ಕಾಕ್ರೋಚ್ ಪಕ್ಷದ ಪರ 20 ದಿನದಿಂದ ಉಪವಾಸ ನಡೆಸುತ್ತಿರೋ ವಾಂಗ್ಚೂಕ್ ಹಿನ್ನೆಲೆ ಏನು?
ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಾರ್ಟಿ' ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಪ್ರತಿಭಟನೆಯನ್ನ

ನವದೆಹಲಿ: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ 'ಕಾಕ್ರೋಚ್ ಜನತಾ ಪಾರ್ಟಿ' ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಪರಿಸರವಾದಿ ಮತ್ತು ಸಾಮಾಜಿಕ ಕಾರ್ಯಕರ್ತ ಸೊನಮ್ ವಾಂಗ್ಚೂಕ್ ಪ್ರತಿಭಟನೆಯನ್ನು ಬೆಂಬಲಿಸಿ ಜೂನ್ 28ರಿಂದ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.ಈ ಉಪವಾಸ ಇದೀಗ 20ನೇ ದಿನಕ್ಕೆ ಕಾಲಿಟ್ಟಿದೆ. 9 ಕೆ.ಜಿ.ಗೂ ಹೆಚ್ಚು ತೂಕ ಕಳೆದುಕೊಂಡು ಆರೋಗ್ಯ ತೀವ್ರ ಹದಗೆಟ್ಟಿದ್ದರೂ, ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ವಾಂಗ್ಚೂಕ್ ಘಂಟಾಘೋಷವಾಗಿ ಹೇಳಿದ್ದಾರೆ. ಪರಿಸರ ಸಂರಕ್ಷಣೆ ಸಲುವಾಗಿ ಈ ಹಿಂದೆಯೂ ಹಲವು ಬಾರಿ ಉಪವಾಸ ಕುಳಿತಿದ್ದ ಅವರು, ‘ಉಪವಾಸ ನಿಲ್ಲಿಸಿ ಎಂದು ಹೇಳುವ ಬದಲು, ಪ್ರತಿಭಟನೆಯಲ್ಲಿ ಪಾಲ್ಗೊಳ್ಳಿ’ ಎಂದು ಹಿತೈಶಿಗಳಿಗೆ ಕರೆ ನೀಡಿದ್ದಾರೆ.ಯಾರು ಈ ಸೊನಮ್ ವಾಂಗ್ಚೂಕ್?ಪರಿಸರವಾದಿ ಹಾಗೂ ಲಡಾಖ್ಗೆ ಹೆಚ್ಚಿನ ಸಾಂವಿಧಾನಿಕ ರಕ್ಷಣೆಯೂ ಸೇರಿದಂತೆ ಪ್ರಾದೇಶಿಕ ಹಕ್ಕುಗಳ ಧ್ವನಿಯಾಗಿ ಜಾಗತಿಕವಾಗಿ ಗುರುತಿಸಿಕೊಂಡವರು ವಾಂಗ್ಚೂಕ್. ಲಡಾಖ್ನ ಶ್ಯಾಮ್ ಜಿಲ್ಲೆಯ ‘ಐಚಿ’ ಎಂಬ ಗ್ರಾಮದಲ್ಲಿ 1966ರ ಸೆಪ್ಟೆಂಬರ್ 1ರಂದು ಜನಿಸಿದ ಅವರ ವಯಸ್ಸೀಗ 59.ಹವಾಮಾನ ಕಾರ್ಯಕರ್ತ, ಶಿಕ್ಷಣ ಸುಧಾರಕರೂ ಆಗಿರುವ ವಾಂಗ್ಚೂಕ್, ಪರ್ಯಾಯ ಶಿಕ್ಷಣ ರೂಪಿಸುವ ನಿಟ್ಟಿನಲ್ಲಿ 1988ರಲ್ಲಿ ‘ಲಡಾಖ್ ವಿದ್ಯಾರ್ಥಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಳವಳಿ’ (SECMOL) ಸ್ಥಾಪಿಸಿ ಗುರುತಿಸಿಕೊಂಡಿದ್ದಾರೆ. ಕೃತಕವಾಗಿ ಹಿಮನದಿ ತಂತ್ರಜ್ಞಾನದ ಮೂಲಕ ‘ಐಸ್ ಸ್ತೂಪ’ ನಿರ್ಮಿಸಿ ಜನಪ್ರಿಯರಾಗಿದ್ದಾರೆ.