ಚೀನಾದದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ಜಪಾನ್ ಕನ್ನಡ ಸಂಘದಿಂದ ವಿಶೇಷ ಪಾಡ್ಕಾಸ್ಟ್
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿಟೋಕಿಯೊ: ಚೀನಾದಲ್ಲಿ ಕೌಶಲವಂತ ಭಾರತೀಯರಿಗೆ ಉತ್ತಮ ಉದ್ಯೋಗ ಮತ್ತು ಸಂಶೋಧನಾ ಅವಕಾಶಗಳಿದ್ದು, ಸ್ಥಳೀಯ ಸಮಾಜದೊಂದಿಗೆ ಬೆರೆಯಲು ಮ್ಯಾಂಡರಿನ್ ಭಾಷೆಯ ಜ್ಞಾನ ಸಹಕಾರಿಯಾಗುತ್ತದೆ ಎಂದು ಶಾಂಘೈ ಕನ್ನಡ ಸಂಘದ ಹಿರಿಯ ಸದಸ್ಯರಾದ ವಿಠ್ಠಲ್ ಮಲ್ಯ ಹಾಗೂ ಮಹೇಶ್ ಗೌಡ ಹೇಳಿದರು.ಕತಾರ್ ಶಾಲೆಗಳಲ್ಲಿ ಕನ್ನಡ ಬೋಧನೆಗೆ ಭಾರತೀಯ ರಾಯಭಾರ ಕಚೇ
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿಟೋಕಿಯೊ: ಚೀನಾದಲ್ಲಿ ಕೌಶಲವಂತ ಭಾರತೀಯರಿಗೆ ಉತ್ತಮ ಉದ್ಯೋಗ ಮತ್ತು ಸಂಶೋಧನಾ ಅವಕಾಶಗಳಿದ್ದು, ಸ್ಥಳೀಯ ಸಮಾಜದೊಂದಿಗೆ ಬೆರೆಯಲು ಮ್ಯಾಂಡರಿನ್ ಭಾಷೆಯ ಜ್ಞಾನ ಸಹಕಾರಿಯಾಗುತ್ತದೆ ಎಂದು ಶಾಂಘೈ ಕನ್ನಡ ಸಂಘದ ಹಿರಿಯ ಸದಸ್ಯರಾದ ವಿಠ್ಠಲ್ ಮಲ್ಯ ಹಾಗೂ ಮಹೇಶ್ ಗೌಡ ಹೇಳಿದರು.ಕತಾರ್ ಶಾಲೆಗಳಲ್ಲಿ ಕನ್ನಡ ಬೋಧನೆಗೆ ಭಾರತೀಯ ರಾಯಭಾರ ಕಚೇರಿ ಬೆಂಬಲಜಪಾನ್ ಕನ್ನಡ ಸಂಘ (ಜೆಕೆಎಸ್) ಆಯೋಜಿಸಿದ್ದ ಪಾಡ್ಕಾಸ್ಟ್ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚೀನಾದಲ್ಲಿ ಎರಡು ದಶಕಗಳಿಗೂ ಹೆಚ್ಚು ವಾಸವಿದ್ದ ಅನುಭವಗಳನ್ನು ಹಂಚಿಕೊಂಡರು.