ಸಿಂಗಪುರದಲ್ಲಿ ಭಾರತದ ಮಾವಿನಹಣ್ಣು ಉತ್ಸವ: 18ಕ್ಕೂ ಹೆಚ್ಚು ತಳಿಗಳ ಪ್ರದರ್ಶನ
ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿಸಿಂಗಪುರ: ಭಾರತದ ಉತ್ಕೃಷ್ಟ ಮಾವಿನಹಣ್ಣುಗಳನ್ನು ಪರಿಚಯಿಸುವ ಹಾಗೂ ಭಾರತ–ಸಿಂಗಪುರ ನಡುವಿನ ಕೃಷಿ ಮತ್ತು ತೋಟಗಾರಿಕಾ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಹಟ್ಟಿಪಡಿಸುವ ಉದ್ದೇಶದಿಂದ ಭಾರತೀಯ ಹೈಕಮಿಷನ್ ಸಿಂಗಪುರದಲ್ಲಿ ಮೂರು ದಿನಗಳ ಭಾರತೀಯ ಮಾವಿನಹಣ್ಣು ಉತ್ಸವವನ್ನು ಆಯೋಜಿಸಿದೆ.ಬ್ರಿಟನ್ ಹೊಸ ಪ್ರಧಾನಿ ಆ್ಯಂಡಿ ಬರ್ನ್ಹಮ್

ನಮ್ಮ ಎನ್ಆರ್ಐ ವಿಭಾಗಕ್ಕೆ ಭೇಟಿ ನೀಡಿಸಿಂಗಪುರ: ಭಾರತದ ಉತ್ಕೃಷ್ಟ ಮಾವಿನಹಣ್ಣುಗಳನ್ನು ಪರಿಚಯಿಸುವ ಹಾಗೂ ಭಾರತ–ಸಿಂಗಪುರ ನಡುವಿನ ಕೃಷಿ ಮತ್ತು ತೋಟಗಾರಿಕಾ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಹಟ್ಟಿಪಡಿಸುವ ಉದ್ದೇಶದಿಂದ ಭಾರತೀಯ ಹೈಕಮಿಷನ್ ಸಿಂಗಪುರದಲ್ಲಿ ಮೂರು ದಿನಗಳ ಭಾರತೀಯ ಮಾವಿನಹಣ್ಣು ಉತ್ಸವವನ್ನು ಆಯೋಜಿಸಿದೆ.ಬ್ರಿಟನ್ ಹೊಸ ಪ್ರಧಾನಿ ಆ್ಯಂಡಿ ಬರ್ನ್ಹಮ್ ಅಧಿಕಾರ ಸ್ವೀಕಾರ ಪ್ರಕ್ರಿಯೆ ಹೇಗೆ?ಸಿಂಗಪುರದ ಸಂಟೆಕ್ ಕನ್ವೆನ್ಷನ್ ಸೆಂಟರ್ನಲ್ಲಿ ಶುಕ್ರವಾರ ಆರಂಭವಾದ ಉತ್ಸವಕ್ಕೆ ಭಾರತದ ಹೈಕಮಿಷನರ್ ಶಿಲ್ಪಕ್ ಅಂಬುಲೆ ಚಾಲನೆ ನೀಡಿದರು. ಜುಲೈ 17ರಿಂದ 19ರವರೆಗೆ ಈ ಉತ್ಸವ ನಡೆಯಲಿದ್ದು, ಈ ಋತುವಿನ ಮೂರನೇ ಹಾಗೂ ಅತಿದೊಡ್ಡ ಮಾವಿನಹಣ್ಣು ಉತ್ಸವವಾಗಿದೆ ಎಂದು ಅವರು ಹೇಳಿದ್ದಾರೆ.ಭಾರತದ ವಿವಿಧ ರಾಜ್ಯಗಳ ಪ್ರಮುಖ ಮಾವು ಉತ್ಪಾದನಾ ಪ್ರದೇಶಗಳಿಂದ ತರಲಾದ ವಿವಿಧ ತಳಿಗಳ ಮಾವಿನಹಣ್ಣುಗಳನ್ನು ಉತ್ಸವದಲ್ಲಿ ಪ್ರದರ್ಶಿಸಲಾಗಿದೆ.ಮೆಲ್ಬೋರ್ನ್ ಕನ್ನಡ ಸಂಘದ 40 ವರ್ಷದ ಸಂಭ್ರಮದ ಅಂಗವಾಗಿ ಬ್ಯಾಡ್ಮಿಂಟನ್ ಪಂದ್ಯಾವಳಿ The Indian Mango Festival 2026 was officially inaugurated today by the High Commissioner.He visited the festival stalls, interacted with exhibitors, participating businesses and visitors, and appreciated the enthusiastic response to this celebration of India's finest… pic.twitter.com/rJwuVDLaFo— India in Singapore (@HCI_Singapore) July 17, 2026 ಚೌಸಾ, ಲಂಗ್ರಾ, ಅಲ್ಫೋನ್ಸೊ, ದಶೇರಿ, ಗುಲಾಬ್ ಜಾಮೂನ್, ಕೇಸರ್, ಬಾದಾಮಿ, ಮಲ್ಲಿಕಾ, ಅರುಣಿಕಾ, ತೋತಾಪುರಿ, ನೀಲಂ, ಬಂಗನಪಲ್ಲಿ, ಮಲಗೋವಾ, ಕಾಲಾಪಾಡು ಹಾಗೂ ರುಮಾನಿ ಸೇರಿದಂತೆ ಹಲವು ಜನಪ್ರಿಯ ತಳಿಗಳನ್ನು ವೀಕ್ಷಿಸುವುದರ ಜೊತೆಗೆ ರುಚಿ ನೋಡಿ ಖರೀದಿಸುವ ಅವಕಾಶವೂ ಸಾರ್ವಜನಿಕರಿಗೆ ಕಲ್ಪಿಸಲಾಗಿದೆ.ಉತ್ಸವದಲ್ಲಿ ಭಾರತದ ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಸಂಗೀತ ಕಾರ್ಯಕ್ರಮಗಳೂ ಇವೆ. ಅಲ್ಲದೆ, ವಿವಿಧ ರಾಜ್ಯಗಳ ಸಾಂಪ್ರದಾಯಿಕ ಆಹಾರ ಪದಾರ್ಥಗಳು, 'ರೆಡಿ-ಟು-ಈಟ್' ಭಾರತೀಯ ಆಹಾರಗಳು ಹಾಗೂ ಪ್ಯಾಕೇಜ್ ಆಹಾರ ಉತ್ಪನ್ನಗಳ ಮಳಿಗೆಗಳೂ ಇವೆ. ಸಿಂಗಪುರ ಕನ್ನಡ ಸಂಘದ 'ವಚನಾಂಜಲಿ' ಕಾರ್ಯಕ್ರಮ ಜುಲೈ 18ಕ್ಕೆ