ಕನ್ನಡದ ‘ಮಿಥ್ಯ’ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ
ಬೆಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದ್ದು, ಕನ್ನಡದ ‘ಮಿಥ್ಯ’ ಪ್ರಾದೇಶಿಕ ಭಾಷೆ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಇದೇ ಚಿತ್ರದ ನಟನೆಗಾಗಿ ಅಥೀಶ್ ಶೆಟ್ಟಿ ‘ಅತ್ಯುತ್ತಮ ಬಾಲನಟ’ ಹಾಗೂ ರೂಪಶ್ರೀ ವರ್ಕಾಡಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.2024ನೇ ಸಾಲಿನ

ಬೆಂಗಳೂರು: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದ್ದು, ಕನ್ನಡದ ‘ಮಿಥ್ಯ’ ಪ್ರಾದೇಶಿಕ ಭಾಷೆ ವಿಭಾಗದಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಇದೇ ಚಿತ್ರದ ನಟನೆಗಾಗಿ ಅಥೀಶ್ ಶೆಟ್ಟಿ ‘ಅತ್ಯುತ್ತಮ ಬಾಲನಟ’ ಹಾಗೂ ರೂಪಶ್ರೀ ವರ್ಕಾಡಿ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.2024ನೇ ಸಾಲಿನಲ್ಲಿ ತಯಾರಾದ ಚಿತ್ರಗಳಿಗೆ ಪ್ರಶಸ್ತಿ ಘೋಷಣೆಯಾಗಿದೆ. ರಕ್ಷಿತ್ ಶೆಟ್ಟಿ ಅವರ ಪರಂವಃ ಪಿಕ್ಚರ್ಸ್ ಸಂಸ್ಥೆಯು ಚಿತ್ರವನ್ನು ನಿರ್ಮಿಸಿದ್ದು, ಸುಮಂತ್ ಭಟ್ ನಿರ್ದೇಶಿಸಿದ್ದರು. 11 ವರ್ಷದ ಅನಾಥ ಬಾಲಕನ ನೋವು, ಕನಸುಗಳ ಕಥೆ ಚಿತ್ರದ್ದಾಗಿದೆ.ಪ್ರಶಸ್ತಿ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ನಿರ್ದೇಶಕ ಸುಮಂತ್ ಭಟ್, ‘ಚಿತ್ರಕ್ಕೆ ಮೂರು ಪ್ರಶಸ್ತಿಗಳನ್ನು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ. ಉತ್ತಮ ಅಭಿನಯ ನೀಡಿದ್ದ ಅಥೀಶ್ಗೆ ಪ್ರಶಸ್ತಿ ಬರಬೇಕು ಎಂಬ ಅಪೇಕ್ಷೆಯಂತೂ ಇತ್ತು’ ಎಂದರು.