ಮೊದಲ ಆಷಾಢ ಶುಕ್ರವಾರ – ಶಕ್ತಿ ದೇವತೆ ಕೋಲಾರಮ್ಮಗೆ ವಿಶೇಷ ಪೂಜೆ, ಭಕ್ತ ಸಾಗರ
ಕೋಲಾರ: ಇಂದು ಮೊದಲ ಆಷಾಢ ಶುಕ್ರವಾರ (Ashada Shukravara) ಹಿನ್ನೆಲೆ ಕೋಲಾರದ (Kolar) ಶಕ್ತಿ ದೇವತೆ ಕೋಲಾರಮ್ಮ ದೇವಾಲಯದಲ್ಲಿ (Kolaramma Temple) ವಿಶೇಷ ಅಲಂಕಾರವನ್ನು ಹಮ್ಮಿಕೊಳ್ಳಲಾಗಿತ್ತು. ಕೋಲಾರ ನಗರದ ಕೋಟೆ ಬಡಾವಣೆಯಲ್ಲಿ ನೆಲೆಸಿರುವ ಕೋಲಾರದ ಶಕ್ತಿ ದೇವತೆಯಾಗಿರುವ ಕೋಲಾರಮ್ಮ ದೇವರಿಗೆ ಹೂವಿನಿಂದ ವಿಶೇಷ ಅಲಂಕಾರ ಮತ್ತು ವಿಶೇಷ ಪೂಜೆಯನ್ನು ಆಯೋಜನೆ ಮಾಡ

ಕೋಲಾರ: ಇಂದು ಮೊದಲ ಆಷಾಢ ಶುಕ್ರವಾರ (Ashada Shukravara) ಹಿನ್ನೆಲೆ ಕೋಲಾರದ (Kolar) ಶಕ್ತಿ ದೇವತೆ ಕೋಲಾರಮ್ಮ ದೇವಾಲಯದಲ್ಲಿ (Kolaramma Temple) ವಿಶೇಷ ಅಲಂಕಾರವನ್ನು ಹಮ್ಮಿಕೊಳ್ಳಲಾಗಿತ್ತು. ಕೋಲಾರ ನಗರದ ಕೋಟೆ ಬಡಾವಣೆಯಲ್ಲಿ ನೆಲೆಸಿರುವ ಕೋಲಾರದ ಶಕ್ತಿ ದೇವತೆಯಾಗಿರುವ ಕೋಲಾರಮ್ಮ ದೇವರಿಗೆ ಹೂವಿನಿಂದ ವಿಶೇಷ ಅಲಂಕಾರ ಮತ್ತು ವಿಶೇಷ ಪೂಜೆಯನ್ನು ಆಯೋಜನೆ ಮಾಡಲಾಗಿತ್ತು. ಇದನ್ನೂ ಓದಿ: ಜೋರು ಮ್ಯೂಸಿಕ್ ಹಾಕಂಗಿಲ್ಲ, ರೀಲ್ಸ್ ಮಾಡಂಗಿಲ್ಲ – ನಮ್ಮ ಮೆಟ್ರೋದಲ್ಲಿ ಹುಚ್ಚಾಟ ಆಡಿದ್ರೆ ಬೀಳುತ್ತೆ ಭಾರೀ ದಂಡ ಆಷಾಢ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆಯಿಂದಲೇ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಸಾವಿರಾರು ಜನರು ಪುನೀತರಾದರು. ಇನ್ನು ಕೋಲಾರಮ್ಮ ತಾಯಿಗೆ ವಿಶೇಷ ಅಲಂಕಾರದ ಜೊತೆಗೆ ದೇವಾಲಯದ ವತಿಯಿಂದ ಭಕ್ತರಿಂದ ಪ್ರಸಾದ ವಿನಿಯೋಗವನ್ನು ಹಮ್ಮಿಕೊಳ್ಳಲಾಗಿತ್ತು. ಇದನ್ನೂ ಓದಿ: ಅಮೆರಿಕದ ಹಲವು ಜೆಟ್ಗಳನ್ನು ನಾಶಪಡಿಸಿದ್ದೇವೆ: ಇರಾನ್
Read the complete story at Public TV Kannada