ಫಿಫಾ ವಿಶ್ವಕಪ್ ಫೈನಲ್: ಎಲ್ಲಿ ನೋಡಬಹುದು, ಸಮಾರೋಪದ ವಿಶೇಷತೆಯ ಮಾಹಿತಿ ಇಲ್ಲಿದೆ..
ನ್ಯೂಯಾರ್ಕ್: 48 ತಂಡಗಳು, 104 ಪಂದ್ಯಗಳು, 39 ದಿನಗಳ ರೋಚಕ ಹಣಾಹಣಿ. ಫಿಫಾ ವಿಶ್ವಕಪ್ ಸಮರ ಕೊನೇ ಹಂತ ತಲುಪಿದೆ. ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಮಧ್ಯರಾತ್ರಿ 12.30ಕ್ಕೆ ಅರ್ಜೆಂಟೀನಾ ಮತ್ತು ಸ್ಪೇನ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ನ್ಯೂಯಾರ್ಕ್ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಫಿಫಾ ವಿಶ್ವಕಪ್ನ ಸಮಾರೋಪ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗ

ನ್ಯೂಯಾರ್ಕ್: 48 ತಂಡಗಳು, 104 ಪಂದ್ಯಗಳು, 39 ದಿನಗಳ ರೋಚಕ ಹಣಾಹಣಿ. ಫಿಫಾ ವಿಶ್ವಕಪ್ ಸಮರ ಕೊನೇ ಹಂತ ತಲುಪಿದೆ. ಭಾರತೀಯ ಕಾಲಮಾನದ ಪ್ರಕಾರ ಭಾನುವಾರ ಮಧ್ಯರಾತ್ರಿ 12.30ಕ್ಕೆ ಅರ್ಜೆಂಟೀನಾ ಮತ್ತು ಸ್ಪೇನ್ ನಡುವೆ ಫೈನಲ್ ಪಂದ್ಯ ನಡೆಯಲಿದೆ. ನ್ಯೂಯಾರ್ಕ್ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ಫಿಫಾ ವಿಶ್ವಕಪ್ನ ಸಮಾರೋಪ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗಿದ್ದು, ವಿವಿಧ ರೀತಿಯ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಪ್ರೇಕ್ಷಕರನ್ನು ರಂಜಿಸಲು ಬಿಟಿಎಸ್ ತಂಡ, ಜಸ್ಟಿನ್ ಬೈಬರ್ , ಶಕೀರಾ ಸೇರಿದಂತೆ ವಿಶ್ವದ ಪ್ರಸಿದ್ಧ ಸಂಗೀತಗಾರರು ಮತ್ತು ಸೆಲೆಬ್ರಿಟಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆಭಾರತದಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಜೀ 5ನಲ್ಲಿ ವೀಕ್ಷಿಸಬಹುದು.ಆಸ್ಕರ್ ಪ್ರಶಸ್ತಿ ವಿಜೇತ ಜಾಗತಿಕ ಸೂಪರ್ಸ್ಟಾರ್ ಜೆನ್ನಿಫರ್ ಹಡ್ಸನ್ ಫೈನಲ್ ಪಂದ್ಯಕ್ಕೂ ಮುನ್ನ ಅಮೆರಿಕದ ರಾಷ್ಟ್ರಗೀತೆ ಹಾಡಲಿದ್ದಾರೆ. ಪೋಸ್ಟ್ ಮಲೋನ್, ರಾಬಿ ವಿಲಿಯಮ್ಸ್, ಲಾರಾ ಪೌಸಿನಿ, ನಿಕೋಲ್ ಶೆರ್ಜಿಂಗರ್ ಮತ್ತು ಪ್ರಸಿದ್ಧ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಐಶೋಸ್ಪೀಡ್ ಈ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಹಾಲಿವುಡ್ ನಟ ಟಾಮ್ ಕ್ರೂಸ್ ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ.ಹಾಫ್ಟೈಮ್ ಶೋಅಮೆರಿಕದ ಸೂಪರ್ ಬೌಲ್ ಮಾದರಿಯಲ್ಲಿ ಫಿಫಾ ಇತಿಹಾಸದಲ್ಲೇ ಮೊದಲ ಬಾರಿಗೆ ಫೈನಲ್ ಪಂದ್ಯದ ಮಧ್ಯಂತದಲ್ಲಿ 11 ನಿಮಿಷಗಳ ಅದ್ದೂರಿ ಹಾಫ್ಟೈಮ್ ಶೋ ಅನ್ನು ಪರಿಚಯಿಸಲಾಗುತ್ತಿದೆ. ಕೋಲ್ಡ್ಪ್ಲೇ ಬ್ಯಾಂಡ್ನ ಕ್ರಿಸ್ ಮಾರ್ಟಿನ್ ಈ ಶೋ ಅನ್ನು ಆಯೋಜಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಕೆ-ಪಾಪ್ ಜಾಗತಿಕ ಐಕಾನ್ ಬಿಟಿಎಸ್, ಮಡೋನಾ, ಶಕೀರಾ, ಜಸ್ಟಿನ್ ಬೈಬರ್, ಬರ್ನಾ ಬಾಯ್ ಪ್ರದರ್ಶನ ನೀಡಲಿದ್ದಾರೆ ಎಂದು ವರದಿಯಾಗಿದೆ. ‘ಈ ಹಾಫ್ಟೈಮ್ ಶೋವನ್ನು ಜಾಗತಿಕವಾಗಿ ಮಕ್ಕಳ ಶಿಕ್ಷಣ ಮತ್ತು ಫುಟ್ಬಾಲ್ ಅವಕಾಶಗಳನ್ನು ವಿಸ್ತರಿಸಲು ‘ಫಿಫಾ ಗ್ಲೋಬಲ್ ಸಿಟಿಜನ್ ಎಜುಕೇಶನ್ ಫಂಡ್’ ಗಾಗಿ ಧನಸಹಾಯ ಸಂಗ್ರಹಿಸುವ ಉದ್ದೇಶಕ್ಕೆ ನಡೆಸಲಾಗುತ್ತಿದೆ’ ಎಂದು ಫಿಫಾ ಹೇಳಿದೆ.