ಬೇಜವಾಬ್ದಾರಿಯಿಂದ ಬುಲೆಟ್ ರೈಲು ವಿಳಂಬ: ಜಪಾನ್ ಸಚಿವರ ಹೇಳಿಕೆಗೆ ಭಾರತ ಸ್ಪಷ್ಟನೆ
ನವದೆಹಲಿ: ಜಪಾನ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆಯ ಪ್ರಗತಿ ಉತ್ತಮವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ದೃಢಪಡಿಸಿದೆ.‘ಭಾರತದ ಬೇಜವಾಬ್ದಾರಿತನದಿಂದ ಬುಲೆಟ್ ರೈಲು ಯೋಜನೆ ವಿಳಂಬವಾಗುತ್ತಿದೆ’ ಎಂದು ಜಪಾನ್ನ ಮಾಜಿ ಕಾನೂನು ಸಚಿವ ಹಿಡೆಕಿ ಮಕಿಹಾರ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಸಚ

ನವದೆಹಲಿ: ಜಪಾನ್ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲ್ವೆ ಕಾರಿಡಾರ್ ಯೋಜನೆಯ ಪ್ರಗತಿ ಉತ್ತಮವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶುಕ್ರವಾರ ದೃಢಪಡಿಸಿದೆ.‘ಭಾರತದ ಬೇಜವಾಬ್ದಾರಿತನದಿಂದ ಬುಲೆಟ್ ರೈಲು ಯೋಜನೆ ವಿಳಂಬವಾಗುತ್ತಿದೆ’ ಎಂದು ಜಪಾನ್ನ ಮಾಜಿ ಕಾನೂನು ಸಚಿವ ಹಿಡೆಕಿ ಮಕಿಹಾರ ಅವರು ಹೇಳಿಕೆ ನೀಡಿದ ಬೆನ್ನಲ್ಲೇ ಸಚಿವಾಲಯದಿಂದ ಈ ಸ್ಪಷ್ಟನೆ ಬಂದಿದೆ.ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, 2030ರ ಆರಂಭದಲ್ಲಿ ಜಪಾನ್ ಇ10 ಸರಣಿಯ ರೈಲನ್ನು ಒದಗಿಸುವ ನಿರೀಕ್ಷೆಯಿದೆ ಎಂದು ಹೇಳಿದರು.ಮಕಿಹಾರ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಜೈಸ್ವಾಲ್, ‘ಅವರ ಪೋಸ್ಟ್ ಅನ್ನು ನಾವು ನೋಡಿದ್ದೇವೆ. ಇದು ವೈಯಕ್ತಿಕ ಅಭಿಪ್ರಾಯವಾಗಿದ್ದು, ವಾಸ್ತವಕ್ಕೆ ತದ್ವಿರುದ್ಧವಾಗಿದೆ‘ ಎಂದು ತಿಳಿಸಿದರು.#WATCH | Delhi: On the Mumbai–Ahmedabad High Speed Rail (MAHSR) project, MEA spokesperson Randhir Jaiswal says, "... India-Japan discussions on Mumbai-Ahmedabad high-speed train are in fact progressing well. Japan will provide the E-20 train series but only in the early 2030s.… pic.twitter.com/Pdpd2fmPM7— ANI (@ANI) July 17, 2026 ಠಾಣೆ ಜಿಲ್ಲೆಯ ಮೂಲಕ ಹಾದುಹೋಗಲಿರುವ 508 ಕಿಲೋಮೀಟರ್ ಉದ್ದದ ಮುಂಬೈ-ಅಹಮದಾಬಾದ್ ಬುಲೆಟ್ ರೈಲು ಕಾರಿಡಾರ್ ಅನ್ನು ಅಂದಾಜು ₹1.08 ಲಕ್ಷ ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ.ಭಾರತವು ತನ್ನ ಮೊದಲ ಬುಲೆಟ್ ರೈಲು ಸೇವೆಯ ಮೊದಲ ಹಂತದ ಕಾರ್ಯಾಚರಣೆಯನ್ನು 2027ರ ಆಗಸ್ಟ್ 15ರಿಂದ ಆರಂಭಿಸಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದಾರೆ.ಜಪಾನ್ ಸಚಿವ ಹೇಳಿದ್ದೇನು?‘ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದ ಮಾತುಕತೆಗಳಲ್ಲಿ ಭಾರತೀಯರು ತೀರ ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದರು. ವಿವೇಚನಾರಹಿತ ನಡವಳಿಕೆ ತೋರುತ್ತಿದ್ದ ಅವರು ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿರಲಿಲ್ಲ. ಕೆಲವೇ ಸಮಯದಲ್ಲಿ ಉಲ್ಟಾ ಹೊಡೆಯುತ್ತಿದ್ದರು’ ಎಂದು ಮಕಿಹಾರ ಆರೋಪಿಸಿದ್ದಾರೆ.‘ಚರ್ಚೆಯ ಕೊನೆಯ ಕ್ಷಣದವರೆಗೂ ಅಧಿಕಾರಿಗಳು ತಮ್ಮ ಸ್ವಾರ್ಥ ಸಾಧಿಸಿಕೊಳ್ಳಲೇ ಪ್ರಯತ್ನಿಸುತ್ತಿದ್ದರು. ಅದರಲ್ಲೂ ಸಂಬಂಧಪಟ್ಟ ಸಚಿವರ ವರ್ತನೆ ತೀರಾ ಕಳಪೆಯಾಗಿತ್ತು. ಉನ್ನತ ಹುದ್ದೆಯಲ್ಲಿರುವವರೇ ಹೀಗಿದ್ದಾಗ, ಅವರೊಂದಿಗೆ ಯಾವುದೇ ರೀತಿಯ ಸೂಕ್ತ ವ್ಯವಹಾರ ನಡೆಸಲು ಸಾಧ್ಯವೇ ಇಲ್ಲ’ ಎಂದಿದ್ದಾರೆ.‘ಈ ಯೋಜನೆಗಾಗಿ ತಮ್ಮ ಸರ್ವಸ್ವವನ್ನೂ ಧಾರೆ ಎರೆದ ಜಪಾನಿನ ಜನರ ಗೌರವದ ಸಲುವಾಗಿ ನಾನು ಇದನ್ನು ಹೇಳಲೇಬೇಕಿದೆ. ಈ ಯೋಜನೆ ವಿಳಂವಾಗಿರುವುದಕ್ಕೆ ನೂರಕ್ಕೆ ನೂರರಷ್ಟು ಕಾರಣ ಭಾರತದ ಕಡೆಯವರೇ ಎಂದು ನನಗೆ ಖಾತ್ರಿ ಇದೆ’ ಎಂದಿದ್ದಾರೆ.