ಸಂಪಾದಕೀಯ: ವಾಂಗ್ಚೂಕ್ರ ಉಪವಾಸ ಸತ್ಯಾಗ್ರಹ, ನೈತಿಕ ರಾಜಕೀಯದ ಮೌಲ್ಯಮಾದರಿ3 ಈಡಿಯಟ್ಸ್ ಮಾಡುವಾಗ ವಾಂಗ್ಚೂಕ್ ಬಗ್ಗೆ ಗೊತ್ತೇ ಇರಲಿಲ್ಲ ಎಂದ ನಟ ಅಮೀರ್ ಖಾನ್ಹಿಮ ಕರಗಿ ಹರಿಯುವ ನೀರನ್ನು ಹೆಪ್ಪುಗಟ್ಟಿಸಿ ಕೃತಕ ಪರ್ವತದಂತೆ ಅಥವಾ ಗೋಪುರದಂತೆ ರೂಪಿಸುವ ಮೂಲಕ ಸಂಗ್ರಹಿಸಿ, ಬೇಸಿಗೆಯಲ್ಲಿ ಉಪಯೋಗಕ್ಕೆ ಬರುವಂತೆ ರೂಪಿಸಿದ್ದ ‘ಐಸ್ ಸ್ತೂಪ’ ತಂತ್ರಜ್ಞಾನಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಈ ತಂತ್ರವು ಜಾಗತಿಕವಾಗಿ ಮುಕ್ತವಾಗಿರಬೇಕು ಎಂಬ ಕಾರಣಕ್ಕೆ ಅವರು ಪೇಟೆಂಟ್ ಅನ್ನೂ ಪಡೆದುಕೊಂಡಿಲ್ಲ.ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಮತ್ತು ಕೌಶಲ್ಯಾಭಿವೃದ್ಧಿಗೆ ತರಬೇತಿ ನೀಡುವ SECMOL, ಲಡಾಖ್ ಪ್ರದೇಶದಲ್ಲಿ ಶೈಕ್ಷಣಿಕವಾಗಿ ಸಾಕಷ್ಟು ಸುಧಾರಣೆಗಳನ್ನು ತಂದಿದೆ. ಸೃಜನಶೀಲತೆ, ವಿಜ್ಞಾನ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಬೆಸೆದು ಆರ್ಥಿಕ ಪ್ರಗತಿಗೆ ಕೊಡುಗೆ ನೀಡಿದ್ದಕ್ಕಾಗಿ ವಾಂಗ್ಚೂಕ್ ಅವರಿಗೆ 2018ರಲ್ಲಿ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ‘ಏಷ್ಯಾದ ನೊಬೆಲ್’ ಎಂಬ ಖ್ಯಾತಿ ಈ ಪ್ರಶಸ್ತಿಯದ್ದು.ಕಾಶ್ಮೀರದ ಶ್ರೀನಗರದಲ್ಲಿರುವ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (NIT) ಎಂಜಿನಿಯರಿಂಗ್ ಓದುತ್ತಿದ್ದಾಗ ವಾಂಗ್ಚೂಕ್ ಅವರು ತಮ್ಮ ಶೈಕ್ಷಣಿಕ ವೆಚ್ಚ ಭರಿಸಿಕೊಳ್ಳಲು ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ನೆರವಾಗುವ ಸಲುವಾಗಿ, ಟ್ಯೂಷನ್ ಮಾಡುತ್ತಿದ್ದರು.ವಾಂಗ್ಚೂಕ್ ಅವರ ಪತ್ನಿ ಗೀತಾಂಜಲಿ ಜೆ. ಆಂಗ್ಮೋ ಅವರು ಸಾಮಾಜಿಕ ಉದ್ಯಮಿ, ಶಿಕ್ಷಣತಜ್ಞೆ ಮತ್ತು ಹಿಮಾಲಯನ್ ಇನ್ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್ನ (HIAL) ಸಹ-ಸಂಸ್ಥಾಪಕಿ ಮತ್ತು ನಿರ್ದೇಶಕಿಯಾಗಿದ್ದಾರೆ.