ಬಿಡದಿ ಟೌನ್ಶಿಪ್; ಅನಿತಾ ಕುಮಾರಸ್ವಾಮಿ, ನಿಖಿಲ್ಗೆ ಸೇರಿದ ಭೂಮಿಗೂ ಅಧಿಸೂಚನೆ
– ದಾಖಲೆ ವೈರಲ್ ಮಾಡಿದ ಕಾಂಗ್ರೆಸ್ ರಾಮನಗರ: ಬಿಡದಿ ಟೌನ್ಶಿಪ್ (Bidadi Township) ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಪತ್ನಿ ಹಾಗೂ ಪುತ್ರನಿಗೆ ಸೇರಿದ ಭೂಮಿಗೂ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದ ಭೂಮಿಯೂ ಈ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯ ಅಂ

– ದಾಖಲೆ ವೈರಲ್ ಮಾಡಿದ ಕಾಂಗ್ರೆಸ್ ರಾಮನಗರ: ಬಿಡದಿ ಟೌನ್ಶಿಪ್ (Bidadi Township) ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಪತ್ನಿ ಹಾಗೂ ಪುತ್ರನಿಗೆ ಸೇರಿದ ಭೂಮಿಗೂ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದ ಭೂಮಿಯೂ ಈ ಯೋಜನೆಗಾಗಿ ಭೂಸ್ವಾಧೀನ ಪ್ರಕ್ರಿಯೆಯ ಅಂತಿಮ ಅಧಿಸೂಚನೆ ವ್ಯಾಪ್ತಿಗೆ ಒಳಪಟ್ಟಿದೆ. ಇದನ್ನೇ ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು, ಹೆಚ್ಡಿಕೆ ಕುಟುಂಬದ ಭೂ ದಾಖಲೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದ್ದು, ಜೆಡಿಎಸ್ ವಿರುದ್ಧ ಕಿಡಿಕಾರಿದೆ. ಇದನ್ನೂ ಓದಿ: ತಾರಕಕ್ಕೇರಿದ ಬಿಡದಿ ಭೂಯುದ್ಧ – ಬಿಜೆಪಿ ಬಿಟ್ಟು ಜೆಡಿಎಸ್ ಪ್ರತ್ಯೇಕ ಪಾದಯಾತ್ರೆ ಬಿಡದಿ ಹೋಬಳಿಯ ಹೊಸೂರು ಹಾಗೂ ಬನ್ನಿಗಿರಿ ಗ್ರಾಮಗಳ ಸರ್ವೇ ನಂಬರ್ಗಳಲ್ಲಿ ಹೆಚ್.ಡಿ.ಕುಮಾರಸ್ವಾಮಿ ಕುಟುಂಬದ ಒಟ್ಟು 35 ಎಕರೆ ಜಮೀನು ಯೋಜನೆಗೆ ಒಳಪಟ್ಟಿದೆ. ಅನಿತಾ ಕುಮಾರಸ್ವಾಮಿ (Anita Kumaraswamy) ಹೆಸರಿನಲ್ಲಿರುವ 31 ಎಕರೆ ಜಮೀನು, ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೆಸರಿನಲ್ಲಿರುವ 4 ಎಕರೆ ಜಮೀನಿಗೂ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಸದ್ಯ ಬಿಡದಿ ಯೋಜನೆಗೆ ಜೆಡಿಎಸ್ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದು, ರೈತರ ಹೋರಾಟದ ಪರವಾಗಿ ನಿಂತಿದೆ. ಆದರೆ, ಕಾಂಗ್ರೆಸ್ ಈ ನಿಲುವನ್ನು ಕಟುವಾಗಿ ಟೀಕಿಸಿದೆ. ಹೆಚ್ಡಿಕೆ ಕುಟುಂಬಕ್ಕೆ ರೈತರ ಮೇಲೆ ಯಾವುದೇ ನೈಜ ಕಾಳಜಿಯಿಲ್ಲ. ತಮ್ಮ ಸ್ವಂತ ಕುಟುಂಬದ 35 ಎಕರೆ ಜಮೀನು ಸರ್ಕಾರದ ವಶವಾಗುತ್ತದೆ ಎಂಬ ಏಕೈಕ ವೈಯಕ್ತಿಕ ಹಿತಾಸಕ್ತಿಯಿಂದ ಈ ಯೋಜನೆಯನ್ನು ವಿರೋಧಿಸುತ್ತಿದ್ದಾರೆ ಹೊರತು, ಬಡ ರೈತರ ಉದ್ದಾರಕ್ಕಾಗಿ ಅಲ್ಲ ಎಂದು ಕಾಂಗ್ರೆಸ್ ಟೀಕಿಸಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಇಳಿಸಲು ಹೈಕಮಾಂಡ್ಗೆ ಕೊಟ್ಟ ಭರವಸೆಯಂತೆ ಟೌನ್ಶಿಪ್ – ಡಿಕೆಶಿ ವಿರುದ್ಧ ಹೆಚ್ಡಿಡಿ ಸ್ಫೋಟಕ ಆರೋಪ