5 ಲಕ್ಷ ಲಂಚಕ್ಕೆ ಕೈಯೊಡ್ಡಿದ್ದ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ʻಲೋಕಾʼ ಬಲೆಗೆ
ಚಿತ್ರದುರ್ಗ: ಜಿಲ್ಲೆಯ (Chitradurga) ಹಿರಿಯೂರು (Hiriyur) ಪಟ್ಟಣದ ಬಳಿ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಪ್ರವಾಸೋದ್ಯಮ ಇಲಾಖೆ (Tourism Department) ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ. ಈತ ಹೊಸಪೇಟೆಯ ಗುತ್

ಚಿತ್ರದುರ್ಗ: ಜಿಲ್ಲೆಯ (Chitradurga) ಹಿರಿಯೂರು (Hiriyur) ಪಟ್ಟಣದ ಬಳಿ 5 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಪ್ರವಾಸೋದ್ಯಮ ಇಲಾಖೆ (Tourism Department) ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಲಬುರಗಿ ವಿಭಾಗದ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕ ತಿಪ್ಪೇಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ. ಈತ ಹೊಸಪೇಟೆಯ ಗುತ್ತಿಗೆದಾರ ಲಕ್ಷ್ಮೀಕಾಂತ್ ಅವರ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಲಕ್ಷ್ಮೀಕಾಂತ್ ಹೊಸಪೇಟೆಯಲ್ಲಿ 48 ಲಕ್ಷ ರೂ. ಕಾಮಗಾರಿ ಮಾಡಿದ್ದರು. ಕಾಮಗಾರಿ ಬಗ್ಗೆ ತನಿಖೆ ಮಾಡಿಸುತ್ತೇನೆ ಎಂದು ಆರೋಪಿ ಬ್ಲ್ಯಾಕ್ಮೇಲ್ ಮಾಡಿದ್ದ. 10 ಲಕ್ಷ ರೂ. ಲಂಚ ನೀಡಿದರೆ ತನಿಖೆ ಮಾಡಲ್ಲ ಎಂದಿದ್ದ. ಈ ಸಂಬಂಧ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಇದನ್ನೂ ಓದಿ: ಬಳ್ಳಾರಿ | 3.50 ಲಕ್ಷ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿ 5 ಲಕ್ಷ ರೂ. ಹಣವನ್ನು ಲಕ್ಷ್ಮೀಕಾಂತ್ ಅವರ ಬಳಿ ತಿಪ್ಪೇಸ್ವಾಮಿ ಹಿರಿಯೂರು ಪಟ್ಟಣದ ಬಳಿ ಪಡೆಯಲು ಬಂದಿದ್ದ. ಈ ವೇಳೆ ಲೋಕಾಯುಕ್ತ ಪೊಲೀಸರು ಆತನನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಳ್ಳಾರಿ ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ. ಇದನ್ನೂ ಓದಿ: ಅಟ್ರಾಸಿಟಿ ಕೇಸ್ – 19 ಆರೋಪಿಗಳನ್ನ ಕೈಬಿಡಲು ತಲಾ 50,000 ಲಂಚಕ್ಕೆ ಬೇಡಿಕೆ; ಇಬ್ಬರು ಅಧಿಕಾರಿಗಳ ವಿರುದ್ಧ FIR