ಶಾಂಘೈ ಕನ್ನಡ ಸಂಘದ ಚಟುವಟಿಕೆಗಳ ಕುರಿತು ಮಾತನಾಡಿದ ಅವರು, 2018ರಲ್ಲಿ ಕೆಲವೇ ಸದಸ್ಯರೊಂದಿಗೆ ಆರಂಭವಾದ ಸಂಘವು ಇಂದು ನೂರಾರು ಕನ್ನಡಿಗರನ್ನು ಒಗ್ಗೂಡಿಸಿದ್ದು, ಯುಗಾದಿ, ಕನ್ನಡ ರಾಜ್ಯೋತ್ಸವ, ದೀಪಾವಳಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು. ಕೋವಿಡ್ ಅವಧಿಯಲ್ಲಿಯೂ ಸಂಘದ ಚಟುವಟಿಕೆಗಳು ನಿರಂತರವಾಗಿ ನಡೆದಿರುವುದನ್ನು ಉಲ್ಲೇಖಿಸಿದರು.NRI ಠೇವಣಿಗಳನ್ನು ಸೆಳೆಯಲು ಹೊಸ ಯೋಜನೆ ರೂಪಿಸಿ: ಬ್ಯಾಂಕ್ಗಳಿಗೆ ನಿರ್ಮಲಾ ಸೂಚನೆಚೀನಾದ ಕುರಿತು ಜಾಗತಿಕ ಮಟ್ಟದಲ್ಲಿ ಹಲವು ತಪ್ಪು ಕಲ್ಪನೆಗಳಿದ್ದರೂ, ಅಲ್ಲಿನ ವಾಸ್ತವ ಚಿತ್ರ ಭಿನ್ನವಾಗಿದೆ ಎಂದು ಅವರು ಹೇಳಿದರು. ಕಳೆದ ಎರಡು ದಶಕಗಳಲ್ಲಿ ಮೂಲಸೌಕರ್ಯ, ತಂತ್ರಜ್ಞಾನ, ಶಿಕ್ಷಣ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಚೀನಾ ಸಾಧಿಸಿರುವ ಪ್ರಗತಿಗೆ ದೀರ್ಘಾವಧಿಯ ಯೋಜನೆ, ಸಂಶೋಧನೆಗೆ ನೀಡಿದ ಆದ್ಯತೆ ಹಾಗೂ ಸರ್ಕಾರ–ಕೈಗಾರಿಕೆಗಳ ಸಮನ್ವಯ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.ಚೀನಾದಲ್ಲಿ ಅವಕಾಶಗಳು ಸಾಕಷ್ಟಿದ್ದರೂ, ಅವು ಮುಖ್ಯವಾಗಿ ಉನ್ನತ ಕೌಶಲ ಹೊಂದಿದ ವೃತ್ತಿಪರರು, ಸಂಶೋಧಕರು ಹಾಗೂ ವಿಶೇಷ ಪರಿಣತಿ ಹೊಂದಿದವರಿಗೆ ಹೆಚ್ಚು ಲಭ್ಯವಾಗುತ್ತವೆ ಎಂದರು. ಕೃತಕ ಬುದ್ಧಿಮತ್ತೆ (ಎಐ), ರೊಬೋಟಿಕ್ಸ್, ಬ್ಯಾಟರಿ ತಂತ್ರಜ್ಞಾನ, ರಾಸಾಯನಿಕ ವಿಜ್ಞಾನ, ನಿರ್ಮಾಣ ತಂತ್ರಜ್ಞಾನ ಹಾಗೂ ಕೃಷಿ ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತೀಯರಿಗೆ ಉತ್ತಮ ಅವಕಾಶಗಳಿವೆ ಎಂದು ತಿಳಿಸಿದರು.ಅಂತರರಾಷ್ಟ್ರೀಯ ಕಂಪನಿಗಳಲ್ಲಿ ಇಂಗ್ಲಿಷ್ ಸಾಕಾಗಬಹುದಾದರೂ, ಸ್ಥಳೀಯ ಸಮಾಜದೊಂದಿಗೆ ಬೆರೆಯಲು ಹಾಗೂ ಹೆಚ್ಚಿನ ಅವಕಾಶಗಳನ್ನು ಪಡೆಯಲು ಮ್ಯಾಂಡರಿನ್ ಭಾಷೆಯ ಮೂಲಭೂತ ಜ್ಞಾನ ಅಗತ್ಯ ಎಂದು ಸಲಹೆ ನೀಡಿದರು.