ಬಂಡಲ್ ಮುಖ್ಯಮಂತ್ರಿ, ರೀಲ್ಸ್ ಮಂತ್ರಿ.. ಬೆಂಗಳೂರು ಹೇಗೆ ಉದ್ಧಾರ ಆದೀತು?: ಅಶೋಕ
ಬೆಂಗಳೂರು: ರಾಜ್ಯದಲ್ಲಿ ಬಂಡಲ್ ಮುಖ್ಯಮಂತ್ರಿ ಮತ್ತು ರೀಲ್ಸ್ ಮಂತ್ರಿ ಇದ್ದಾರೆ. ಹೀಗಿರುವಾಗ ಬೆಂಗಳೂರು ಹೇಗೆ ಉದ್ಧಾರ ಆದೀತು? ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‘9 ತಿಂಗಳಾದರೂ ನಡೆಯದ ಜಿಬಿಎ ಸಭೆ’ ಎನ್ನುವ ಶೀರ್ಷಿಕೆಯಡಿ ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಯನ್ನು ಪೋಸ್ಟ್ ಮಾಡಿ, ಆರ್. ಅಶೋಕ ಟ್ವೀಟ್ ಮಾಡಿದ್ದಾರೆ. ಬಂಡಲ್
ಬೆಂಗಳೂರು: ರಾಜ್ಯದಲ್ಲಿ ಬಂಡಲ್ ಮುಖ್ಯಮಂತ್ರಿ ಮತ್ತು ರೀಲ್ಸ್ ಮಂತ್ರಿ ಇದ್ದಾರೆ. ಹೀಗಿರುವಾಗ ಬೆಂಗಳೂರು ಹೇಗೆ ಉದ್ಧಾರ ಆದೀತು? ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‘9 ತಿಂಗಳಾದರೂ ನಡೆಯದ ಜಿಬಿಎ ಸಭೆ’ ಎನ್ನುವ ಶೀರ್ಷಿಕೆಯಡಿ ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿಯನ್ನು ಪೋಸ್ಟ್ ಮಾಡಿ, ಆರ್. ಅಶೋಕ ಟ್ವೀಟ್ ಮಾಡಿದ್ದಾರೆ. ಬಂಡಲ್ ಮುಖ್ಯಮಂತ್ರಿ, ರೀಲ್ಸ್ ಮಂತ್ರಿ... ಇನ್ನು ಬೆಂಗಳೂರು ಹೇಗೆ ಉದ್ಧಾರ ಆದೀತು?ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ (GBGA) ತಂದು "ಬ್ರ್ಯಾಂಡ್ ಬೆಂಗಳೂರು" ಕಟ್ಟುತ್ತೇವೆ ಎಂದು ಜಗತ್ತಿಗೇ ಡಂಗುರ ಸಾರಿದ ಕಾಂಗ್ರೆಸ್ ಸರ್ಕಾರದ ನಿಜವಾದ ಸಾಧನೆ ಏನು ಗೊತ್ತೇ? ತಮ್ಮದೇ ಸರ್ಕಾರ ರೂಪಿಸಿದ ಕಾಯ್ದೆಯನ್ನು ತಾವೇ ಉಲ್ಲಂಘಿಸಿರುವುದು!ಪ್ರತಿ… pic.twitter.com/c2eXA11uWZ— R. Ashoka (@RAshokaBJP) July 17, 2026 ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ(ಜಿಬಿಜಿಎ) ತಂದು ‘ಬ್ರ್ಯಾಂಡ್ ಬೆಂಗಳೂರು’ ಕಟ್ಟುತ್ತೇವೆ ಎಂದು ಜಗತ್ತಿಗೇ ಡಂಗೂರ ಸಾರಿದ ಕಾಂಗ್ರೆಸ್ ಸರ್ಕಾರದ ನಿಜವಾದ ಸಾಧನೆ ಏನು ಗೊತ್ತೇ? ತಮ್ಮದೇ ಸರ್ಕಾರ ರೂಪಿಸಿದ ಕಾಯ್ದೆಯನ್ನು ತಾವೇ ಉಲ್ಲಂಘಿಸಿರುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಜಿಬಿಜಿಎ ಸಭೆ ಕಡ್ಡಾಯವಾಗಿ ನಡೆಯಬೇಕು ಎಂದು ಕಾಯ್ದೆಯಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಿದ್ದರೂ, ಮೊದಲ ಸಭೆ ನಡೆದ ಬಳಿಕ ಬರೋಬ್ಬರಿ 9 ತಿಂಗಳು ಕಳೆದರೂ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ! ಇದೇನಾ ನಿಮ್ಮ ಆಡಳಿತ? ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರು ಎಂದು ಕಿಡಿಕಾರಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರೇ, ಕಾನೂನು ಜನರಿಗೆ ಮಾತ್ರವೇ? ನಿಮ್ಮ ಸರ್ಕಾರಕ್ಕೆ ಅನ್ವಯಿಸುವುದಿಲ್ಲವೇ? ದಿನಬೆಳಗಾದರೆ ರೀಲ್ಸ್, ಫೇಸ್ಬುಕ್ ಲೈವ್ ಅಂತ ಬಿಟ್ಟಿ ಪ್ರಚಾರಕ್ಕೆ ಸಮಯವಿದೆ. ಆದರೆ ಬೆಂಗಳೂರಿನ ಭವಿಷ್ಯ ನಿರ್ಧರಿಸುವ ಕಡ್ಡಾಯ ಸಭೆ ನಡೆಸಲು ಮಾತ್ರ ಸಮಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಮತ್ತು ಸಚಿವರಿಗೆ ನಾನು ನೇರ ಪ್ರಶ್ನೆಗಳನ್ನು ಕೇಳುತ್ತೇನೆ, 2025ರ ಅಕ್ಟೋಬರ್ 10ರಂದು ಮೊದಲ ಸಭೆ ನಡೆಸಿದ ಬಳಿಕ 9 ತಿಂಗಳು ಮೌನ ಯಾಕೆ? ನಿಮ್ಮದೇ ಸರ್ಕಾರ ತಂದ ಕಾಯ್ದೆಯನ್ನು ಉಲ್ಲಂಘಿಸಲು ನಿಮಗೆ ಅಧಿಕಾರ ಕೊಟ್ಟವರು ಯಾರು?, ಸಭೆಯ ತೀರ್ಮಾನಗಳನ್ನು ಮೂರು ದಿನಗಳೊಳಗೆ ಸಾರ್ವಜನಿಕವಾಗಿ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎಂಬ ನಿಯಮವಿದೆ. ಆದರೆ ಇಂದಿಗೂ ಯಾವುದೇ ಮಾಹಿತಿ ಲಭ್ಯವಿಲ್ಲ. ಏನನ್ನು ಮುಚ್ಚಿಡುತ್ತಿದ್ದೀರಿ? ಯಾರನ್ನು ರಕ್ಷಿಸುತ್ತಿದ್ದೀರಿ?, ಬಿಬಿಎಂಪಿಯನ್ನು ಒಡೆದು ಜಿಬಿಜಿಎ ತಂದ ಪರಿಣಾಮ ಏನು? ರಸ್ತೆಗಳು ಗುಂಡಿಮಯ, ಸಂಚಾರ ಅಸ್ತವ್ಯಸ್ತ, ಕಸದ ಸಮಸ್ಯೆ ಉಲ್ಬಣ, ಮಳೆ ಬಂದರೆ ಪ್ರವಾಹ, ಮಳೆ ಬರದಿದ್ದರೆ ನೀರಿನ ಬಿಕ್ಕಟ್ಟು. ಇದೇನಾ ನಿಮ್ಮ ಬ್ರ್ಯಾಂಡ್ ಬೆಂಗಳೂರು? ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಸಾವಿರಾರು ಕೋಟಿ ರೂಪಾಯಿಗಳ ಘೋಷಣೆ ಮಾಡಿದೆ, ಆದರೆ ವಾಸ್ತವದಲ್ಲಿ ಶೂನ್ಯ ಸಾಧನೆ ಮಾಡಿದೆ. ಆಡಳಿತದಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿದ್ದು, ಇದೇ ಕಾಂಗ್ರೆಸ್ ಸರ್ಕಾರದ 'ಬ್ರ್ಯಾಂಡ್ ಬೆಂಗಳೂರು' ಮಾದರಿಯೇ? ಎಂದು ಪ್ರಶ್ನಿಸಿದ್ದಾರೆ. ಬೆಂಗಳೂರು ನಿಮ್ಮ ರೀಲ್ಸ್ಗಳ ಸೆಟ್ ಅಲ್ಲ, ಒಂದು ಕೋಟಿ, ಐವತ್ತು ಲಕ್ಷ ಜನರ ಬದುಕಿನ ನಗರ. ತಕ್ಷಣವೇ ಜಿಬಿಜಿಎ ಸಭೆ ಕರೆದು, ಕಾಯ್ದೆಯ ಅನ್ವಯ ಎಲ್ಲಾ ನಿರ್ಧಾರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಿ. ಇಲ್ಲದಿದ್ದರೆ ಕಾನೂನು ಉಲ್ಲಂಘಿಸಿ ಬೆಂಗಳೂರಿನ ಅಭಿವೃದ್ಧಿಯನ್ನು ಬಲಿ ಪಡೆದ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಬೆಂಗಳೂರು ಜನರೇ ಪ್ರಜಾಪ್ರಭುತ್ವದ ಮೂಲಕ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.