ನೀಟ್: 11.21 ಲಕ್ಷ ವಿದ್ಯಾರ್ಥಿಗಳು ಅರ್ಹ
ನವದೆಹಲಿ(ಪಿಟಿಐ): ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಕ್ಕಾಗಿನ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್–ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ಗುರುವಾರ ಪ್ರಕಟಿಸಿದ್ದು, ಪಂಜಾಬ್ನ ಆರ್ಯನ್ ಗುಪ್ತ ಹಾಗೂ ಹರಿಯಾಣದ ಪಾಂಶುಲ್ ಬನ್ಸಲ್ ಅಗ್ರ ಸ್ಥಾನ ಪಡೆದಿದ್ದಾರೆ.ಆರ್ಯನ್ ಹಾಗೂ ಬನ್ಸಲ್ ಅವರು 720 ಅಂಕಗಳ ಪೈಕಿ ತಲಾ 715 ಅ

ನವದೆಹಲಿ(ಪಿಟಿಐ): ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಕ್ಕಾಗಿನ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್–ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ಟಿಎ) ಗುರುವಾರ ಪ್ರಕಟಿಸಿದ್ದು, ಪಂಜಾಬ್ನ ಆರ್ಯನ್ ಗುಪ್ತ ಹಾಗೂ ಹರಿಯಾಣದ ಪಾಂಶುಲ್ ಬನ್ಸಲ್ ಅಗ್ರ ಸ್ಥಾನ ಪಡೆದಿದ್ದಾರೆ.ಆರ್ಯನ್ ಹಾಗೂ ಬನ್ಸಲ್ ಅವರು 720 ಅಂಕಗಳ ಪೈಕಿ ತಲಾ 715 ಅಂಕಗಳನ್ನು ಪಡೆದು ಈ ಸಾಧನೆ ಮಾಡಿದ್ದಾರೆ. 2025ರಲ್ಲಿ ನಡೆದಿದ್ದ ‘ನೀಟ್–ಯುಜಿ’ಯಲ್ಲಿ ಅಭ್ಯರ್ಥಿಯೊಬ್ಬರು ಅತ್ಯಧಿಕ 686 ಅಂಕ ಗಳಿಸಿದ್ದರು. ಆರ್ಯನ್ ಹಾಗೂ ಬನ್ಸಲ್ ಅವರು ಕಳೆದ ವರ್ಷದ ಅಭ್ಯರ್ಥಿಗಿಂತ 29 ಅಂಕ ಹೆಚ್ಚು ಗಳಿಸಿದ್ದಾರೆ.ಒಟ್ಟು 11.21 ಲಕ್ಷ ವಿದ್ಯಾರ್ಥಿಗಳು ಈ ವರ್ಷ ಅರ್ಹತೆ ಪಡೆದಿದ್ದಾರೆ. 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.ಬಹುಮುಖ್ಯವಾದ ಈ ಪರೀಕ್ಷೆ ಮೇ 9ರಂದು ನಡೆದಿತ್ತು. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಕುರಿತು ಆರೋಪಗಳು ಕೇಳಿ ಬಂದ ಕಾರಣ, ಮೇ 12ರಂದು ಎನ್ಟಿಎ ಈ ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಜೂನ್ 21ರಂದು ಮರು ಪರೀಕ್ಷೆ ನಡೆಸಿತ್ತು.ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕುರಿತಂತೆ ಸಿಬಿಐ ತನಿಖೆ ನಡೆಸುತ್ತಿದೆ.ಕಳೆದ ವರ್ಷ ಜೂನ್ 25ರಂದು ‘ನೀಟ್–ಯುಜಿ’ ಫಲಿತಾಂಶವನ್ನು ಪ್ರಕಟಿಸಲಾಗಿತ್ತು. ಈ ವರ್ಷ, ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳಿಂದಾಗಿ ಮರು ಪರೀಕ್ಷೆ ನಡೆದಿತ್ತು. ಇದರಿಂದ ಫಲಿತಾಂಶ ಪ್ರಕಟವಾಗುವುದು ವಿಳಂಬವಾಗಿ ಪ್ರವೇಶ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ ಎಂಬ ಆತಂಕ ಮನೆ ಮಾಡಿತ್ತು.‘ಇಂತಹ ಆತಂಕವನ್ನು ದೂರ ಮಾಡುವ ಸಲುವಾಗಿ ಹಾಗೂ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಮತ್ತು ಕೌನ್ಸೆಲಿಂಗ್ ಸಕಾಲದಲ್ಲಿ ನಡೆಯುವಂತಾಗಲು ಫಲಿತಾಂಶವನ್ನು ಪ್ರಕಟಿಸಲಾಗಿದೆ’ ಎಂದು ಎನ್ಟಿಎ ಸ್ಪಷ್ಟಪಡಿಸಿದೆ.ಒಟ್ಟು 1,08,000 ಎಂಬಿಬಿಎಸ್ ಸೀಟುಗಳು ಲಭ್ಯವಿದ್ದು, ಇವುಗಳ ಪ್ರವೇಶಕ್ಕಾಗಿ ಪ್ರತಿ ವರ್ಷ ಎನ್ಟಿಎ ಈ ಪರೀಕ್ಷೆಯನ್ನು ನಡೆಸುತ್ತದೆ. ಈ ಪೈಕಿ, 56 ಸಾವಿರ ಸೀಟುಗಳು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿದ್ದು, ಖಾಸಗಿ ಕಾಲೇಜುಗಳಲ್ಲಿ ಅಂದಾಜು 52 ಸಾವಿರ ಸೀಟುಗಳು ಲಭ್ಯವಾಗಲಿವೆ.ದಂತವೈದ್ಯಕೀಯ, ಆಯುರ್ವೇದ, ಯುನಾನಿ ಹಾಗೂ ಸಿದ್ಧ ಪದ್ಧತಿ ಕೋರ್ಸ್ಗಳ ಪ್ರವೇಶಕ್ಕೆಕೂಡ ನೀಟ್ ಅಂಕಗಳನ್ನು ಬಳಸಿಕೊಳ್ಳಲಾಗುತ್ತದೆ.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260717-4-54517593