ಲಂಚ ಕೊಡಲಿಲ್ಲವೆಂದು ಮಹಿಳೆಯನ್ನು ವಿವಸ್ತ್ರಗೊಳಿಸಿದ ಟಿಡಿಪಿ ನಾಯಕ ಬಂಧನ
ಗುಂಟೂರು(ಆಂಧ್ರ ಪ್ರದೇಶ): ₹10,000 ಲಂಚ ನೀಡಲು ನಿರಾಕರಿಸಿದ ವ್ಯಕ್ತಿಯ ಪತ್ನಿಯನ್ನು ವಿವಸ್ತ್ರಗಳಿಸಿದ್ದಲ್ಲದೆ ಆಕೆಯ ಕುಟುಂಬದ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಟಿಡಿಪಿ ನಾಯಕ ಮತ್ತು ಆತನ ಕುಟುಂಬದ 8 ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಗುಂಟೂರು ಪಟ್ಟಣದ ನಾಗರಂಪಾಲಂನಲ್ಲಿರುವ ಆಡಳಿತಾರೂಢ ಟಿಡಿಪಿ ಪಕ್ಷದ ಬೆಂಬಲಿಗನಾದ ಮಲ

ಗುಂಟೂರು(ಆಂಧ್ರ ಪ್ರದೇಶ): ₹10,000 ಲಂಚ ನೀಡಲು ನಿರಾಕರಿಸಿದ ವ್ಯಕ್ತಿಯ ಪತ್ನಿಯನ್ನು ವಿವಸ್ತ್ರಗಳಿಸಿದ್ದಲ್ಲದೆ ಆಕೆಯ ಕುಟುಂಬದ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಟಿಡಿಪಿ ನಾಯಕ ಮತ್ತು ಆತನ ಕುಟುಂಬದ 8 ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ. ಗುಂಟೂರು ಪಟ್ಟಣದ ನಾಗರಂಪಾಲಂನಲ್ಲಿರುವ ಆಡಳಿತಾರೂಢ ಟಿಡಿಪಿ ಪಕ್ಷದ ಬೆಂಬಲಿಗನಾದ ಮಲ್ಲೆಲ ವೆಂಕಟ ರಮಣ ಮೂರ್ತಿ(45) ಈ ಕೃತ್ಯ ಎಸಗಿದ್ದು, ವಾರ್ಡ್ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾನೆ.ನಗರಂಪಾಲಂನ ನಿವಾಸಿ ನಾಗೇಶ್ವರ್ ರಾವ್ ಬಳಿ ಮೂರ್ತಿ ₹10,000 ಲಂಚ ಕೇಳಿದ್ದರು. ಅವರು ಲಂಚ ಕೊಡಲು ನಿರಾಕರಿಸಿದ ಹಿನ್ನೆಲೆ ಪತ್ನಿ ಮೇಲೆ ದಾಳಿ ನಡೆಸಿದ್ದಾನೆ ಎಂದು ವರದಿ ತಿಳಿಸಿದೆ. ‘ಆರೋಪಿ ಮೂರ್ತಿ ಮತ್ತು ಅವರ ಕುಟುಂಬ ಸದಸ್ಯರನ್ನು ರಾತ್ರಿಯೇ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.ಜುಲೈ 15 ರಂದು, ರಾವ್ ತಮ್ಮ ಮನೆಯ ಮುಂದೆ ನೀರಿನ ಬೋರ್ವೆಲ್ ದುರಸ್ತಿ ಸಂಬಂಧ ಮೂರ್ತಿ ₹10,000 ಲಂಚಕ್ಕೆ ಬೇಡಿಕೆ ಇಟ್ಟಿದ್ದನು. ಆದರೆ, ಲಂಚ ನೀಡಲು ರಾವ್ ನಿರಾಕರಿಸಿದ್ದರು. ಇದರಿಂದ ಮೂರ್ತಿ ಜಗಳಕ್ಕೆ ಮುಂದಾಗಿದ್ದರು. ಬಳಿಕ, ಸ್ಥಳಕ್ಕೆ ಬಂದ ರಾವ್ ಮಗ ಅವರನ್ನು ಮನೆಯೊಳಗೆ ಕರೆದೊಯ್ದಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಮೂರ್ತಿ ತಮ್ಮ ಎಂಟು ಮಂದಿ ಸಂಬಂಧಿಕರೊಂದಿಗೆ ಮರಳಿ ಬಂದು ರಾವ್ ಮತ್ತು ಕುಟುಂಬದ ಇತರ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮೂರ್ತಿ ಬಲವಂತವಾಗಿ ರಾವ್ ಪತ್ನಿಯ ಬಟ್ಟೆ ಬಿಚ್ಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ನಂತರ, ಜುಲೈ 16 ರಂದು ರಾವ್ ಕುಟುಂಬದ ದೂರಿನ ಆಧಾರದ ಮೇಲೆ ಪೊಲೀಸರು, ಬಿಎನ್ಎಸ್ ಕಾಯ್ದೆಯ ಸೆಕ್ಷನ್ 331 (6), 74, 79, 115 (2) ಮತ್ತು 118 (1) ಹಾಗೂ ಸೆಕ್ಷನ್ 3 (5) ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಗುಂಟೂರಿನಿಂದ ವರದಿಯಾದ ಘಟನೆ ಕೇಳಿ ತೀವ್ರ ವಿಚಲಿತನಾಗಿದ್ದೇನೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.‘ಯಾವುದೇ ಮಹಿಳೆಗೆ ಮಾಡುವ ಅಪಮಾನ ಸ್ವೀಕಾರಾರ್ಹವಲ್ಲ. ಅದಕ್ಕೆ ನಮ್ಮ ಸಮಾಜದಲ್ಲಿ ಜಾಗವಿಲ್ಲ. ಈ ಕುರಿತಂತೆ ತುರ್ತಾಗಿ ನಿರ್ದಾಕ್ಷಿಣ್ಯ ಕ್ರಮಕ್ಕೆ ಆದೇಶಿಸಿದ್ದೇನೆ. ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಇದರಲ್ಲಿ ಭಾಗಿಯಾದ ಪಕ್ಷದ ಕಾರ್ಯಕರ್ತನನ್ನು ಅಮಾನತು ಮಾಡಲಾಗಿದೆ’ ಎಂದು ತಿಳಿಸಿದ್ದಾರೆ. ಮಫ್ತಿಯಲ್ಲಿ ಬಂದು ಹೊತ್ತೊಯ್ದರು: ಪೊಲೀಸರಿಂದ ವಾಂಗ್ಚೂಕ್ ಸ್ಥಳಾಂತರ ಹೀಗಿತ್ತುವಾಂಗ್ಚೂಕ್ ಅವರನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ದದ್ದು ತಪ್ಪು: ರಾಹುಲ್