ಬೆಂಗಳೂರು: ಬಿಟ್ಟುಹೋದ ವಾಹನ ತೆರವಿಗೆ ಚಾಲನೆ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ರಸ್ತೆಗಳಲ್ಲಿ ದೀರ್ಘಾವಧಿಗೆ ಬಿಟ್ಟುಹೋದ ವಾಹನಗಳನ್ನು ತೆರವು ಮಾಡುವ ಕಾರ್ಯಾಚರಣೆಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಚಾಲನೆ ನೀಡಿದರು. ರಸ್ತೆಗಳಲ್ಲಿ ಬಿಟ್ಟುಹೋಗಿರುವ ವಾಹನಗಳಿಗೆ ಜುಲೈ 10ರಿಂದ ನೋಟಿಸ್/ಸ್ಟಿಕರ್ ಅಂಟಿಸಲಾಗುತ್ತಿದೆ. ಇದಾದ ಏಳು ದಿನದ

ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳ ರಸ್ತೆಗಳಲ್ಲಿ ದೀರ್ಘಾವಧಿಗೆ ಬಿಟ್ಟುಹೋದ ವಾಹನಗಳನ್ನು ತೆರವು ಮಾಡುವ ಕಾರ್ಯಾಚರಣೆಗೆ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಶನಿವಾರ ಚಾಲನೆ ನೀಡಿದರು. ರಸ್ತೆಗಳಲ್ಲಿ ಬಿಟ್ಟುಹೋಗಿರುವ ವಾಹನಗಳಿಗೆ ಜುಲೈ 10ರಿಂದ ನೋಟಿಸ್/ಸ್ಟಿಕರ್ ಅಂಟಿಸಲಾಗುತ್ತಿದೆ. ಇದಾದ ಏಳು ದಿನದ ನಂತರ ತೆರವು ಮಾಡಲಾಗುತ್ತಿದೆ. ಆ ಪ್ರಕ್ರಿಯೆಗೆ ಶನಿವಾರ ಚಾಲನೆ ದೊರೆಯಿತು.ಕೇಂದ್ರ ನಗರ ಪಾಲಿಕೆ ಗಾಂಧಿನಗರ ವಿಧಾನಸಭಾ ಕ್ಷೇತ್ರದ ವರಾಹಿ ದೇವಸ್ಥಾನದ ಬಳಿ ಬಿಡಾಡಿ ವಾಹನಗಳ ಟೋಯಿಂಗ್ ಕಾರ್ಯಕ್ಕೆ ಕೃಷ್ಣ ಬೈರೇಗೌಡ ಸಾಂಕೇತಿಕವಾಗಿ ಚಾಲನೆ ನೀಡಿದರು. ಶಾಸಕ ದಿನೇಶ್ ಗುಂಡೂರಾವ್ ಉಪಸ್ಥಿತರಿದ್ದರು.‘ಅಸ್ತ್ರಂ’ ತಂತ್ರಾಂಶದಲ್ಲಿ ಸಂಚಾರ ಪೊಲೀಸರು ಈವರೆಗೆ 2,751 ವಾಹನಗಳನ್ನು ಗುರುತಿಸಿದ್ದು, ಸಾರ್ವಜನಿಕರು 1,498 ವಾಹನಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ, ನಗರದಲ್ಲಿ 4,249 ವಾಹನಗಳು ರಸ್ತೆಗಳಲ್ಲಿ ಹಲವು ದಿನಗಳಿಂದ ನಿಂತಿರುವುದನ್ನು ಗುರುತಿಸಲಾಗಿದೆ.ಐದು ನಗರ ಪಾಲಿಕೆಗಳಲ್ಲಿ ಈವರೆಗೆ 1,034 ವಾಹನಗಳಿಗೆ ನೋಟಿಸ್ಗಳನ್ನು ಅಂಟಿಸಲಾಗಿದ್ದು, 72 ವಾಹನಗಳ ಮಾಲಿಕರು ದಂಡ ಪಾವತಿಸಿ ವಾಹನಗಳನ್ನು ಬಿಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.