ಮೈಸೂರು ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಅಂತರರಾಜ್ಯ ಕಳ್ಳರ ಬಂಧನ
ಮೈಸೂರು: ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಮನುಗನಹಳ್ಳಿ ನಿಸರ್ಗ ಪ್ಯಾರಡೈಸ್ ಬಡಾವಣೆಯ ನಿವಾಸಿ ಶಿವಕುಮಾರ.ಎನ್ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಿಳಿಕೆರೆ ಪೊಲೀಸರು ಬಂಧಿಸಿ, ₹ 9 ಲಕ್ಷ ಮೌಲ್ಯದ ಚಿನ್ನದ ಒಡವೆ ಹಾಗೂ ₹ 4.50 ಲಕ್ಷ ಮೌಲ್ಯದ ಕಾರು ವಶಕ್ಕೆ ಪಡೆದಿದ್ದಾರೆ.ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಕುಂಬಿಡ

ಮೈಸೂರು: ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಮನುಗನಹಳ್ಳಿ ನಿಸರ್ಗ ಪ್ಯಾರಡೈಸ್ ಬಡಾವಣೆಯ ನಿವಾಸಿ ಶಿವಕುಮಾರ.ಎನ್ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಿಳಿಕೆರೆ ಪೊಲೀಸರು ಬಂಧಿಸಿ, ₹ 9 ಲಕ್ಷ ಮೌಲ್ಯದ ಚಿನ್ನದ ಒಡವೆ ಹಾಗೂ ₹ 4.50 ಲಕ್ಷ ಮೌಲ್ಯದ ಕಾರು ವಶಕ್ಕೆ ಪಡೆದಿದ್ದಾರೆ.ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ಕುಂಬಿಡಿ ಗ್ರಾಮದ ಜಿಷ್ಣು ರಾಜಗೋಪಾಲ್.ಎಂ (31) ಹಾಗೂ ಚಿರಕ್ಕಾಡ್ ಗ್ರಾಮದ ಆಕಾಶ್.ಎಸ್ (29) ಬಂಧಿತರು.ಆರೋಪಿಗಳು ಶಿವಕುಮಾರ್ ಮನೆಯ ಹಿಂಬದಿಯ ಕಿಟಕಿಗಳನ್ನು ಒಡೆದು ಹಿಂಬಾಗಿಲಿನ ಚಿಲಕ ತೆಗೆದು ಮನೆಯ ಒಳಗಡೆ ನುಗ್ಗಿ ಮನೆಯ ಬೀರು ಮತ್ತು ಲಾಕರ್ನಲ್ಲಿಟ್ಟಿದ್ದ ₹ 72 ಗ್ರಾಂ ತೂಕದ ಚಿನ್ನಾಭರಣ ಮತ್ತು ₹ 93 ಸಾವಿರ ನಗದು ಕಳವು ಮಾಡಿದ್ದರು.ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ260718-37-1969972902
Read the complete story at Prajavani