ಮೊಮ್ಮಕ್ಕಳನ್ನು ಶಾಲೆಗೆ ಬಿಡಲು ಹೋಗುತ್ತಿದ್ದ ವೃದ್ಧ ಟ್ಯಾಂಕರ್ ಗುದ್ದಿ ಸಾವು
ಬೆಂಗಳೂರು: ಯಲಹಂಕ ನ್ಯೂಟೌನ್ನ ಹೊಯ್ಸಳ ಗ್ರೌಂಡ್ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನೀರಿನ ಟ್ಯಾಂಕರ್ ಸಾಗಿಸುವ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.ನ್ಯಾಯಾಂಗ ಬಡಾವಣೆ ನಿವಾಸಿ ವೆಂಕಣ್ಣ (70) ಮೃತಪಟ್ಟವರು. ವೆಂಕಣ್ಣ ಅವರ ಮೊಮ್ಮಕ್ಕಳಾದ ಶ್ರಾವಣಿ (12) ಹಾಗೂ ಚರಿತ್ (5) ಅಪಾಯದಿಂದ ಪಾರಾಗಿದ್ದಾರೆವೆಂಕಣ

ಬೆಂಗಳೂರು: ಯಲಹಂಕ ನ್ಯೂಟೌನ್ನ ಹೊಯ್ಸಳ ಗ್ರೌಂಡ್ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನೀರಿನ ಟ್ಯಾಂಕರ್ ಸಾಗಿಸುವ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.ನ್ಯಾಯಾಂಗ ಬಡಾವಣೆ ನಿವಾಸಿ ವೆಂಕಣ್ಣ (70) ಮೃತಪಟ್ಟವರು. ವೆಂಕಣ್ಣ ಅವರ ಮೊಮ್ಮಕ್ಕಳಾದ ಶ್ರಾವಣಿ (12) ಹಾಗೂ ಚರಿತ್ (5) ಅಪಾಯದಿಂದ ಪಾರಾಗಿದ್ದಾರೆವೆಂಕಣ್ಣ ಅವರು ಮೊಮ್ಮಕ್ಕಳನ್ನು ಶಾಲೆಗೆ ಬಿಡಲು ದ್ವಿಚಕ್ರ ವಾಹನದಲ್ಲಿ ಶುಕ್ರವಾರ ಬೆಳಿಗ್ಗೆ ಹೋಗುತ್ತಿದ್ದರು. ಆಗ ದುರ್ಘಟನೆ ನಡೆದಿದೆ. ವೇಗವಾಗಿ ಬಂದ ನೀರಿನ ಟ್ಯಾಂಕರ್ ಸಾಗಿಸುವ ವಾಹನವು ದ್ವಿಚಕ್ರ ವಾಹನಕ್ಕೆ ಗುದ್ದಿದೆ. ಆಗ ವೆಂಕಣ್ಣ ಮತ್ತು ಅವರ ಮೊಮ್ಮಕ್ಕಳು ನಿಯಂತ್ರಣ ತಪ್ಪಿ ಕೆಳಗೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದರು.ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ವೆಂಕಣ್ಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಮೊಮ್ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.ಟ್ಯಾಂಕರ್ ಚಾಲಕನ ಅಜಾಗರೂಕತೆ ಹಾಗೂ ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದಾರೆ.ಯಲಹಂಕ ಸಂಚಾರ ಠಾಣೆ ಪೊಲೀಸರು ಟ್ಯಾಂಕರ್ ಚಾಲಕನನ್ನು ಬಂಧಿಸಿ, ವಾಹನ ಜಪ್ತಿ ಮಾಡಿದ್ದಾರೆ. ⚠️ This post discusses a fatal road accident.Yelahanka New Town, Bengaluru, Thursday morning: an elderly man was fatally struck by a tanker while dropping his grandchildren to school. The children, who were with him, escaped unhurt.Police have shifted the body for post-mortem… pic.twitter.com/0dBH42G0GB— Rajneeti Tadka ️ (@RajneetiTadka) July 17, 2026