ಕೋರ್ಟ್ನಲ್ಲಿ ಅರ್ಜಿ ದಾಖಲಿಸಲು ಲಂಚ:ಹೆಚ್ಚುವರಿ ಸರ್ಕಾರಿ ಅಭಿಯೋಜಕ 'ಲೋಕಾ' ಬಲೆಗೆ
ಕಲಬುರಗಿ: ಹಲ್ಲೆ ಪ್ರಕರಣದಲ್ಲಿ ಕೋರ್ಟ್ನಲ್ಲಿ ರಾಜಿ ಅರ್ಜಿ ದಾಖಲಿಸಲು ಲಂಚ ಪಡೆದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ನಗರದ ಜಿಲ್ಲಾ ಕೋರ್ಟ್ ಆವರಣದ 5ನೇ ಜೆಎಂಎಫ್ಸಿ ನ್ಯಾಯಾಲಯದ ಎಪಿಪಿ ಸಂತೋಷಕುಮಾರ ಲೋಖಂಡೆ ‘ಲೋಕಾ’ ಬಲೆಗೆ ಬಿದ್ದವರು.‘ಕ್ರಿಮಿನಲ್ ಅಪರಾಧ ಪ್ರಕರಣದಲ್ಲಿ ರಾಜಿ ಅರ್ಜಿ ಸಲ್ಲಿಕೆಗೆ ಹೈದರಾಬಾದ್ ಮೂಲದ ರಾಹುಲ್

ಕಲಬುರಗಿ: ಹಲ್ಲೆ ಪ್ರಕರಣದಲ್ಲಿ ಕೋರ್ಟ್ನಲ್ಲಿ ರಾಜಿ ಅರ್ಜಿ ದಾಖಲಿಸಲು ಲಂಚ ಪಡೆದ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.ನಗರದ ಜಿಲ್ಲಾ ಕೋರ್ಟ್ ಆವರಣದ 5ನೇ ಜೆಎಂಎಫ್ಸಿ ನ್ಯಾಯಾಲಯದ ಎಪಿಪಿ ಸಂತೋಷಕುಮಾರ ಲೋಖಂಡೆ ‘ಲೋಕಾ’ ಬಲೆಗೆ ಬಿದ್ದವರು.‘ಕ್ರಿಮಿನಲ್ ಅಪರಾಧ ಪ್ರಕರಣದಲ್ಲಿ ರಾಜಿ ಅರ್ಜಿ ಸಲ್ಲಿಕೆಗೆ ಹೈದರಾಬಾದ್ ಮೂಲದ ರಾಹುಲ್ ಮುಂದಾಗಿದ್ದರು. ಆಗ ಲೋಖಂಡೆ ₹10 ಸಾವಿರ ನಗದು, 9 ಸೀರೆಗಳು, 4 ಶರ್ಟ್ಗಳು, 4 ಲಂಡನ್ ಜೀನ್ಸ್ ಪ್ಯಾಂಟ್, ಒಂದು ಜೊತೆ ಶೂ, ಮಹಿಳೆಯರ ನಾಲ್ಕು ಉಡುಗೆ, ಮಹಿಳೆಯರ 6 ಜೋಡಿ ಚಪ್ಪಲಿಗೆ ಬೇಡಿಕೆ ಇಟ್ಟಿದ್ದರು. ಈ ಕುರಿತು ರಾಹುಲ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು’ ಎಂದು ಮೂಲಗಳು ತಿಳಿಸಿವೆ.ಸಂತೋಷಕುಮಾರ ₹10 ಸಾವಿರ ಹಾಗೂ ಬಟ್ಟೆ ಲಂಚವಾಗಿ ಪಡೆಯುವಾಗ ಲೋಕಾಯುಕ್ತ ಎಸ್ಪಿ ಸಿ.ಸಿದ್ದರಾಜು ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಅರುಣಕುಮಾರ ಮುರಗುಂಡಿ ನೇತೃತ್ವದ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ. ಸಂತೋಷಕುಮಾರ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅದೇ ಮೂಲಗಳು ತಿಳಿಸಿವೆ.
Read the complete story at Prajavani