ಬೀದರ್ನಲ್ಲಿ ಬಿರುಸಿನ ಮಳೆ: ರೈತರಲ್ಲಿ ಮೂಡಿದ ಆಶಾಭಾವ
ಬೀದರ್: ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಅರ್ಧ ಗಂಟೆಯಿಂದ ಬಿರುಸಿನ ಮಳೆಯಾಗುತ್ತಿದೆ.ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಕೆಲಹೊತ್ತು ತುಂತುರು ಮಳೆಯಾಯಿತು. ಸಂಜೆ ಕೂಡ ಸಾಧಾರಣ ಮಳೆ ಸುರಿಯಿತು. ರಾತ್ರಿ 8.30ರಿಂದ ಗುಡುಗು ಸಹಿತ ಜೋರು ಮಳೆಯಾಗುತ್ತಿದೆ.ತಾಲ್ಲೂಕಿನ ಅಮಲಾಪುರ, ಚಿಟ್ಟಾ, ಘೋಡಂಪಳ್ಳಿ, ವಾಡಿ, ಶಹಾಪುರ, ಗೋರನಳ್ಳಿ, ಕಮಠಾಣ, ಯದಲಾಪುರ,
ಬೀದರ್: ನಗರ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಅರ್ಧ ಗಂಟೆಯಿಂದ ಬಿರುಸಿನ ಮಳೆಯಾಗುತ್ತಿದೆ.ದಿನವಿಡೀ ಮೋಡ ಕವಿದ ವಾತಾವರಣ ಇತ್ತು. ಮಧ್ಯಾಹ್ನ ಕೆಲಹೊತ್ತು ತುಂತುರು ಮಳೆಯಾಯಿತು. ಸಂಜೆ ಕೂಡ ಸಾಧಾರಣ ಮಳೆ ಸುರಿಯಿತು. ರಾತ್ರಿ 8.30ರಿಂದ ಗುಡುಗು ಸಹಿತ ಜೋರು ಮಳೆಯಾಗುತ್ತಿದೆ.ತಾಲ್ಲೂಕಿನ ಅಮಲಾಪುರ, ಚಿಟ್ಟಾ, ಘೋಡಂಪಳ್ಳಿ, ವಾಡಿ, ಶಹಾಪುರ, ಗೋರನಳ್ಳಿ, ಕಮಠಾಣ, ಯದಲಾಪುರ, ಯಾಕತಪುರ ಸೇರಿದಂತೆ ಹಲವೆಡೆಗಳಲ್ಲಿ ಉತ್ತಮ ಮಳೆಯಾಗಿದೆ.ಜಿಲ್ಲೆಯ ಭಾಲ್ಕಿ, ಹುಲಸೂರಿನಲ್ಲೂ ಮಳೆಯಾಗಿರುವುದು ವರದಿಯಾಗಿದೆ. ಕಳೆದ ಹಲವು ದಿನಗಳಿಂದ ಮಳೆಯಾಗಿರಲಿಲ್ಲ. ಬಿತ್ತನೆ ಮಾಡಿದ ರೈತರು ಮಳೆಯಿಲ್ಲದೇ ಕಂಗಾಲಾಗಿದ್ದರು. ಆದರೆ, ಶುಕ್ರವಾರ ರಾತ್ರಿ ಸುರಿದ ಮಳೆ ರೈತರಲ್ಲಿ ಆಶಾಭಾವ ಮೂಡಿಸಿದೆ.ಮಳೆಗೆ ಪ್ರಾರ್ಥಿಸಿ ಜಿಲ್ಲೆಯಾದ್ಯಂತ ವಿಶೇಷ ಪೂಜೆ, ಪ್ರಾರ್ಥನೆ, ಗಂಗೆ ಪೂಜೆ ಹಾಗೂ ಕಪ್ಪೆಗಳ ಮದುವೆ, ಸಪ್ತಾಹ ಕಾರ್ಯಕ್ರಮಗಳು ಜರುಗುತ್ತಿವೆ.
Read the complete story at Prajavani