11 ಮಾಜಿ ಸಚಿವರ ಹೆಸರು ಸಂಪುಟ ವಿಸ್ತರಣೆ ಪಟ್ಟಿಯಲ್ಲಿ ನೋಡಿ ಹೈಕಮಾಂಡ್ ಗರಂ
ನವದೆಹಲಿ: ಸಂಪುಟ ವಿಸ್ತರಣೆ ಸಂಬಂಧ ರಾಜ್ಯ ಕಾಂಗ್ರೆಸ್ ನಾಯಕರ (Congress Leaders) ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದ್ದು, ಅನುಮತಿ ನಿರಾಕರಿಸಿದೆ. ಹೈಕಮಾಂಡ್ ಮುಂದೆ ರಾಜ್ಯ ನಾಯಕರು ಕೊಂಡೊಯ್ದಿದ್ದ ಒಟ್ಟು 43 ಶಾಸಕರ ಹೆಸರಿನ ಪಟ್ಟಿಯಲ್ಲಿ 11 ಹೆಸರು ಸಿದ್ದರಾಮಯ್ಯ (Siddaramaiah) ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದವರದ್ದು ಎನ್ನಲಾಗಿದೆ. ಸಿಎಂ ಡಿಕೆಶಿ

ನವದೆಹಲಿ: ಸಂಪುಟ ವಿಸ್ತರಣೆ ಸಂಬಂಧ ರಾಜ್ಯ ಕಾಂಗ್ರೆಸ್ ನಾಯಕರ (Congress Leaders) ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದ್ದು, ಅನುಮತಿ ನಿರಾಕರಿಸಿದೆ. ಹೈಕಮಾಂಡ್ ಮುಂದೆ ರಾಜ್ಯ ನಾಯಕರು ಕೊಂಡೊಯ್ದಿದ್ದ ಒಟ್ಟು 43 ಶಾಸಕರ ಹೆಸರಿನ ಪಟ್ಟಿಯಲ್ಲಿ 11 ಹೆಸರು ಸಿದ್ದರಾಮಯ್ಯ (Siddaramaiah) ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದವರದ್ದು ಎನ್ನಲಾಗಿದೆ. ಸಿಎಂ ಡಿಕೆಶಿ (DK Shivakumar) ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಉಳಿಕೆ 20 ಸ್ಥಾನಕ್ಕೆ 43 ಶಾಸಕರ ಹೆಸರು ಫೈನಲ್ ಮಾಡಿಕೊಂಡು ಹೋಗಿದ್ದರು. ಅದರಲ್ಲಿ 11 ಮಂದಿ ಮಾಜಿ ಸಚಿವರ ಪ್ರಮುಖವಾಗಿತ್ತು. ಇದರಿಂದ ಗರಂ ಆದ ಹೈಕಮಾಂಡ್ ಅನುಮತಿ ನಿರಾಕರಿಸಿದೆ. ಈಗ ಹೊಸ ಪಟ್ಟಿ ಸಿದ್ಧಪಡಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ರಾಜ್ಯ ನಾಯಕರು ಕೊಂಡೊಯ್ದಿದ್ದ ಪಟ್ಟಿಯಲ್ಲಿ ಇದ್ದ ಮಾಜಿ ಸಚಿವರು ಯಾರ್ಯಾರು ಎಂಬ ಮಾಹಿತಿ ʻಪಬ್ಲಿಕ್ ಟಿವಿʼಗೆ ಸಿಕ್ಕಿದೆ. ಹೆಚ್.ಕೆ ಪಾಟೀಲ್ ಜಮೀರ್ ಅಹಮ್ಮದ್ ಖಾನ್ ಚಲುವರಾಯಸ್ವಾಮಿ ಎಸ್.ಎಸ್.ಮಲ್ಲಿಕಾರ್ಜುನ ಸಂತೋಷ ಲಾಡ್ ಶಿವರಾಜ್ ತಂಗಡಗಿ ಲಕ್ಷ್ಮಿ ಹೆಬ್ಬಾಳ್ಕರ್ ಮಂಕಾಳು ವೈದ್ಯ ಮಧು ಬಂಗಾರಪ್ಪ ನಾಗೇಂದ್ರ ಶಿವಾನಂದ ಪಾಟೀಲ್