‘ಆದರೆ, ರೂಪಶ್ರೀ ಅವರಿಗೆ ಪೋಷಕ ನಟಿ ಪ್ರಶಸ್ತಿ ಬಂದಿದ್ದು ಹೆಚ್ಚು ಖುಷಿ ನೀಡಿದೆ. ಪೋಷಕ ಪಾತ್ರವನ್ನು ಸಾಮಾನ್ಯವಾಗಿ ಗಮನಿಸುವುದಿಲ್ಲ. ಅಂಥ ಪಾತ್ರದ ಅಭಿನಯವನ್ನು ಗುರುತಿಸಿ ಮಾನ್ಯತೆ ನೀಡಿರುವುದು ಖುಷಿಯ ಸಂಗತಿ’ ಎಂದರು.‘ಇದು, ನನ್ನ ಮೊದಲ ಯತ್ನ. ಪ್ರಶಸ್ತಿಗಳ ಒಟ್ಟು ಹಿರಿಮೆಯು ಚಿತ್ರ ನಿರ್ಮಾಣಕ್ಕೆ ಮನಸ್ಸು ಮಾಡಿದ ರಕ್ಷಿತ್ ಶೆಟ್ಟಿ ಅವರಿಗೆ ಸಲ್ಲಬೇಕು. ಸಿನಿಮಾಗೆ ಬೇಕಾದ ಎಲ್ಲವನ್ನೂ ಒದಗಿಸಿಕೊಟ್ಟಿದ್ದರು. ಹಣ ಗಳಿಸದು ಎಂಬ ಅಭಿಪ್ರಾಯವಿದ್ದರೂ ಜನ ಇಂಥ ಸಿನಿಮಾ ನೋಡಬೇಕು ಎಂದು ಬಿಡುಗಡೆಗೆ ಒತ್ತು ನೀಡಿದರು. ಚಿತ್ರರಂಗದಲ್ಲಿ ಪ್ರೋತ್ಸಾಹ ಮುಖ್ಯ. ಅದು ನಮಗೆ ದಕ್ಕಿತು’ ಎಂದರು.ರೂಪಶ್ರೀ ವರ್ಕಾಡಿ, ‘ನನಗೆ ಅವಕಾಶ ನೀಡಿದ ಎಲ್ಲ ಚಿತ್ರಗಳು, ರಂಗಭೂಮಿ ನಿರ್ದೇಶಕರು ಸೇರಿ ಎಲ್ಲ ಹಿರಿಯರ ಆಶೀರ್ವಾದದ ಫಲವೇ ಈ ಪ್ರಶಸ್ತಿ’ ಎಂದು ಸಂತಸ ಹಂಚಿಕೊಂಡರು. ‘ಈ ಚಿತ್ರದ ಚಿತ್ರೀಕರಣಕ್ಕೆ ಮೊದಲು ನಿರ್ದೇಶಕರು ಪಾತ್ರದ ವಿವರಣೆ ನೀಡಿ, ಎಲ್ಲ ನಟರಿಗೂ ಕಾರ್ಯಾಗಾರ ಏರ್ಪಡಿಸಿದ್ದರು. ಅದು, ಚಿತ್ರದಲ್ಲಿ ನಟನೆ ಪರಿಣಾಮಕಾರಿ ಆಗಲು, ಪಾತ್ರದ ಮೇಲೆ ಹಿಡಿತ ಸಾಧಿಸಲು ನೆರವಾಯಿತು’ ಎಂದು ಸ್ಮರಿಸಿದರು.ಅಥೀಶ್ ಶೆಟ್ಟಿ ಮಂಗಳೂರಿನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ನ ಪಿಯು ವಿದ್ಯಾರ್ಥಿ. ನಟನೆ ಜೊತೆಗೆ ಕ್ರೀಡೆಯಲ್ಲೂ ಸಾಧನೆ ಮಾಡಿದ್ದು, ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ನಲ್ಲಿ ಪದಕ ಗೆದ್ದಿದ್ದಾನೆ. ಅಥೀಶ್ ಶೆಟ್ಟಿ ‘ಅತ್ಯುತ್ತಮ ಬಾಲನಟ‘ ಪ್ರಶಸ್ತಿ ವಿಜೇತ.ಪ್ರಶಸ್ತಿ ಬಂದದ್ದು ಖುಷಿ ನೀಡಿದೆ. ದೊಡ್ಡ ಕನಸು ಈಡೇರಿದೆ. ಇದೇ ವರ್ಷ ‘ಅತ್ಯುತ್ತಮ ಬಾಲನಟ’ ರಾಜ್ಯ ಪ್ರಶಸ್ತಿ ಕೂಡಾ ದಕ್ಕಿತ್ತು. ಚಿತ್ರದ ನಿರ್ದೇಶಕರು ತಂದೆ–ತಾಯಿಯ ಬೆಂಬಲ ಇದಕ್ಕೆ ಕಾರಣ.ರೂಪಶ್ರೀ ವರ್ಕಾಡಿ‘ಮಿಥ್ಯ’ ಚಿತ್ರದ ಪೋಸ್ಟರ್