ವಾಂಗ್ಚೂಕ್ ಅವರ ತಂದೆ ಸೊನಮ್ ವಾಂಗ್ಯಾಲ್, ಲಡಾಖ್ನ ಪ್ರಮುಖ ರಾಜಕಾರಣಿ. ಅವರು ಫಾರೂಕ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಜೊತೆ ಒಡನಾಟ ಹೊಂದಿದ್ದರು. ಜಮ್ಮು ಮತ್ತು ಕಾಶ್ಮೀರ ಸರ್ಕಾರದಲ್ಲಿ ಸಚಿವರೂ ಆಗಿದ್ದರು. 1998ರಲ್ಲಿ ನಿಧನರಾದರು.ಲಡಾಖ್ಗಾಗಿ ಉಪವಾಸವಾಂಗ್ಚೂಕ್ ಅವರು, ಲಡಾಖ್ಗೆ ರಾಜ್ಯದ ಸ್ಥಾನಮಾನ ನೀಡಬೇಕು. ಲಡಾಖ್ ಅನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಿ ಸ್ವಾಯತ್ತ ಪ್ರದೇಶ ಎಂದು ಘೋಷಿಸಬೇಕು ಎಂದು ಒತ್ತಾಯಿಸಿ 2025ರ ಸೆಪ್ಟೆಂಬರ್ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದನ್ನು ಬೆಂಬಲಿಸಿ, ಲೇಹ್ ಅಪೆಕ್ಸ್ ಬಾಡಿ (LAB) ಲಡಾಖ್ ಬಂದ್ಗೆ ಕರೆ ನೀಡಿತ್ತು.19 ದಿನ ಪೂರೈಸಿದ ವಾಂಗ್ಚೂಕ್ ಸತ್ಯಾಗ್ರಹ: 9 ಕೆ.ಜಿ ತೂಕ ಇಳಿಕೆ, ವೈದ್ಯರ ಎಚ್ಚರಿಕೆಜನರ ಧ್ವನಿಗೆ ಕಿವಿಗೊಡಿ: ಮೋದಿಗೆ ಉಪವಾಸ ನಿರತ ಸೊನಮ್ ವಾಂಗ್ಚೂಕ್ ಮನವಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ನಾಲ್ವರು ಮೃತಪಟ್ಟು, 80ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಅದರ ಬೆನ್ನಲ್ಲೇ, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (BNS) ಸೆಕ್ಷನ್ 163ರ ಅಡಿಯಲ್ಲಿ ನಗರದಾದ್ಯಂತ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ವಾಂಗ್ಚೂಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿ ಬಂಧಿಸಲಾಗಿತ್ತು.‘ತ್ರಿ ಈಡಿಯಟ್ಸ್’ಗೆ ಪ್ರೇರಣೆಯಾದ ವಾಂಗ್ಚೂಕ್2009ರಲ್ಲಿ ತೆರೆಕಂಡ ‘ತ್ರಿ ಈಡಿಯೆಟ್ಸ್’ ಸಿನಿಮಾ, ಗಲ್ಲಾ ಪೆಟ್ಟಿಗೆಯಲ್ಲಿ ₹ 400 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು. ಅದರಲ್ಲಿ ಅಮೀರ್ ಖಾನ್, ಆರ್.ಮಾಧವನ್ ಮತ್ತು ಶರ್ಮಾನ್ ಜೋಶಿ ಸ್ನೇಹಿತರಾಗಿ ಕಾಣಿಸಿಕೊಂಡಿದ್ದರು.ಅಮೀರ್ ಖಾನ್ ನಿರ್ವಹಿಸಿದ್ದ ‘ಫುನ್ಸುಖ್ ವಾಂಗ್ಡು’ ಎಂಬ ಪಾತ್ರಕ್ಕೆ ವಾಂಗ್ಚೂಕ್ ಅವರೇ ಪ್ರೇರಣೆ ಎನ್ನಲಾಗಿದೆ.