ಹಕ್ಕುಗಳಷ್ಟೇ ಕರ್ತವ್ಯಗಳೂ ಮುಖ್ಯ: ಜಪಾನ್ ಕನ್ನಡ ಸಂಘದ ಸಂವಾದದಲ್ಲಿ ಡಾ. ನಾಗೇಶ್ಚೀನಾದ ಕೆಲಸದ ಸಂಸ್ಕೃತಿ, ಸಮಯಪಾಲನೆ ಹಾಗೂ ಸಾರ್ವಜನಿಕ ಶಿಸ್ತಿನ ಕುರಿತು ಮಾತನಾಡಿದ ಅವರು, ಕೆಲಸದ ಮೇಲಿನ ನಿಷ್ಠೆ, ಸಮಯದ ಗೌರವ ಮತ್ತು ಸಾರ್ವಜನಿಕ ಆಸ್ತಿಯ ಬಗ್ಗೆ ಜವಾಬ್ದಾರಿಯುತ ಮನೋಭಾವ ಅಲ್ಲಿನ ಸಮಾಜದ ಪ್ರಮುಖ ಗುಣಗಳಾಗಿವೆ ಎಂದರು. ಸ್ವಚ್ಛತೆ, ನಾಗರಿಕ ಪ್ರಜ್ಞೆ ಹಾಗೂ ಮಹಿಳೆಯರ ಸುರಕ್ಷತೆಯಂತಹ ವಿಷಯಗಳಲ್ಲಿಯೂ ಚೀನಾ ಗಮನಾರ್ಹ ಪ್ರಗತಿ ಸಾಧಿಸಿದೆ ಎಂದು ಹೇಳಿದರು.ಭಾರತೀಯರು ಸಮಯಪಾಲನೆ, ಕೆಲಸದ ಗೌರವ, ಸಾರ್ವಜನಿಕ ಶಿಸ್ತು, ಸ್ವಾವಲಂಬನೆ ಹಾಗೂ ಸಂಶೋಧನಾ ಮನೋಭಾವವನ್ನು ಚೀನಾದಿಂದ ಕಲಿಯಬೇಕಿದೆ ಎಂದು ವಿಠ್ಠಲ್ ಮಲ್ಯ ಅಭಿಪ್ರಾಯಪಟ್ಟರು. ದೇಶದ ಅಭಿವೃದ್ಧಿ ಸರ್ಕಾರದ ಹೊಣೆ ಮಾತ್ರವಲ್ಲ, ನಾಗರಿಕರ ಸಹಭಾಗಿತ್ವವೂ ಅಷ್ಟೇ ಮುಖ್ಯ ಎಂದರು.ವಿವೇಕ್ ತೋಂಟದಾರ್ಯ ಲೇಖನ: ದೇವಸ್ಥಾನಗಳಲ್ಲಿ ಹಣದ ದುರುಪಯೋಗ ತಡೆ ಹೇಗೆ? ಚೀನಾದಲ್ಲಿನ ಉದ್ಯಮ, ವ್ಯಾಪಾರ ಹಾಗೂ ಹೂಡಿಕೆ ಅವಕಾಶಗಳ ಕುರಿತು ಪ್ರತ್ಯೇಕ ಸಂವಾದ ಆಯೋಜಿಸುವ ಅಗತ್ಯವಿದೆ ಎಂದು ಅತಿಥಿಗಳು ಸಲಹೆ ನೀಡಿದರು.ಕಾರ್ಯಕ್ರಮದ ಸಮನ್ವಯವನ್ನು ಶಾಂಘೈ ಕನ್ನಡ ಸಂಘದ ಶ್ರೀಮತಿ ಕಮಲ ನಿರ್ವಹಿಸಿದರು. ಎರಡು ಸಂಘಗಳನ್ನು ಒಂದೇ ವೇದಿಕೆಯಲ್ಲಿ ಸಂಪರ್ಕಿಸಿದ ಅವರ ಪ್ರಯತ್ನವನ್ನು ಜಪಾನ್ ಕನ್ನಡ ಸಂಘದ ಪ್ರವೀಣ್ ಅಭಿನಂದಿಸಿದರು.ವರದಿ: ಪ್ರವೀಣ್ ಇತ್ತಿಹಾದ್ ರೈಲಿನಲ್ಲಿ ಅಬುಧಾಬಿಯಿಂದ ಫುಜೈರಾ: ಟಿಕೆಟ್, ಪ್ರವಾಸಿ ತಾಣಗಳ ಮಾಹಿತಿ