ಇರಾನ್ ಸೇತುವೆಗಳನ್ನು ಗುರಿಯಾಗಿಸಿ ಅಮೆರಿಕ ದಾಳಿ: 7 ಸಾವು, ಹೆಚ್ಚಿದ ಉದ್ವಿಗ್ನತೆ
ಟೆಹರಾನ್: ದಕ್ಷಿಣ ಇರಾನ್ನ ಸೇತುವೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಪಡೆಗಳು ವೈಮಾನಿಕ ದಾಳಿ ನಡೆಸಿವೆ. ಅವಘಡದಲ್ಲಿ 7 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಅಮೆರಿಕದ ದಾಳಿಗೆ ತಿರುಗೇಟು ನೀಡಿರುವ ಇರಾನ್, ಬಹರೇನ್, ಜೋರ್ಡನ್ ಹಾಗೂ ಕುವೈತ್ನಲ್ಲಿರುವ ಅದರ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ತೀವ್ರಗೊಳಿಸಿ

ಟೆಹರಾನ್: ದಕ್ಷಿಣ ಇರಾನ್ನ ಸೇತುವೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಪಡೆಗಳು ವೈಮಾನಿಕ ದಾಳಿ ನಡೆಸಿವೆ. ಅವಘಡದಲ್ಲಿ 7 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.ಅಮೆರಿಕದ ದಾಳಿಗೆ ತಿರುಗೇಟು ನೀಡಿರುವ ಇರಾನ್, ಬಹರೇನ್, ಜೋರ್ಡನ್ ಹಾಗೂ ಕುವೈತ್ನಲ್ಲಿರುವ ಅದರ ಸೇನಾ ನೆಲೆಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ತೀವ್ರಗೊಳಿಸಿದೆ. ಇರಾನ್ನಿಂದ ಸಂಭಾವ್ಯ ಪ್ರಬಲ ದಾಳಿಯ ಬಗ್ಗೆ ಸಾರ್ವಜನಿಕರಿಗೆ ಕತಾರ್ ಎಚ್ಚರಿಕೆ ನೀಡಿದೆ.ಹೊರ್ಮುಜ್ ಜಲಸಂಧಿ ದಾಟುತ್ತಿದ್ದ ಹಡಗುಗಳ ಮೇಲೆ ಇರಾನ್ ನಡೆಸಿದ ದಾಳಿಗೆ ಪ್ರತಿಯಾಗಿ ಅಮೆರಿಕ ಸೇನೆಯು ಸತತ ಆರನೇ ದಿನವೂ ಇರಾನ್ನ ಹಲವು ಸ್ಥಳಗಳ ಮೇಲೆ ಭಾರಿ ವಾಯುದಾಳಿ ನಡೆಸಿದೆ.ಹೊರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ವಾಣಿಜ್ಯ ಹಡಗುಗಳಿಗೆ ಬೆದರಿಕೆಯೊಡ್ಡುತ್ತಿರುವುದರಿಂದ, ಇರಾನ್ನ ಸೇನಾ ಸಾಮರ್ಥ್ಯವನ್ನು ಮತ್ತಷ್ಟು ಕುಗ್ಗಿಸುವ ಉದ್ದೇಶದಿಂದ ಹೊಸ ದಾಳಿಗಳನ್ನು ನಡೆಸಿರುವುದಾಗಿ ಅಮೆರಿಕ ಸೇನೆಯ ಸೆಂಟ್ರಲ್ ಕಮಾಂಡ್ ಹೇಳಿದೆ.ಬುಶೆಹರ್ ಮತ್ತು ಬಂದರ್ ಅಬ್ಬಾಸ್ನ ಪಶ್ಚಿಮ ಭಾಗಗಳಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ನ ಸರ್ಕಾರಿ ಸ್ವಾಮ್ಯದ ಮಾಧ್ಯಮ ಸಂಸ್ಥೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್ಕಾಸ್ಟಿಂಗ್ ವರದಿ ಮಾಡಿದೆ.