ವಿಪ್ರೊ ಲಾಭದಲ್ಲಿ ಇಲ್ಲ ಏರಿಕೆ
ನವದೆಹಲಿ (ಪಿಟಿಐ): ಐ.ಟಿ. ಸೇವಾ ಕಂಪನಿ ವಿಪ್ರೊ ಜೂನ್ ತ್ರೈಮಾಸಿಕದಲ್ಲಿ ₹3,352 ಕೋಟಿ ಲಾಭ ಗಳಿಸಿದ್ದು, ಹಿಂದಿನ ವರ್ಷದ ಇದೇ ಅವಧಿಯ ಲಾಭಕ್ಕೆ ಹೋಲಿಸಿದರೆ ಈ ಬಾರಿಯ ಗಣನೀಯ ಏರಿಕೆ ದಾಖಲಿಸಿಲ್ಲ.ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು ₹3,330 ಕೋಟಿ ಆಗಿತ್ತು. ಆದರೆ ಕಂಪನಿಯ ಕಾರ್ಯಾಚರಣೆ ವರಮಾನವು ಶೇ 10.6ರಷ್ಟು ಹೆಚ್ಚಳ ಆಗಿದ್ದು ₹24,478 ಕೋಟಿ

ನವದೆಹಲಿ (ಪಿಟಿಐ): ಐ.ಟಿ. ಸೇವಾ ಕಂಪನಿ ವಿಪ್ರೊ ಜೂನ್ ತ್ರೈಮಾಸಿಕದಲ್ಲಿ ₹3,352 ಕೋಟಿ ಲಾಭ ಗಳಿಸಿದ್ದು, ಹಿಂದಿನ ವರ್ಷದ ಇದೇ ಅವಧಿಯ ಲಾಭಕ್ಕೆ ಹೋಲಿಸಿದರೆ ಈ ಬಾರಿಯ ಗಣನೀಯ ಏರಿಕೆ ದಾಖಲಿಸಿಲ್ಲ.ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು ₹3,330 ಕೋಟಿ ಆಗಿತ್ತು. ಆದರೆ ಕಂಪನಿಯ ಕಾರ್ಯಾಚರಣೆ ವರಮಾನವು ಶೇ 10.6ರಷ್ಟು ಹೆಚ್ಚಳ ಆಗಿದ್ದು ₹24,478 ಕೋಟಿಗೆ ತಲುಪಿದೆ. ಹಿಂದಿನ ವರ್ಷದ ಜೂನ್ ತ್ರೈಮಾಸಿಕದಲ್ಲಿ ಇದು ₹22,134 ಕೋಟಿ ಆಗಿತ್ತು.ಮಾರ್ಚ್ ತ್ರೈಮಾಸಿಕದ ಲಾಭಕ್ಕೆ ಹೋಲಿಸಿದರೆ ಈ ಬಾರಿಯ ಲಾಭವು ಶೇ 4.2ರಷ್ಟು ಕಡಿಮೆ ಆಗಿದೆ, ವರಮಾನವು ಶೇ 1ರಷ್ಟು ಜಾಸ್ತಿ ಆಗಿದೆ.‘ತಂತ್ರಜ್ಞಾನದ ಆಧುನೀಕರಣದ ಆಚೆಗೂ ಗ್ರಾಹಕರು ಗಮನ ನೀಡುತ್ತಿದ್ದು, ಗುಣಮಟ್ಟ ಹಾಗೂ ಉತ್ಪಾದಕತೆಯನ್ನು ಹೆಚ್ಚು ಮಾಡುವ ಎ.ಐ. ಸೌಲಭ್ಯವಿರುವ ಕಾರ್ಯಾಚರಣೆ ಮಾದರಿಗಳ ಕಡೆ ಅವರು ಹೆಜ್ಜೆ ಇರಿಸುತ್ತಿದ್ದಾರೆ’ ಎಂದು ಕಂಪನಿಯ ಸಿಇಒ ಶ್ರೀನಿ ಪಲ್ಲಿಯಾ ಹೇಳಿದ್ದಾರೆ.ಕಂಪನಿಯ ಆಡಳಿತ ಮಂಡಳಿಯು ಪ್ರತಿ ಷೇರಿಗೆ ₹2 ಮಧ್ಯಂತರ ಲಾಭಾಂಶ ನೀಡಲು ತೀರ್ಮಾನಿಸಿದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260717-51-430381130