ವೇಳಾಪಟ್ಟಿಗೆ ಕಟ್ಟುಬಿದ್ದಿರಲಿಲ್ಲ: ಕಾಶ್ಮೀರದ ನೀಟ್ ಟಾಪರ್ ಹೇಳಿದ್ದೇನು?
ನವದೆಹಲಿ: ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಕ್ಕಾಗಿನ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್–ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಪ್ರಕಟಿಸಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಭ್ಯರ್ಥಿಗಳ ಪೈಕಿ ಪ್ರಥಮ ಸ್ಥಾನ ಗಳಿಸಿರುವ ಅನಂತನಾಗ್ ಜಿಲ್ಲೆಯ ಹದಿಯಾ ನಿಸಾರ್ ಅವರು ಅಖಿಲ ಭಾ

ನವದೆಹಲಿ: ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶಕ್ಕಾಗಿನ ‘ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ’ (ನೀಟ್–ಯುಜಿ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್ಟಿಎ) ಪ್ರಕಟಿಸಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅಭ್ಯರ್ಥಿಗಳ ಪೈಕಿ ಪ್ರಥಮ ಸ್ಥಾನ ಗಳಿಸಿರುವ ಅನಂತನಾಗ್ ಜಿಲ್ಲೆಯ ಹದಿಯಾ ನಿಸಾರ್ ಅವರು ಅಖಿಲ ಭಾರತ ಮಟ್ಟದಲ್ಲಿ 99ನೇ ರ್ಯಾಂಕ್ ಪಡೆದು ಗಮನ ಸೆಳೆದಿದ್ದಾರೆ.ಮರು ಪರೀಕ್ಷೆಯ ಒತ್ತಡದ ನಡುವೆಯೂ ಪರೀಕ್ಷಾ ಸಿದ್ಧತೆ ನಡೆಸುವಾಗ ತಮ್ಮ ಮನಸ್ಸಿನಲ್ಲಿ ಯಾವುದೇ ನಕಾರಾತ್ಮಕ ಆಲೋಚನೆ ಮೂಡದಂತೆ ನೋಡಿಕೊಂಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ‘ನಾನು ಯಾವುದೇ ನಿರ್ದಿಷ್ಟ ವೇಳಾಪಟ್ಟಿಗೆ ಕಟ್ಟುಬಿದ್ದಿರಲಿಲ್ಲ. ಬದಲಿಗೆ ಪಠ್ಯಕ್ರಮಕ್ಕೆ ಅನುಗುಣವಾಗಿ ಯೋಜಿಸಿಕೊಂಡು, ಆ ಯೋಜನೆಗಳ ಪ್ರಕಾರ ಓದುತ್ತಿದ್ದೆ. ನನ್ನ ಫೋನ್ನಲ್ಲಿ ಯಾವುದೇ ಸಾಮಾಜಿಕ ಜಾಲತಾಣಗಳಿರಲಿಲ್ಲ, ಇದು ಕೂಡಾ ನನಗೆ ಸಹಾಯವಾಯಿತು’ ಎಂದು ಹದಿಯಾ ಪರೀಕ್ಷಾ ಸಿದ್ಧತೆಯ ಬಗ್ಗೆ ವಿವರಿಸಿದ್ದಾರೆ.‘ನಮ್ಮ ಪೋಷಕರು ಯಾವಾಗಲೂ ನನ್ನನ್ನು ಪ್ರೋತ್ಸಾಹಿಸುತ್ತಿದ್ದರು. ಶಿಕ್ಷಕರು ಅಧ್ಯಯನಕ್ಕೆ ಸೂಕ್ತ ಮಾರ್ಗದರ್ಶನ ನೀಡಿದರು. ನಾವೇ ಸ್ವತಃ ಶ್ರಮಪಡಬೇಕು ಅದಕ್ಕೆ ಬೇರೆ ಯಾವುದೇ ಪರ್ಯಾಯ ಮಾರ್ಗ ಅಥವಾ ನೆಪಗಳಿಲ್ಲ’ ಎಂದು ಅವರು ಹೇಳಿದ್ದಾರೆ.‘ಪ್ರತಿಯೊಬ್ಬರ ಜೀವನದ ಪಯಣವೂ ವಿಭಿನ್ನ ಮತ್ತು ವಿಶಿಷ್ಟವಾಗಿರುತ್ತದೆ. ಈ ವರ್ಷ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಸಾಧ್ಯವಾಗದವರು ತಮ್ಮ ಮೇಲೆ ನಂಬಿಕೆ ಇಟ್ಟುಕೊಂಡಿರಬೇಕು. ಅದು ಅವರನ್ನು ಯಶಸ್ಸಿನತ್ತ ಕೊಂಡೊಯ್ಯುತ್ತದೆ’ ಎಂದು ಹದಿಯಾ ಅಭಿಪ್ರಾಯಪಟ್ಟಿದ್ದಾರೆ.‘ಆಕೆಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ’ ಎಂದು ಹದಿಯಾ ತಂದೆ ನಿಸಾರ್ ಅಹ್ಮದ್ ಸಂತಸ ವ್ಯಕ್ತಪಡಿಸಿದ್ದಾರೆ.ದೇಶದಾದ್ಯಂತ 5,440 ಕೇಂದ್ರಗಳಲ್ಲಿ ನಡೆದ ನೀಟ್–ಯುಜಿ ಮರುಪರೀಕ್ಷೆಗೆ 20 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಈ ಹಿಂದೆ ನಡೆದಿದ್ದ ಪರೀಕ್ಷೆಯು ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದಿಂದಾಗಿ ರದ್ದಾಗಿದ್ದು, ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗಳಿಗೆ ಕಾರಣವಾಗಿತ್ತು.ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕುರಿತಂತೆ ಸಿಬಿಐ ತನಿಖೆ ನಡೆಸುತ್ತಿದೆ.#WATCH | Srinagar, J&K: NEET UG 2026 J&K Topper Hadiya Nisar says, “My All India Rank (AIR) is 99, and my state rank is 1, so naturally, there is an atmosphere of great joy all around. Everyone is excited—the coaching institute, my family, everyone. There is excitement… pic.twitter.com/PHmBakpv6m— ANI (@ANI) July 17, 2026