಟಿಯಾಗಿ ಕಾಣಿಸಿಕೊಂಡಿರುವ ನವ್ಯಾ ನಾಯರ್ ಅವರನ್ನು ಉದ್ದ

ಮಲಯಾಳಂನ ವಿಸಿಟರ್ ಸಿನಿಮಾದ ಪ್ರಚಾರದಲ್ಲಿರುವ ನಟ ಧ್ಯಾನ್ ಶ್ರೀನಿವಾಸನ್ ಮುಖ್ಯಮಂತ್ರಿ ದಳಪತಿ ವಿಜಯ್ ಹಾಗೂ ತ್ರಿಶಾ ಕೃಷ್ಣನ್ ಅವರ ಹೆಸರನ್ನು ಉಲ್ಲೇಖಿಸದೆ, ಕೇರಳಂನ ಮುಖ್ಯಮಂತ್ರಿಯಾಗುವ ಆಸೆಯಿದೆ ಎಂದಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.ವಿಸಿಟರ್ ಸಿನಿಮಾದಲ್ಲಿ ನಟಿಯಾಗಿ ಕಾಣಿಸಿಕೊಂಡಿರುವ ನವ್ಯಾ ನಾಯರ್ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ‘ ನಾನು ಕೇರಳಂನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ ನವ್ಯಾ ಮುಂದಿನ ಸಾಲಿನಲ್ಲಿ ಕುಳಿತಿರುತ್ತಾರೆ’ ಎಂದು ತಮಾಷೆ ಮಾಡಿದ್ದಾರೆ.ದಳಪತಿ ವಿಜಯ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ಶೀಘ್ರವೇ ‘ಜನ ನಾಯಗನ್’ ತೆರೆಗೆದಳಪತಿ ವಿಜಯ್ ಅವರದ್ದು ‘ಐತಿಹಾಸಿಕ ಗೆಲುವು’ ಎಂದು ಬಣ್ಣಿಸಿದ ಸಿನಿ ತಾರೆಯರುತಮಿಳುನಾಡು | ವಿಜಯ್ ಯುಗಾರಂಭ: ದಳಪತಿ ಸಂಪುಟ ಸೇರಿದ 9 ಮಂದಿ ಸಚಿವರಿವರುವಿಡಿಯೊ: ಮಲ್ಲಿಗೆ ಮುಡಿದು ದಳಪತಿ ವಿಜಯ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಬಂದ ತ್ರಿಶಾ’ಬಹಳ ದಿನಗಳ ನಂತರ ನಾವು ಒಟ್ಟಾಗಿ ನಟಿಸಿದ್ದೇವೆ. ನವ್ಯಾ ಅವರಿಗೆ ಮದುವೆಯೂ ಆಗಿದೆ. ಅವರಿಗೆ ಒಬ್ಬ ಮಗ ಇದ್ದಾನೆ. ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ, ನವ್ಯಾ ಸೀರೆಯುಟ್ಟು, ಕಣ್ಣಲ್ಲಿ ನೀರು ತುಂಬಿಕೊಂಡು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ. The day I take the oath as CM... I think Navya will be there in the front row wearing a saree...!!- Dhyan Sreenivasan pic.twitter.com/UT5GvyK8Fq— Trollywood (@TrollywoodX) July 16, 2026 ಈ ಮಾತಿಗೆ ಪ್ರತಿಕ್ರಿಯೆ ನೀಡಿರುವ ನವ್ಯಾ ನಾಯರ್, ‘ಚಿಂತಿಸಬೇಡಿ ಧ್ಯಾನ್. ನೀವು ಮುಖ್ಯಮಂತ್ರಿಯಾದಾಗ, ನಿಮ್ಮ ಇಚ್ಛೆಯಂತೆ ನಾನು ಹಸಿರು ಬಾರ್ಡರ್ ಇರುವ ಸೀರೆ ಹಾಗೂ ವಜ್ರದ ಹಾರ ಧರಿಸಿ ಮುಂದಿನ ಸಾಲಿನಲ್ಲಿ ಕುಳಿತು ಕಣ್ಣೀರು ಸುರಿಸುತ್ತಾ, ಜೈಕಾರ ಹಾಕುವೆ. ಮುಂದಿನ ಸೀಟ್ನ ವ್ಯವಸ್ಥೆ ಮಾಡುವಿರಾ’ ಎಂದು ಹಾಸ್ಯವಾಗಿ ಕೇಳಿದ್ದಾರೆ. ಈ ಸಂಭಾಷಣೆಯಲ್ಲಿ ಧ್ಯಾನ್ ಅವರು ತ್ರಿಶಾ ಕೃಷ್ಣನ್ ಅವರ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ. ಧ್ಯಾನ್ ಹೇಳಿಕೆಯನ್ನು ವಿಜಯ್ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಹೋಲಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿಯಾಗಿ ವಿಜಯ್ ಪ್ರಮಾಣ ವಚನ ಸ್ವೀಕರಿಸುವಾಗ ತ್ರಿಶಾ ಅವರು ವಿಜಯ್ ಪೋಷಕರೊಂದಿಗೆ ವೇದಿಕೆಯ ಎದುರು ಮೊದಲ ಸಾಲಿನಲ್ಲಿ ಕುಳಿತಿದ್ದರು. ವಿಜಯ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅವರು ಭಾವುಕರಾಗಿದ್ದು ಕಂಡುಬಂದಿತ್ತು. ಆ ಸಂದರ್ಭದ ವಿಡಿಯೊ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.