ಬೆಂಗಳೂರು | ರೌಡಿಶೀಟರ್ ಮನೆಗಳ ಮೇಲೆ ಪೊಲೀಸ್ ದಾಳಿ: ಎಚ್ಚರಿಕೆ
ಬೆಂಗಳೂರು: ನಗರದಲ್ಲಿ ರೌಡಿ ಚಟುವಟಿಕೆ ನಿಯಂತ್ರಿಸಲು ಹಾಗೂ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್ಲಾ ಅದಾವತ್ ಅವರ ನೇತೃತ್ವದಲ್ಲಿ ವಿವಿಧ ಠಾಣೆಗಳ ವಿಶೇಷ ಪೊಲೀಸ್ ತಂಡಗಳು, ಏಕಕಾಲಕ್ಕೆ ಹಳೆಯ ಹಾಗೂ ಸಕ್ರಿಯ ರೌಡಿಶೀಟರ್ಗಳ 150 ಮನೆಗಳ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಿದವು.ವೈಟ್ಫೀಲ್ಡ್, ವರ್ತೂರು, ಮಹದೇವಪ
ಬೆಂಗಳೂರು: ನಗರದಲ್ಲಿ ರೌಡಿ ಚಟುವಟಿಕೆ ನಿಯಂತ್ರಿಸಲು ಹಾಗೂ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ವೈಟ್ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್ಲಾ ಅದಾವತ್ ಅವರ ನೇತೃತ್ವದಲ್ಲಿ ವಿವಿಧ ಠಾಣೆಗಳ ವಿಶೇಷ ಪೊಲೀಸ್ ತಂಡಗಳು, ಏಕಕಾಲಕ್ಕೆ ಹಳೆಯ ಹಾಗೂ ಸಕ್ರಿಯ ರೌಡಿಶೀಟರ್ಗಳ 150 ಮನೆಗಳ ಮೇಲೆ ದಾಳಿ ನಡೆಸಿ, ತಪಾಸಣೆ ನಡೆಸಿದವು.ವೈಟ್ಫೀಲ್ಡ್, ವರ್ತೂರು, ಮಹದೇವಪುರ, ಕೆ.ಆರ್.ಪುರ ಹಾಗೂ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ವಿಶೇಷ ಕಾರ್ಯಾಚರಣೆ ನಡೆದಿದೆ.ಶುಕ್ರವಾರ ತಡರಾತ್ರಿಯಿಂದ ಶನಿವಾರ ಮುಂಜಾನೆಯವರೆಗೆ ಪೊಲೀಸ್ ತಂಡಗಳು ರೌಡಿಗಳ ಮನೆಗಳನ್ನು ಜಾಲಾಡಿವೆ. ಕಾರ್ಯಾಚರಣೆಗೆ 28 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಎಸಿಪಿ ಹಾಗೂ ಇನ್ಸ್ಪೆಕ್ಟರ್ ಸೇರಿ ಒಟ್ಟು 140ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.ರೌಡಿಶೀಟರ್ಗಳ ಮನೆ, ಪ್ರಸ್ತುತ ವಿಳಾಸ ಹಾಗೂ ಅವರ ಪೂರ್ವಾಪರಗಳ ಬಗ್ಗೆ ತೀವ್ರ ವಿಚಾರಣೆ ನಡೆಸಿದರು. ಕೆಲವು ರೌಡಿಗಳನ್ನು ರಸ್ತೆಯಲ್ಲೇ ತಡೆದು ಅವರ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ದಾಖಲೆ ಪತ್ರಗಳಿಲ್ಲದ ಒಟ್ಟು 13 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಗೊತ್ತಾಗಿದೆ.ದಾಳಿ ವೇಳೆ ರೌಡಿಶೀಟರ್ಗಳ ಮನೆಗಳಲ್ಲಿ ಮಾರಕಾಸ್ತ್ರಗಳು ಅಥವಾ ಅಕ್ರಮ ವಸ್ತುಗಳು ಇವೆಯೇ ಎಂಬುದರ ಕುರಿತು ತಪಾಸಣೆ ನಡೆಸಲಾಯಿತು. ಶಾಂತಿಗೆ ಭಂಗ ತರುವುದು ಹಫ್ತಾ ವಸೂಲಿ ಅಥವಾ ಯಾವುದೇ ರೀತಿಯ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬುದಾಗಿ ರೌಡಿಶೀಟರ್ಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.