ಬೆಂಗಳೂರು: ತಂದೆ ಕೊಂದ ಪುತ್ರನಿಗೆ ಜೀವಾವಧಿ ಶಿಕ್ಷೆ
ಬೆಂಗಳೂರು: ತಂದೆ ಕೊಂದ ಪುತ್ರನಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ 68ನೇ ಸಿಸಿಎಚ್ ನ್ಯಾಯಾಲಯವು ಆದೇಶಿಸಿದೆ.ರಾಜಾಜಿನಗರದ ನಾಲ್ಕನೇ ಬ್ಲಾಕ್ ಏಳನೇ ಮುಖ್ಯರಸ್ತೆಯ ನಿವಾಸಿ ಸಿ.ರಘು ಶಿಕ್ಷೆಗೆ ಗುರಿಯಾದ ಅಪರಾಧಿ. 2025ರ ಜನವರಿ 10ರ ರಾತ್ರಿ 8.45ರ ಸುಮಾರಿಗೆ ತಂದೆ ರಾಮಚಂದ್ರ ಅವರ ತಲೆಗೆ ರಾಡ್ನಿಂದ ಹೊಡೆದು ರಘು ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ರಾ
ಬೆಂಗಳೂರು: ತಂದೆ ಕೊಂದ ಪುತ್ರನಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ನಗರದ 68ನೇ ಸಿಸಿಎಚ್ ನ್ಯಾಯಾಲಯವು ಆದೇಶಿಸಿದೆ.ರಾಜಾಜಿನಗರದ ನಾಲ್ಕನೇ ಬ್ಲಾಕ್ ಏಳನೇ ಮುಖ್ಯರಸ್ತೆಯ ನಿವಾಸಿ ಸಿ.ರಘು ಶಿಕ್ಷೆಗೆ ಗುರಿಯಾದ ಅಪರಾಧಿ. 2025ರ ಜನವರಿ 10ರ ರಾತ್ರಿ 8.45ರ ಸುಮಾರಿಗೆ ತಂದೆ ರಾಮಚಂದ್ರ ಅವರ ತಲೆಗೆ ರಾಡ್ನಿಂದ ಹೊಡೆದು ರಘು ಕೊಲೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.ಪ್ರಕರಣದ ತನಿಖೆ ಕೈಗೊಂಡಿದ್ದ ರಾಜಾಜಿನಗರದ ಪೊಲೀಸ್ ಠಾಣೆಯ ಹಿಂದಿನ ಇನ್ಸ್ಪೆಕ್ಟರ್ ಪ್ರಮೋದ್ ಕುಮಾರ್ ಅವರು ಆರೋಪಿಯನ್ನು ಬಂಧಿಸಿದ್ದರು. ಬಳಿಕ, ಸಾಕ್ಷ್ಯಾಧಾರ ಸಂಗ್ರಹಿಸಿ ನಿಗದಿತ ಸಮಯದಲ್ಲಿ ತನಿಖೆಯನ್ನು ಪೂರ್ಣಗೊಳಿಸಿ 68ನೇ ಸಿಸಿಎಚ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.ವಾದ– ಪ್ರತಿವಾದ ಆಲಿಸಿದ ನ್ಯಾಯಾಧೀಶ ಕೆ.ಎಸ್.ಭರತ್ಕುಮಾರ್, ಅಪರಾಧಿಗೆ ಜೀವಾವಧಿ ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ಗಳಾದ ಚಿನ್ನ ವೆಂಕಟರವಣಪ್ಪ ಹಾಗೂ ಆರ್ವಿ.ಭಟ್ ವಾದ ಮಂಡಿಸಿದ್ದರು.