ಸತತ 7ನೇ ರಾತ್ರಿಯೂ ಇರಾನ್ ಮೇಲೆ ಅಮೆರಿಕ ದಾಳಿ
ಟೆಹ್ರಾನ್: ಕದನ ವಿರಾಮ ಒಪ್ಪಂದ ಮುಗಿದಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದಾಗಿನಿಂದ ಇರಾನ್ (Iran) ಮೇಲೆ 7ನೇ ರಾತ್ರಿಯೂ ಅಮೆರಿಕ ಸೇನೆ (US Military) ದಾಳಿ ನಡೆಸಿದೆ. ಇರಾನ್ನ ಕಣ್ಗಾವಲು ತಾಣಗಳು, ಮಿಲಿಟರಿ ಲಾಜಿಸ್ಟಿಕ್ಸ್ ಮೂಲಸೌಕರ್ಯ, ಭೂಗತ ಶಸ್ತ್ರಾಸ್ತ್ರಗಳ ಸಂಗ್ರಹಣೆ ಮತ್ತು ಕಡಲ ಸಾಮರ್ಥ್ಯಗಳನ್ನು ತನ್ನ ಪಡೆಗಳು ಹೊಡೆದಿವೆ ಎಂದು ಯುಎಸ್ ಸೆಂಟ್ರಲ್ ಕಮ

ಟೆಹ್ರಾನ್: ಕದನ ವಿರಾಮ ಒಪ್ಪಂದ ಮುಗಿದಿದೆ ಎಂದು ಡೊನಾಲ್ಡ್ ಟ್ರಂಪ್ ಘೋಷಿಸಿದಾಗಿನಿಂದ ಇರಾನ್ (Iran) ಮೇಲೆ 7ನೇ ರಾತ್ರಿಯೂ ಅಮೆರಿಕ ಸೇನೆ (US Military) ದಾಳಿ ನಡೆಸಿದೆ. ಇರಾನ್ನ ಕಣ್ಗಾವಲು ತಾಣಗಳು, ಮಿಲಿಟರಿ ಲಾಜಿಸ್ಟಿಕ್ಸ್ ಮೂಲಸೌಕರ್ಯ, ಭೂಗತ ಶಸ್ತ್ರಾಸ್ತ್ರಗಳ ಸಂಗ್ರಹಣೆ ಮತ್ತು ಕಡಲ ಸಾಮರ್ಥ್ಯಗಳನ್ನು ತನ್ನ ಪಡೆಗಳು ಹೊಡೆದಿವೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ (ಸೆಂಟ್ಕಾಮ್) ಹೇಳಿದೆ. ಇದನ್ನೂ ಓದಿ: ಅಮೆರಿಕದ ಹಲವು ಜೆಟ್ಗಳನ್ನು ನಾಶಪಡಿಸಿದ್ದೇವೆ: ಇರಾನ್ ಇತ್ತ ಇರಾನ್ ಕೂಡ ಪ್ರತಿದಾಳಿ ನಡೆದಿದೆ. ಕುವೈತ್ ಸೇರಿದಂತೆ ಈ ಪ್ರದೇಶದಲ್ಲಿನ ಅಮೆರಿಕದ ಮಿತ್ರರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸಿರುವುದಾಗಿ ಇರಾನ್ ತಿಳಿಸಿದೆ. ವಿದ್ಯುತ್ ಮತ್ತು ನೀರು ಶುದ್ಧೀಕರಣ ಸ್ಥಾವರದ ಮೇಲೆ ಶತ್ರುಗಳು ದಾಳಿ ನಡೆಸಿದ್ದಾರೆ. ಇದರಿಂದಾಗಿ ಸ್ಥಾವರದ ಒಂದು ಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಮೆರಿಕ ವಿರುದ್ಧ ಇರಾನ್ ಕಿಡಿಕಾರಿದೆ. ಅಮೆರಿಕ ಪಡೆಗಳು ಇತರ ಸ್ವತ್ತುಗಳ ಜೊತೆಗೆ ಯುದ್ಧ ವಿಮಾನಗಳು, ವೈಮಾನಿಕ ಡ್ರೋನ್ಗಳು ಮತ್ತು ಯುದ್ಧನೌಕೆಗಳನ್ನು ಬಳಸಿಕೊಂಡಿವೆ ಎಂದು ತಿಳಿಸಿದೆ. ಇದನ್ನೂ ಓದಿ: ಇರಾನ್ ಮೇಲೆ ಮತ್ತೆ ದಾಳಿ – ರೈಲು, ವಿಮಾನ ನಿಲ್ದಾಣ ಟಾರ್ಗೆಟ್ ಮಾಡಿ ಹೊಡೆದ ಅಮೆರಿಕ ಕೇಂದ್ರ ನಗರವಾದ ಯಾಜ್ದ್, ಕ್ವೆಶ್ಮ್ ದ್ವೀಪ ಮತ್ತು ಜಲಸಂಧಿಯ ಪಕ್ಕದಲ್ಲಿರುವ ಬಂದರ್ ಅಬ್ಬಾಸ್ ಬಂದರಿನಲ್ಲಿ ಸ್ಫೋಟಗಳ ಸದ್ದು ಕೇಳಿಬಂದಿದೆ ಎಂದು ಇರಾನ್ ವರದಿ ಮಾಡಿದೆ. ಯುದ್ಧವನ್ನು ಕೊನೆಗೊಳಿಸುವ ಸಂಬಂಧ ಮಾತುಕತೆ ನಡೆಸಲು ಜೂನ್ನಲ್ಲಿ ಅಮೆರಿಕ ಮತ್ತು ಇರಾನ್ ಶಾಂತಿ ಒಪ್ಪಂದ ಮಾಡಿಕೊಂಡಿದ್ದವು. ಆದರೆ, ಹಾರ್ಮುಜ್ ಬಿಕ್ಕಟ್ಟಿನಿಂದಾಗಿ ಯುದ್ಧ ಮತ್ತೆ ಮುಂದುವರಿದಿದೆ.