ದಿನಸಿ ತರಲು ತೆರಳಿದ್ದ ರಾಷ್ಟ್ರ ಮಟ್ಟದ ಯುವ ಶೂಟರ್ ದಮಯಂತಿ ಸೇನ್ ನಾಪತ್ತೆ
ಕೋಲ್ಕತ್ತಾ: ಯುವ ಶೂಟರ್ ದಮಯಂತಿ ಸೇನ್ (15) (Damayanti Sen) ನಾಪತ್ತೆಯಾಗಿದ್ದಾರೆ. ಅವರು ಪಶ್ಚಿಮ ಬಂಗಾಳದ (West Bengal) ಹೌರಾದಲ್ಲಿರುವ ಅವರ ಮನೆಯಿಂದ ದಿನಸಿ ಸಾಮಾನುಗಳನ್ನು ತರಲು ತೆರಳಿದ್ದರು. ಜು.16ರ ಮಧ್ಯಾಹ್ನ ಅವರು ಕಾಣೆಯಾಗಿದ್ದಾರೆ. ಅವರು ಮನೆಯಿಂದ ದಿನಸಿ ತರಲು ತೆರಳಿದ್ದವರು ವಾಪಸ್ ಆಗಿರಲಿಲ್ಲ. ಅವರ ಸ್ನೇಹಿತರು, ಶೂಟಿಂಗ್ ಸಹಚರರು ಮತ್ತು ಸಂಬಂಧಿ

ಕೋಲ್ಕತ್ತಾ: ಯುವ ಶೂಟರ್ ದಮಯಂತಿ ಸೇನ್ (15) (Damayanti Sen) ನಾಪತ್ತೆಯಾಗಿದ್ದಾರೆ. ಅವರು ಪಶ್ಚಿಮ ಬಂಗಾಳದ (West Bengal) ಹೌರಾದಲ್ಲಿರುವ ಅವರ ಮನೆಯಿಂದ ದಿನಸಿ ಸಾಮಾನುಗಳನ್ನು ತರಲು ತೆರಳಿದ್ದರು. ಜು.16ರ ಮಧ್ಯಾಹ್ನ ಅವರು ಕಾಣೆಯಾಗಿದ್ದಾರೆ. ಅವರು ಮನೆಯಿಂದ ದಿನಸಿ ತರಲು ತೆರಳಿದ್ದವರು ವಾಪಸ್ ಆಗಿರಲಿಲ್ಲ. ಅವರ ಸ್ನೇಹಿತರು, ಶೂಟಿಂಗ್ ಸಹಚರರು ಮತ್ತು ಸಂಬಂಧಿಕರ ಮನೆಗಳಲ್ಲಿ ವಿಚಾರಿಸಲಾಗಿದ್ದು, ಯಾವುದೇ ಮಾಹಿತಿ ಸಿಕ್ಕಿಲ್ಲ. ಬಳಿಕ ಅವರ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಸೇನ್ಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮಹಿಳೆಯರ ಚಪ್ಪಲಿ, 9 ಸೀರೆ ಜೊತೆ 10,000 ಲಂಚ ಪಡೆಯುವಾಗ ರೆಡ್ಹ್ಯಾಂಡಾಗಿ ಸಿಕ್ಕಿಬಿದ್ದ ಎಪಿಪಿ ಹೌರಾ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆಕೆ ನಾಲ್ಕು ಮತ್ತು ಐದನೇ ಪ್ಲಾಟ್ಫಾರ್ಮ್ಗಳ ನಡುವೆ ಚಲಿಸುತ್ತಿರುವುದು ಸೆರೆಯಾಗಿದೆ. ಆಕೆ ಮನೆಯಿಂದ ಹೊರಟಾಗ ಆಕೆಯ ಬಳಿ ಮೊಬೈಲ್ ಫೋನ್ ಇತ್ತು ಎಂದು ತಿಳಿದುಬಂದಿದೆ. ರಾಷ್ಟ್ರೀಯ ತಂಡದ ಟ್ರಯಲ್ಸ್ಗೆ ಆಯ್ಕೆಯಾದ ನಂತರ ದಮಯಂತಿ ಕಟ್ಟುನಿಟ್ಟಿನ ದಿನಚರಿಯನ್ನು ಅನುಸರಿಸುತ್ತಿದ್ದಳು. ಇತ್ತೀಚೆಗೆ ಕುಟುಂಬದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು ಉಂಟಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದಮಯಂತಿ ಗುಲಾಬಿ ಬಣ್ಣದ ಟೀ ಶರ್ಟ್ ಮತ್ತು ಪ್ಯಾಂಟ್ ಧರಿಸಿದ್ದರು. ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕರೂ ತಮ್ಮನ್ನು ಸಂಪರ್ಕಿಸಿ ಎಂದು ಬಾಲಕಿಯ ತಾಯಿ ಸಾಮಾಜಿಕ ಜಾಲತಾಣದಲ್ಲಿ ಕೋರಿದ್ದಾರೆ. ಸೇನ್ ಹಠಾತ್ ಕಣ್ಮರೆಯ ಬಗ್ಗೆ ಕುಟುಂಬ ಸದಸ್ಯರು, ನೆರೆಹೊರೆಯವರು ಮತ್ತು ಸಹ ಶೂಟರ್ಗಳು ಕಳವಳ ವ್ಯಕ್ತಪಡಿಸಿದ್ದಾರೆ. ಹೌರಾದಲ್ಲಿರುವ ಉಮಾಚರಣ್ ಭಟ್ಟಾಚಾರ್ಜಿ ಲೇನ್ ನಿವಾಸಿಯಾದ ದಮಯಂತಿ ಸೇನ್, ರಾಷ್ಟ್ರೀಯ ತಂಡದ ಟ್ರಯಲ್ಸ್ಗೆ ಆಯ್ಕೆಯಾಗಿದ್ದರು. ರಾಜ್ಯ ಶೂಟಿಂಗ್ ವಲಯಗಳಲ್ಲಿ ಸದಾ ಸಕ್ರಿಯರಾಗಿದ್ದರು. ಇದನ್ನೂ ಓದಿ: ದೇವರ ದರ್ಶನಕ್ಕೆಂದು ಕರೆದೊಯ್ದು ಪತಿಯ ಕೊಲೆ – ಪ್ರಿಯಕರನಿಗೆ ಲೈವ್ ಲೊಕೇಷನ್ ಕಳುಹಿಸಿದ್ದ ಪತ್ನಿ